ಮಹಾರಾಷ್ಟ್ರದ ಚಿಪಳೂಣನಲ್ಲಿ ಪ್ರವಾಹ ಪೀಡಿತರಿಗಾಗಿ ಹಿಂದೂ ಜನಜಾಗೃತಿ ಸಮಿತಿ, ಸನಾತನ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ-ಸಂಘಟನೆಗಳ ವತಿಯಿಂದ ‘ಸಹಾಯತಾ ಅಭಿಯಾನ’ !

ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಪ್ರವಾಹ ಸಂತ್ರಸ್ತರಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿರುವುದು

ಮಹಾರಾಷ್ಟ್ರದ ರತ್ನಾಗಿರಿಯ ಚಿಪಳೂಣನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ನಗರ ಮತ್ತು ಕೆಲವು ಗ್ರಾಮೀಣ ಪ್ರದೇಶಗಳು ತೀವ್ರವಾಗಿ ಹಾನಿಗೊಳಗಾಗಿದೆ. ಅನೇಕರ ಮನೆಗಳಲ್ಲಿ ನೀರು ಬಂದಿದ್ದರಿಂದ ಎಲ್ಲಾ ಗೃಹೋಪಯೋಗಿ ವಸ್ತುಗಳು ಹಾಳಾದವು. ಇಂತಹ ಸಮಯದಲ್ಲಿ, ಸಾಮಾಜಿಕ ಬದ್ಧತೆಯ ದೃಷ್ಟಿಯಿಂದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು, ಹಿಂದೂ ಜನಜಾಗೃತಿ ಸಮಿತಿ, ಸನಾತನ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ-ಸಂಘಟನೆಗಳ ವತಿಯಿಂದ ಚಿಪಳೂಣನಲ್ಲಿ ಪ್ರವಾಹ ಸಂತ್ರಸ್ತರಿಗೆ ಆಹಾರದ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಇಲ್ಲಿಯವರೆಗೆ, ೨,೩೦೨ ಜನರಿಗೆ ಎಣ್ಣೆ, ಅಕ್ಕಿ, ಹಿಟ್ಟು, ಮಸಾಲೆಗಳು, ಈರುಳ್ಳಿ, ಆಲೂಗಡ್ಡೆ, ಮೇಣದ ಬತ್ತಿಗಳು, ಬೆಂಕಿ ಪೊಟ್ಟಣಗಳು ಸೇರಿದಂತೆ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ.

ಚಿಪಳೂಣ ಪಟ್ಟಣದ ಮುರಾದಪುರ ಭೋಯಿವಾಡಿ, ಮುರಾದಪುರ ಸಾಯಿ ಮಂದಿರ ವಿಭಾಗ, ಶಂಕರವಾಡಿ ಮತ್ತು ಗ್ರಾಮೀಣ ಭಾಗದ ದಾದರ ಮತ್ತು ಕಾದವಾಡದ ೨ ಪ್ರದೇಶಗಳಲ್ಲಿ ಸೇತುವೆ ಕುಸಿತವು ಪರಿಹಾರ ಕಾರ್ಯದಲ್ಲಿ ಅಡಚಣೆ ಉಂಟಾಗಿತ್ತು. ಅದಕ್ಕಾಗಿ ಪರ್ಯಾಯ ಮಾರ್ಗವಾಗಿ ನೆರವು ಒದಗಿಸಲಾಗಿದೆ. ಅದೇ ರೀತಿ ಭೂಕುಸಿತದಿಂದ ಸ್ಥಳಾಂತರಗೊಂಡ ಓವಳಿ (ಸುಕಿವಲಿವಾಡಿ) ಅದೇ ರೀತಿ ದಾದರ, ದಾದರ ಕಾದವಡದಲ್ಲಿ ಮನೆಗಳು ಕೊಚ್ಚಿಹೋದ ಕುಟುಂಬಗಳಿಗೆ ಸಹಾಯವನ್ನು ಒದಗಿಸಲಾಯಿತು. ಜುಲೈ 28 ರಂದು ಸುಸಂಸ್ಕೃತ ಗ್ರೂಪ್ ಮಿರಜೊಳೆ, ರತ್ನಾಗಿರಿ ಹಾಗೂ ಶ್ರೀನಗರ ಉತ್ಸವ ಮಂಡಳಿ, ರತ್ನಾಗಿರಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಜಂಟಿಯಾಗಿ ಅನುಕ್ರಮವಾಗಿ ದಳವಟಣೆ ಬಾಗವಾಡಿ ಮತ್ತು ಸಮರ್ಥನಗರ ಸತಿ ಇಲ್ಲಿ ಸಾಹಿತ್ಯವನ್ನು ವಿತರಿಸಲಾಯಿತು. ಜುಲೈ 29 ರಂದು, ಚಿಪಳೂಣ ತಾಲೂಕಿನ ಮಜರೆ ಕಾಶಿಯ ಭುವಡವಾಡಿ, ಸಾಳುಂಖೆವಾಡಿ, ಪೆಡಣೆಕರವಾಡಿ ಮತ್ತು ಚಿಪಳುಣ ಪಟ್ಟಣದ ಕುಂಭಾರವಾಡಿ ಪ್ರದೇಶಗಳಲ್ಲಿ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲಾಯಿತು. ಈ ಸಮಯದಲ್ಲಿ, ಪ್ರವಾಹ ಸಂತ್ರಸ್ತರಿಗೆ ಅನೌಪಚಾರಿಕವಾಗಿ ಮಾತನಾಡಿ ಧೈರ್ಯ ತುಂಬಲಾಯಿತು.