೨೦೩೦ ರಲ್ಲಿ ಚಂದ್ರನ ಕಕ್ಷೆಯಲ್ಲಿ ಬದಲಾವಣೆಯಾಗಿ ಪೃಥ್ವಿಯ ಮೇಲೆ ನೆರೆಯ ಸ್ಥಿತಿ ನಿರ್ಮಾಣವಾಗಬಹುದು ! – ನಾಸಾ

ವಾಶಿಂಗ್ಟನ್(ಅಮೇರಿಕಾ) – ಜಗತ್ತಿನ ಹವಾಮಾನ ಬದಲಾವಣೆಯಿಂದ ಪೃಥ್ವಿಯ ಮೇಲಿನ ವಾತಾವರಣದ ಮೇಲೆ ಪರಿಣಾಮ ಆಗುತ್ತಿದೆ. ಅಂಟಾರ್ಟಿಕಾದಲ್ಲಿ ಮಂಜುಗಡ್ಡೆಯು ಕರಗುತ್ತಿದೆ. ಇದರಿಂದ ಸಮುದ್ರ ದಡದಲ್ಲಿನ ಪಟ್ಟಣಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಇಂತಹ ಪರಿವರ್ತನೆ ಚಂದ್ರನ ಮೇಲೆಯೂ ಆಗಬಲ್ಲದು. ೨೦೩೦ರಲ್ಲಿ ಹವಾಮಾನ ಬದಲಾವಣೆಯಿಂದ ಸಮುದ್ರದ ನೀರಿನ ಮಟ್ಟ ಹೆಚ್ಚಾಗುವುದರೊಂದಿಗೆ ಚಂದ್ರನು ತನ್ನ ಕಕ್ಷೆಯಿಂದ ಪಕ್ಕದಲ್ಲಿ ಸರಿಯಲಿದ್ದಾನೆ. ಇದರಿಂದ ವಿನಾಶಕಾರಿ ನೆರೆ ಬರುವ ಸಾಧ್ಯತೆಗಳಿವೆ, ಎಂದು ಅಮೇರಿಕಾದ ಬಾಹ್ಯಾಕಾಶ ಸಂಶೋಧನ ಸಂಸ್ಥೆ ‘ನಾಸಾ’ವು ತನ್ನ ವರದಿಯಲ್ಲಿ ತಿಳಿಸಿದೆ.

ಈ ವರದಿಯಲ್ಲಿ, ಸಮುದ್ರದ ಅಲೆ ದಿನನಿತ್ಯದ ತುಲನೆಗಿಂತ ೨ ಅಡಿ ಹೆಚ್ಚು ಎತ್ತರವಾಗಿರಲಿದೆ. ಮನೆಯಲ್ಲಿ ನೀರು ತುಂಬಬಹುದು. ಇಂತಹ ಸ್ಥಿತಿಯು ಮುಂದಿನ ೧೦ ವರ್ಷಗಳಲ್ಲಿ ಆಗಾಗ ಸಂಭವಿಸಬಹುದು ಎಂದು ಹೇಳಿದೆ.