ಜಲಪಾಯಗುಡಿ (ಬಂಗಾಲ) ಇಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿ ವಿಸರ್ಜನೆ ನಡೆಯುತ್ತಿರುವಾಗ ಅನಿರೀಕ್ಷಿತವಾಗಿ ನದಿಯಲ್ಲಿ ಪ್ರವಾಹ ಬಂದಿದ್ದರಿಂದ ೧೦ ಜನರ ಸಾವು
ಇಲ್ಲಿ ಅಕ್ಟೋಬರ್ ೫ ರಂದು ಶ್ರೀ ದುರ್ಗಾದೇವಿ ಮೂರ್ತಿಯ ವಿಸರ್ಜನೆಗಾಗಿ ರಾತ್ರಿ ೯ ಗಂಟೆ ಸುಮಾರಿಗೆ ಮಾಲ ನದಿಯ ತೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಅಲ್ಲಿ ವಿಸರ್ಜನೆಗಾಗಿ ೪೦ ಮೂರ್ತಿಗಳನ್ನು ತರಲಾಗಿತ್ತು. ಆಗ ಅನಿರೀಕ್ಷಿತವಾಗಿ ನದಿಗೆ ಪ್ರವಾಹ ಬಂದಿದ್ದು. ಇದರಲ್ಲಿ ಅನೇಕ ಜನರು ಕೊಚ್ಚಿ ಹೋದರು.