ಝಾನ್ಸಿ ರಾಣಿಯು ಮಾಡಿದ ಹೋರಾಟ ಮತ್ತು ಅವಳ ದಿವ್ಯ ಬಲಿದಾನ !

ಜ್ಯೇಷ್ಠ ಶುಕ್ಲ ಸಪ್ತಮಿ (ಜೂನ್‌ ೧೩ ರಂದು) ರಾಣಿ ಲಕ್ಷ್ಮೀಬಾಯಿ ಬಲಿದಾನ ದಿನ ಇದೆ; ಅದರ ನಿಮಿತ್ತ ಸವಿನಯ ವಂದನೆಗಳು !

೧. ಝಾನ್ಸಿಯ ರಾಣಿಯ ಶೌರ್ಯದ ಕುರಿತಾದ ಆಕ್ಷೇಪಗಳು ಮತ್ತು ಖಂಡನೆ

‘ನಮ್ಮ ದೇಶದಲ್ಲಿ ಇತಿಹಾಸವನ್ನು ತಿರುಚಿ ಅದನ್ನು ವಿಕೃತಗೊಳಿಸುವ ಸ್ಪರ್ಧೆ ನಡೆದಿದೆಯೇ ?, ಎಂಬ ಸಂದೇಹ ಬರುವಂತಹ ಸ್ಥಿತಿ ಬಂದೊದಗಿದೆ. ಯಾರೋ ಬಂದು ಐತಿಹಾಸಿಕ ಪುರುಷರ ಮತ್ತು ಅವರ ಶೌರ್ಯದ ವಿಷಯದಲ್ಲಿ ಸಂದೇಹ ಹುಟ್ಟು ಹಾಕುತ್ತಾರೆ.

ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯವರ ನಿಸ್ವಾರ್ಥ ಮತ್ತು ಪರಾಕ್ರಮಿ ಸ್ವಾತಂತ್ರ್ಯದ ಮಹತ್ವಾಕಾಂಕ್ಷೆಯನ್ನೂ ಮಲಿನಗೊಳಿಸುವ ಹೇಳಿಕೆಗಳನ್ನು ನೀಡಲಾಯಿತು. ಅನೇಕರು ಅವರ ವಿಷಯದಲ್ಲಿ ಆಕ್ಷೇಪವನ್ನೆತ್ತಿದರು. ಕೆಲವರು ಹೇಳುತ್ತಾರೆ, ”ರಾಣಿ ಲಕ್ಷ್ಮೀಬಾಯಿ ಯವರು ಸ್ವಾರ್ಥಕ್ಕಾಗಿ ಈ ಯುದ್ಧದಲ್ಲಿ ಭಾಗವಹಿಸಿದ್ದರು. ಆಂಗ್ಲರು ಅವರ ರಾಜ್ಯವನ್ನು ಕಬಳಿಸದಿದ್ದರೆ, ಅವರು ಯುದ್ಧದಲ್ಲಿ ಭಾಗವಹಿಸುತ್ತಿರಲಿಲ್ಲ.” ಕೆಲವರ ಅಭಿಪ್ರಾಯ… ”ಅವರು ಆರಂಭದಿಂದಲೂ ಆಂಗ್ಲರೊಂದಿಗೆ ಮೈತ್ರಿ ಮಾಡುತ್ತಿದ್ದರು. ಬಂಡಾಯದ ಉದ್ದೇಶದಿಂದ ಅವರು ಯುದ್ಧದಲ್ಲಿ ಭಾಗವಹಿಸಿದರು. ಸ್ವಲ್ಪ ಸಮಯ ಆಂಗ್ಲರ ಯುನಿಯನ್‌ ಜಾಕ್‌ (ಬ್ರಿಟಿಷರ ಧ್ವಜ) ಝಾನ್ಸಿಯಲ್ಲಿ ಹಾರಾಡುತ್ತಿತ್ತು. ಆದ್ದರಿಂದಲೇ ಅವರ ಸ್ವಾತಂತ್ರ್ಯಪ್ರಾಪ್ತಿಯ ಹೋರಾಟ ನಕಲಿಯಾಗಿತ್ತು. ಹಿಂದೂಸ್ಥಾನದ ಸ್ವಾತಂತ್ರ್ಯದ ಧ್ಯೇಯದಿಂದ ಅವರು ಪ್ರೇರಿತರಾಗಿರಲಿಲ್ಲ.” ಕೆಲವರ ಅಭಿಪ್ರಾಯ ಹೀಗಿದೆ… ‘ಧಾರ್ಮಿಕ ಕಾರಣದಿಂದಲೇ ೧೮೫೭ ರ ಗಲಭೆ ನಡೆಯಿತು. ಅದನ್ನು ಸ್ವಾತಂತ್ರ್ಯ ಸಮರವೆನ್ನಲಾಗದು.ಅದು ರಾಷ್ಟ್ರೀಯ ಗಲಭೆ ಆಗಿರಲಿಲ್ಲ. ಅದರಲ್ಲಿ ಸಂಪೂರ್ಣ ರಾಷ್ಟ್ರ ಭಾಗವಹಿಸಿರಲಿಲ್ಲ. ಅದು ಸೇನಾ ಬಂಡಾಯವಾಗಿತ್ತು. ಅದು ರಾಜಪುರುಷರು ಮಾಡಿದ ಒಂದು ಜಾಗೃತಿಯಾಗಿತ್ತು.”

ಶ್ರೀ. ದುರ್ಗೇಶ ಪರುಳಕರ

ಈ ಆಕ್ಷೇಪಗಳು ಸತ್ತ್ವಪರೀಕ್ಷೆ ಮಾಡುವಂತಹದ್ದಲ್ಲ.

ರಾಣಿ ಲಕ್ಷ್ಮೀಬಾಯಿಯವರ ರಾಜ್ಯವನ್ನು ಕಬಳಿಸಲಾಗಿತ್ತು, ಎಂಬುದು ಅವರ ಸ್ವಾತಂತ್ರ್ಯಸಂಗ್ರಾಮದ ಅಂದಿನ ಕಾರಣ ವಾಯಿತು. ಅದೇ ಕಾರಣಕ್ಕಾಗಿ ಅವರು ಆಂಗ್ಲರ ವಿರುದ್ಧ ಯುದ್ಧ ಮಾಡಿದರು. ಕ್ರಾಂತಿಕಾರಿ ವಾಸುದೇವ ಬಳವಂತ ಫಡಕೆ ಇವರ ತಾಯಿ ಅನಾರೋಗ್ಯದಲ್ಲಿದ್ದಾಗ ಅವರಿಗೆ ರಜೆ ಸಿಗಲಿಲ್ಲ; ಆದ್ದರಿಂದ ಅವರು ಬ್ರಿಟಿಷ್‌ ಸರಕಾರದ ವಿರುದ್ಧ ಬಂಡಾಯವೆದ್ದರು. ಲಾಲಾ ಲಜಪತರಾಯರ ಹತ್ಯೆಯನ್ನು ಮಾಡಿದರೆಂದು ಸರದಾರ ಭಗತಸಿಂಹ ಇವರು ಬ್ರಿಟಿಷ ಸರಕಾರದ ವಿರುದ್ಧ ಹೋರಾಡಲು ನಿರ್ಧರಿಸಿದರು. ಅಂದಿನ ಇಂತಹ ಘಟನೆಗಳ ವಿಷಯವು ಸತ್ಯವಾಗಿದೆ; ಆದರೆ ಅದರಿಂದ ಅವರನ್ನು ಸ್ವಾರ್ಥಿ ಎನ್ನಲಾಗುವು ದಿಲ್ಲ. ರಾಷ್ಟ್ರವನ್ನು ಸ್ವತಂತ್ರಗೊಳಿಸುವುದು ಅವರ ಧ್ಯೇಯವಾದ ವಾಗಿತ್ತು. ರಾಷ್ಟ್ರವನ್ನು ಸ್ವತಂತ್ರಗೊಳಿಸುವ ಅನೇಕ ಕಾರಣಗಳಿದ್ದವು. ಅವುಗಳಲ್ಲಿ ಒಂದು ವೈಯಕ್ತಿಕ ಕಾರಣವಾಗಿತ್ತು. ಅನ್ಯಾಯ ಮತ್ತು ಅತ್ಯಾಚಾರಗಳ ವಿರುದ್ಧ ಹೋರಾಡುವ ವೃತ್ತಿಯಿರುವ ವ್ಯಕ್ತಿಗೆ ತನ್ನ ಮೇಲಾಗುವ ಅನ್ಯಾಯ ಸಹಿಸಲು ಆಗುವುದಿಲ್ಲ. ಸಂಪೂರ್ಣ ದೇಶದ ಮೇಲೆ ಆಗುತ್ತಿರುವ ಅನ್ಯಾಯವನ್ನು ಅವರು ಅನುಭವಿಸಿದ್ದಾರೆ. ಆ ವಿಷಯದಲ್ಲಿಯೂ ಅವರ ಮನಸ್ಸಿನಲ್ಲಿ ವಿಪರೀತ ಸಿಟ್ಟು ಇತ್ತು. ಈ ವಿಷಯಗಳನ್ನು ನಾವು ದುರ್ಲಕ್ಷಿಸಲು ಸಾಧ್ಯವಿಲ್ಲ. ವಿದೇಶಿಯರ ಆಡಳಿತವನ್ನು ಬುಡಮೇಲು ಮಾಡಲು ನಮ್ಮ ರಾಷ್ಟ್ರದ ಸ್ವಾತಂತ್ರ್ಯಸಿದ್ಧತೆಗಾಗಿ ರಾಣಿ ಲಕ್ಷ್ಮೀಬಾಯಿಯವರು ಬ್ರಿಟಿಷ್‌ ಸರಕಾರದ ವಿರುದ್ಧ ಶಸ್ತ್ರವನ್ನೆತ್ತಿದರು.

