ನ್ಯಾಯಾಲಯವು ಆರೋಪಿಗಳಿಗೆ ಒಂದೇ ದಿನದಲ್ಲಿ ಜಾಮೀನು ನೀಡಿದ್ದರಿಂದ ಮಾಜಿ ಸೈನಿಕರ ಸಂಘಟನೆಯ ಅಸಮಧಾನ
|
ಮಡಿಕೇರಿ – ಇಲ್ಲಿ ಕೆಲವು ದಿನಗಳ ಹಿಂದೆ ಆಶೋಕ ಕುಮಾರ ಈ ಸೈನಿಕನ ಮೇಲೆ ಮತ್ತು ಆತನ ಕುಟುಂಬದ ಮೇಲೆ ಚಿಕ್ಕ ಅಪಘಾತದಿಂದ ಕೆಲವು ಮತಾಂಧರು ಮಾರಣಾಂತಿಕ ಹಲ್ಲೆ ಮಾಡಿದ್ದರು. ಹಲ್ಲೆಯ ನಂತರ ಗಂಭೀರವಾಗಿ ಗಾಯಗೊಂಡಿರುವ ಕೆಲವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
(ಸೌಜನ್ಯ : ವಿಜಯಕರ್ನಾಟಕ)
ಈ ಪ್ರಕರಣಕ್ಕೆ ಸಂಬಂಧಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ ನಂತರ ನ್ಯಾಯಾಲಯವು ಅವರಿಗೆ ಒಂದೇ ದಿನದಲ್ಲಿ ಜಾಮೀನು ನೀಡಿದೆ. ಈ ಪ್ರಕರಣದಿಂದಾಗಿ ಆಕ್ರೋಶಗೊಂಡ ಮಾಜಿ ಸೈನಿಕರು ಮತ್ತು ನಾಗರಿಕರು ಜುಲೈ ೩೦ ರಂದು ಶಾಂತಿಯುತ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಬೃಹತ್ ಪ್ರಮಾಣದಲ್ಲಿ ಜನರು ಭಾಗವಹಿಸಿದರು.
#NewsAlert | #Karnataka: Massive protest in Madikeri over alleged attack on an Army jawan & his family.
TIMES NOW’s Deepak Bopanna with details. pic.twitter.com/Jxnck94uuB
— TIMES NOW (@TimesNow) July 30, 2021
ಮಾಜಿ ಸೈನಿಕರ ಸಂಘಟನೆಯು, ಇಂದು ಸಮಾಜದಲ್ಲಿ ಸೈನಿಕರ ಕುಟುಂಬಕ್ಕೆ ಯಾರೂ ಗೌರವಿಸುತ್ತಿಲ್ಲ. ನಾವು ‘ದೇವರು’ ಎಂದು ಶ್ರದ್ಧೆ ಇಟ್ಟಿರುವ ನ್ಯಾಯಾಲಯವೂ ನಮ್ಮ ಸೈನಿಕರ ಮೇಲೆ ಮಾಡಲಾದ ಹಲ್ಲೆಯ ಆರೋಪಿಗಳಿಗೆ ಕೇವಲ ಒಂದೇ ದಿನದಲ್ಲಿ ಜಾಮೀನು ನೀಡಿತು. ನ್ಯಾಯಾಲಯವೇ ನಮಗೆ ನ್ಯಾಯ ನೀಡದಿದ್ದರೆ, ನಾವು ಯಾರ ಬಳಿ ವಿಚಾರಿಸಬೇಕು ? ನ್ಯಾಯ ಯಾರ ಬಳಿ ಕೇಳಬೇಕು ? ಇದಕ್ಕಾಗಿ ನಮಗೆ ಒಗ್ಗಟ್ಟಾಗಬೇಕಾಗಿದೆ. ಏಳಿ ಎದ್ದೇಳಿ ಸೈನಿಕರೇ ಮತ್ತು ಮಾಜಿ ಸೈನಿಕರ ಕುಟುಂಬದವರೇ, ನಾಳೆ ನಿಮಗೂ ಇದೇ ಪರಿಸ್ಥಿತಿ ಬರಬಹುದು, ಎಂದು ಈ ಸಂಘಟನೆಯು ಕರೆ ನೀಡಿತು.