ಭಾರತದ ಜೊತೆಗೆ ಮತ್ತೆ ವ್ಯಾಪಾರ ವಹಿವಾಟ ನಡೆಸಲು ಪಾಕಿಸ್ತಾನದ ಘೋಷಣೆ !

ನೆರೆ ಮತ್ತು ಬೆಲೆ ಏರಿಕೆಯ ಪರಿಣಾಮ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಬಂದಿರುವ ನೆರೆಹಾವಳಿಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿವೆ. ಹಾಗೂ ಬೆಲೆ ಏರಿಕೆ ಕೂಡ ಪ್ರಚಂಡವಾಗಿ ಹೆಚ್ಚಾಗಿದೆ. ತರಕಾರಿಯ ಬೆಲೆ ಗಗನಕ್ಕೇರಿದೆ. ಆದ್ದರಿಂದ ಪಾಕಿಸ್ತಾನ ಸರಕಾರ ಭಾರತದಿಂದ ತರಕಾರಿ ಮತ್ತು ಇತರ ಆಹಾರ ಪದಾರ್ಥ ಆಮದು ಮಾಡಿಕೊಳ್ಳುವ ಯೋಚನೆ ಮಾಡುತ್ತಿದೆ, ಎಂದು ಪಾಕಿಸ್ತಾನದ ಹಣಕಾಸುಸಚಿವರು ಮಾಹಿತಿ ನೀಡಿದರು. ಹಾಗೂ ‘ಭಾರತದ ಜೊತೆಗೆ ವ್ಯಾಪಾರ ವಹಿವಾಟನ್ನು ಪುನರಾರಂಭ ಮಾಡಲು ಅನೇಕ ದಿನಗಳಿಂದ ಪ್ರಯತ್ನಿಸುತ್ತಿದ್ದೇವೆ’, ಎಂದು ಕೂಡ ಹೇಳಿದರು. ಈ ಮೊದಲು ಲಾಹೋರ್ ಮಾರುಕಟ್ಟೆ ಸಮಿತಿಯ ಸಚಿವ ಷಹಜಾದ ಚೀಮಾ ಇವರು ಕೂಡ ಭಾರತದಿಂದ ಈರುಳ್ಳಿ ಮತ್ತು ಟೊಮೆಟೊ ಆಮದು ಮಾಡಿಕೊಳ್ಳಬಹುದು. ಎಂದು ಹೇಳಿದ್ದರು, ಎಂದು ಹೇಳಲಾಗುತ್ತದೆ. ಮಾರ್ಚ್ ೨೦೨೧ ರಲ್ಲಿ ಪಾಕಿಸ್ತಾನದ ಹಣಕಾಸು ಸಮನ್ವಯ ಸಮಿತಿಯಿಂದ ಅಟಾರಿ ಗಡಿಯಿಂದ ಭಾರತದಿಂದ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳಲು ಅನುಮತಿ ನೀಡುವ ನಿರ್ಣಯ ತೆಗೆದುಕೊಂಡುತ್ತು; ಆದರೆ ಕೆಲವು ದಿನದಲ್ಲಿ ಇಲ್ಲಿಯ ರಾಜಕೀಯ ಪಕ್ಷದ ವಿರೋಧದಿಂದ ನಿರ್ಣಯ ರದ್ದುಪಡಿಸಲಾಗಿತ್ತು.

ಸಂಪಾದಕೀಯ ನಿಲುವು

ಪಾಕಿಸ್ತಾನಕ್ಕೆ ಸಂಕಷ್ಟ ಕಾಲದಲ್ಲಿ ಭಾರತದ ನೆನಪು ಬರುತ್ತದೆ; ಆದರೆ ಜಿಹಾದಿ ಭಯೋತ್ಪಾದನೆ ನಿಲ್ಲಿಸುವ ವಿಚಾರ ಪಾಕಿಸ್ತಾನಕ್ಕೆ ಏಕೆ ಬರುವುದಿಲ್ಲ ? ಭಯೋತ್ಪಾದನೆ ನಿಲ್ಲದೆ ಭಾರತವು ಪಾಕಿಸ್ತಾನಕ್ಕೆ ಯಾವುದೇ ಸಹಾಯ ಮಾಡುವ ಗಾಂಧೀಗಿರಿ ಮಾಡಬಾರದು !

ಹಾವಿಗೆ ಎಷ್ಟೇ ಹಾಲು ಕುಡಿಸಿದರು ಅದು ವಿಷವೇ ಕಾರುವುದು ಎನ್ನುವುದು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು !