ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ 17 ಜನರ ಸಾವು ಮತ್ತು 100 ಕ್ಕೂ ಹೆಚ್ಚು ಜನರು ನಾಪತ್ತೆ

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶ ರಾಜ್ಯದಲ್ಲಿ ಧಾರಾಕಾರ ಮಳೆಯಿಂದಾಗಿ ಇದುವರೆಗೆ 17 ಜನರು ಸಾವನ್ನಪ್ಪಿದ್ದಾರೆ ಹಾಗೂ ನೂರಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ವಾಯುದಳ, ‘ಎಸ್.ಟಿ.ಆರ್.ಎಫ್.’ ಮತ್ತು ಅಗ್ನಿಶಾಮಕ ದಳದ ಸಹಾಯದಿಂದ ಪ್ರವಾಹದ ನೀರಿನಲ್ಲಿ ಸಿಕ್ಕಿರುವ ಅನೇಕ ಜನರನ್ನು ರಕ್ಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನಮೋಹನ ರೆಡ್ಡಿ ಇವರೊಂದಿಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದಾರೆ ಮತ್ತು ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದು `ರಾಜ್ಯಕ್ಕೆ ಎಲ್ಲ ರೀತಿಯ ಸಹಾಯ ಮಾಡಲಾಗುವುದು’, ಎಂದು ಆಶ್ವಾಸನೆ ನೀಡಿದ್ದಾರೆ.

1. ಧಾರಾಕಾರ ಮಳೆಯಿಂದಾಗಿ ನದಿ ಮತ್ತು ಕೆರೆಗಳು ತುಂಬಿ ಬಂದಿದೆ. ಆದ್ದರಿಂದ ಅನೇಕ ಗ್ರಾಮಗಳು ಪ್ರವಾಹದಿಂದ ಸುತ್ತುವರೆದಿದ್ದು, ಕೆಲವು ಸ್ಥಳಗಳಲ್ಲಿ ರಸ್ತೆಯು ಮುಚ್ಚಿ ಹೋಗಿವೆ. ತಿರುಮಲದಲ್ಲಿನ ಬೆಟ್ಟಗಳಿಂದ ಹರಿಯುವ ನೀರು ರೌದ್ರ ರೂಪ ತಾಳಿರುವುದು ಕಂಡು ಬರುತ್ತದೆ. ಪ್ರವಾಹದಿಂದಾಗಿ ತಿರುಪತಿಯ ಹೊರಗಿರುವ ಸ್ವರ್ಣಮುಖಿ ನದಿ ತುಂಬಿ ಬಂದಿದೆ. ಹೆಚ್ಚಿರುವ ಪ್ರವಾಹ ಪರಿಸ್ಥಿತಿ ಎಷ್ಟು ಕಠಿಣವಾಗಿದೆ ಎಂದರೆ ರಕ್ಷಣಾ ಕಾರ್ಯಕ್ಕಾಗಿ ಹೆಲಿಕಾಪ್ಟರ್ ಮತ್ತು ಜೆಸಿಬಿಯ ಸಹಾಯ ಪಡೆಯಬೇಕಾಗುತ್ತಿದೆ.

2. ಪ್ರವಾಹದಿಂದಾಗಿ ಕಡಪ್ಪಾ ಜಿಲ್ಲೆಯ ಅನ್ನಮಯ್ಯ ಪರಿಯೋಜನೆಯಲ್ಲಿ ಆಣೆಕಟ್ಟು ಅನಿರೀಕ್ಷಿತವಾಗಿ ಒಡೆದಿರುವುದರಿಂದ ಕಂಡು ಬಂದಿದೆ. ಕಾರ್ತಿಕ ಪೂರ್ಣಿಮೆಯ ದಿನದಂದು ಇಲ್ಲಿಯ ಶಿವನ ದೇವಸ್ಥಾನದಲ್ಲಿ ಪೂಜೆ ನಡೆಸಲು ಹೋಗಿದ್ದ ಭಕ್ತರು ಅನಿರೀಕ್ಷಿತವಾಗಿ ಪ್ರವಾಹದಲ್ಲಿ ಸಿಲುಕಿದ್ದಾರೆ, ಇನ್ನು ಕೆಲವರು ಕೊಚ್ಚಿ ಹೋಗಿದ್ದಾರೆ. ನಾಪತ್ತೆಯಾದ ಜನರನ್ನು ಶೋಧಿಸಿ ರಕ್ಷಿಸುವ ಕಾರ್ಯ ನಡೆಯುತ್ತಿದೆ.