ಭಾರತೀಯ ಸೇನಾಧಿಕಾರಿಗಳ ಮೊಬೈಲ್ ನಲ್ಲಿ ‘ವೈರಸ್’ ಕಳಿಸಿ ಸೂಕ್ಷ್ಮ ಮಾಹಿತಿ ಕದಿಯುತ್ತಿದ್ದ ಪಾಕಿಸ್ತಾನಿ ಗೂಢಚಾರನ ಬಂಧನ !

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಅಕ್ಟೋಬರ್ 20 ರಂದು ಓರ್ವ ಪಾಕಿಸ್ತಾನಿ ಗೂಢಚಾರನನ್ನು ಬಂಧಿಸಿದೆ. ಅವನು 1999 ರಿಂದ ಭಾರತದಲ್ಲಿ ವಾಸಿಸುತ್ತಿದ್ದಾನೆ. ಅವನು ಭಾರತೀಯ ಪೌರತ್ವವನ್ನೂ ಪಡೆದಿದ್ದು, ಅವನ ಪರಿಚಯದ ಭಾರತೀಯರನ್ನೂ ಈಗ ಹುಡುಕಲಾಗುತ್ತಿದೆ.

ಪಾಕಿಸ್ತಾನವು ಕಾಶ್ಮೀರದ ಗಡಿಯಲ್ಲಿರುವ ಸೇನಾ ನೆಲೆಗಳ ಬಳಿ ಭಯೋತ್ಪಾದಕರನ್ನು ಒಗ್ಗೂಡಿಸಿತು !

ಇಲ್ಲಿಯ ಕೊಕೆರನಾಗ ಪ್ರದೇಶದಲ್ಲಿ ಕಳೆದ ೬ ದಿನಗಳಿಂದ ಭದ್ರತಾಪಡೆಗಳು ಮತ್ತು ಜಿಹಾದಿ ಭಯೋತ್ಪಾದಕರ ನಡುವೆ ಚಕಮಕಿ ನಡೆಯುತ್ತಿದೆ. ಇನ್ನೂ ಇಲ್ಲಿನ ಪರ್ವತಗಳಲ್ಲಿ ೨ ಭಯೋತ್ಪಾದಕರು ಅಡಗಿದ್ದಾರೆ.

ಅನಂತನಾಗ (ಜಮ್ಮು-ಕಾಶ್ಮೀರ) ಭಯೋತ್ಪಾದಕರೊಂದಿಗೆ ಚಕಮಕಿ, ಒಟ್ಟು ೫ ಅಧಿಕಾರಿ ಮತ್ತು ಸೈನಿಕರು ವೀರಮರಣ

ಎರಡು ದಿನಗಳಿಂದ ಜಿಹಾದಿ ಭಯೋತ್ಪಾದಕರ ಜೊತೆಗೆ ನಡೆಯುತ್ತಿರುವ ಚಕಮಕಿಯಲ್ಲಿ ಕರ್ನಲ್ ಮನಪ್ರೀತಿ ಸಿಂಹ, ಮೇಜರ್ ಆಶಿಷ ಧೋನಚಕ, ಪೊಲೀಸ ಅಧಿಕಾರಿ ಹುಮಾಯು ಭಟ ಮತ್ತು ಇಬ್ಬರು ಸೈನಿಕರು ವೀರಗತಿ ಹೊಂದಿದರು.

ಪಾಕಿಸ್ತಾನವನ್ನು ಬದಿಗಿರಿಸುವ ಆವಶ್ಯಕತೆ ! – ಕೇಂದ್ರ ರಾಜ್ಯ ಸಚಿವ ಮತ್ತು ಮಾಜಿ ಸೈನ್ಯದಳ ಪ್ರಮುಖ ವಿ.ಕೆ. ಸಿಂಹ !

ಕಾಶ್ಮೀರದ ಅನಂತನಾಗದಲ್ಲಿನ ಚಕಮಕಿಯಲ್ಲಿ ಭಾರತದ ೫ ಸೈನ್ಯಾಧಿಕಾರಿ ಮತ್ತು ಸೈನಿಕರು ಹುತಾತ್ಮರಾಗಿದ್ದಾರೆ. ಈ ಘಟನೆಯ ನಂತರ ಮಾಜಿ ಸೈನ್ಯದಳ ಪ್ರಮುಖ ಮತ್ತು ಕೇಂದ್ರ ರಾಜ್ಯ ಸಚಿವ ವಿ.ಕೆ. ಸಿಂಹ ಇವರು, ‘ಪಾಕಿಸ್ತಾನವನ್ನು ಒಬ್ಬಂಟಿಯಾಗಿ ಮಾಡುವ ಅವಶ್ಯಕತೆ ಇದೆ.

ರಾಜೌರಿ (ಜಮ್ಮು ಕಾಶ್ಮೀರ) ಇಲ್ಲಿ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಸೈನ್ಯದ ಶ್ವಾನ ವೀರ ಮರಣ !

ಇಲ್ಲಿ ೨೪ ಗಂಟೆಗಿಂತಲೂ ಹೆಚ್ಚಿನ ಕಾಲ ಜಿಹಾದಿ ಭಯೋತ್ಪಾದಕರ ಜೊತೆಗೆ ಭದ್ರತಾ ಪಡೆಯೊಂದಿಗೆ ಚಕುಮಕಿ ನಡೆದಿತ್ತು. ಇಲ್ಲಿಯವರೆಗೆ ಈ ಚಕಮಕಿಯಲ್ಲಿ ೨ ಭಯೋತ್ಪಾದಕರು ಹತ್ತರಾಗಿದ್ದಾರೆ ಹಾಗೂ ಭದ್ರತಾ ಪಡೆಯ ೨ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.

ಸಂಬಂಧ ಸುಧಾರಿಸಲು ಲಡಾಖ ಗಡಿಯಲ್ಲಿ ಶಾಂತಿ ನಿರ್ಮಾಣ ಮಾಡುವುದು ಆವಶ್ಯಕ !

ಬ್ರಿಕ್ಸ್ ಪರಿಷತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಶೀ ಜೀನಪಿಂಗ ಇವರ ಭೇಟಿ

ಭಾರತವು ಪಾಕಿಸ್ತಾನದ ಗಡಿಯನ್ನು ಪ್ರವೇಶಿಸಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದೆ !

ಒಂದು ಹಿಂದಿ ದಿನಪತ್ರಿಕೆಯಲ್ಲಿ ನೀಡಿರುವ ಮಾಹಿತಿಯನುಸಾರ ಆಗಸ್ಟ್ 19 ರ ರಾತ್ರಿ ಭಾರತವು ಪಾಕಿಸ್ತಾನದ ಗಡಿಯನ್ನು ಪ್ರವೇಶಿಸಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದೆ. ಭಾರತೀಯ ಸೇನೆಯ ವಿಶೇಷ ಪಡೆಗಳ 12 ರಿಂದ 15 ಕಮಾಂಡೋಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ತಾರಕುಂಡಿ ಸೆಕ್ಟರ್ ಮತ್ತು ಪೂಂಛನ ಭಿಂಭರ್ ಗಲ್ಲಿಯಲ್ಲಿ ರಾತ್ರಿಯ ಸಮಯದಲ್ಲಿ ನಡೆದುಕೊಂಡು ಪ್ರತ್ಯಕ್ಷ ನಿಯಂತ್ರಣ ರೇಖೆಯನ್ನು ದಾಟಿದರು.

ಪುಲ್ವಾಮದಲ್ಲಿ ಓರ್ವ ಭಯೋತ್ಪಾದಕನ ಹತ್ಯೆ

ಪುಲ್ವಾಮದಲ್ಲಿ ಆಗಸ್ಷ ೨೦ ರ ಸಂಜೆ ಪ್ರಾರಂಭವಾದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಒಬ್ಬ ಭಯೋತ್ಪಾದಕನನ್ನು ಕೊಂದಿದ್ದು ಇನ್ನೂ ಗುಂಡಿನ ಚಕಮಕಿ ಮುಂದುವರೆದಿದೆ. ಹತ್ಯೆಗೀಡಾದ ಭಯೋತ್ಪಾದಕನು ಮನೆಯ ಒಳಗೆ ಅಡಗಿಕೊಂಡು ಗುಂಡು ಹಾರಿಸುತ್ತಿದ್ದ.

ನಾವು ನಿಮ್ಮ ಚರ್ಮವನ್ನು ಸುಲಿಯುತ್ತೇವೆ ! – ಪಶ್ತೂನ್ ನಾಯಕನಿಂದ ಪಾಕಿಸ್ತಾನ ಸೇನೆಗೆ ಬೆದರಿಕೆ

ಇಲ್ಲಿನ ಸರ್ವೋಚ್ಚ ನ್ಯಾಯಾಲಯದ ಎದುರು ಪಾಕಿಸ್ತಾನದ ಪಶ್ತೂನ್ ಪ್ರದೇಶದ ನಾಯಕರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. `ಪಶ್ತೂನ್ ಜನರ ಧ್ವನಿಯನ್ನು ಕೇಳದಿದ್ದರೆ, ಸ್ವಾತಂತ್ರ್ಯಕ್ಕಾಗಿ ಯುದ್ಧ ನಡೆಯುವುದು’ ಎಂದು ಈ ನಾಯಕರು ಬೆದರಿಕೆ ಹಾಕಿದ್ದಾರೆ.

ಲಡಾಖನಲ್ಲಿ ಭಾರತೀಯ ಸೈನ್ಯದ ವಾಹನ ಆಳವಾದ ಕಂದಕಕ್ಕೆ ಉರುಳಿ ೯ ಸೈನಿಕರ ಸಾವು

ಆಗಸ್ಟ್ ೧೯ ರಂದು ಇಲ್ಲಿ ಸಂಜೆ ಸೈನ್ಯದ ವಾಹನ ಆಳವಾದ ಕಂದಕಕ್ಕೆ ಉರುಳಿದ್ದರಿಂದ ೯ ಸೈನಿಕರು ಸಾವನ್ನಪ್ಪಿದ್ದಾರೆ. ಮೃತ ಸೈನಿಕರಲ್ಲಿ ಓರ್ವ ಅಧಿಕಾರಿಯ ಸಮಾವೇಶ ಕೂಡ ಇದೆ. ಕೆಲವು ಸೈನಿಕರು ಗಾಯಗೊಂಡಿದ್ದಾರೆ.