ಬ್ರಿಟಿಷರು ರಾಣಿ ಲಕ್ಷ್ಮೀಬಾಯಿಯವರಿಗೆ ವರ್ಷಕ್ಕೆ ೬೦ ಸಾವಿರ ರೂಪಾಯಿಗಳ ಸಂಪತ್ತನ್ನು ಕೊಟ್ಟಿದ್ದರು. ಆದರೆ ಲಕ್ಷ್ಮೀಬಾಯಿ ಅದನ್ನು ನಿರಾಕರಿಸಿದರು ಮತ್ತು ಅವರೊಂದಿಗೆ ಹೋರಾಡಲು ನಿಶ್ಚಯಿಸಿದರು. ಅವರ ಈ ಕೃತಿ ಅವರ ಧ್ಯೇಯನಿಷ್ಠೆ ಮತ್ತು ಸ್ವಾತಂತ್ರ್ಯನಿಷ್ಠೆಯನ್ನು ವ್ಯಕ್ತಪಡಿಸಲು ಬೇಕಾದಷ್ಟಾಯಿತು. ೧೮೫೭ ರ ಸ್ವಾತಂತ್ರ್ಯ ಸಮರವು ಧಾರ್ಮಿಕ ಕಾರಣಕ್ಕಾಗಿ ಇತ್ತು. ಸಂಪೂರ್ಣ ರಾಷ್ಟ್ರ ಅದರಲ್ಲಿ ಭಾಗವಹಿಸಿರಲಿಲ್ಲ. ಆದ್ದರಿಂದ ಅದು ರಾಷ್ಟ್ರೀಯ ಸಮರ ಆಗಿರಲಿಲ್ಲ; ಆದ್ದರಿಂದ ರಾಣಿ ಲಕ್ಷ್ಮೀಬಾಯಿ ಸಹಜವಾಗಿಯೇ ಯಾವುದೇ ಸ್ವಾತಂತ್ರ್ಯ ಸಮರದ ಅಥವಾ ರಾಷ್ಟ್ರೀಯ ಸಮರದ ನಾಯಕಿಯಾಗಿರಲಿಲ್ಲ, ಎಂಬ ಆರೋಪವೂ ನಿರರ್ಥಕವಾಗಿದೆ.

೧೮೫೭ ರ ಸ್ವಾತಂತ್ರ್ಯ ಸಮರದಲ್ಲಿ ಪೂರ್ಣ ಹಿಂದೂಸ್ಥಾನಕ್ಕೆ ಎಲ್ಲ ಸ್ತರದಲ್ಲಿ ಹೋರಾಡುವ ಮತ್ತು ಸಹಾನುಭೂತಿಯ ಆಕಾಂಕ್ಷೆಯಿತ್ತು, ಎನ್ನುವ ಸ್ಪಷ್ಟ ಪುರಾವೆ ನಮಗೆ ಸಿಗುತ್ತದೆ. ಚಪಾತಿ ಗಳ ಮೂಲಕ ಕಳುಹಿಸಿದ ಸಂದೇಶವು ರಾಷ್ಟ್ರೀಯ ಹೋರಾಟವಾಗಿತ್ತು. ಇದರ ಸಾಕ್ಷಿ ನೀಡಲು ಈ ಪ್ರಸಂಗವು ಬೇಕಾದಷ್ಟಾಯಿತು.

೨. ಸ್ವಾತಂತ್ರ್ಯದೇವತೆ ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯವರು ಆಂಗ್ಲರೊಂದಿಗೆ ಹೋರಾಡಿ ರಣರಂಗದಲ್ಲಿ ವೀರಮರಣವನ್ನಪ್ಪುವುದು

೧೮ ಜೂನ್‌ ೧೮೫೭ ರಂದು ಸರ್‌ ಹ್ಯೂ ಇವರು ತಮ್ಮ ಸೈನ್ಯದೊಂದಿಗೆ ದಾಳಿ ನಡೆಸಲು ಬರುತ್ತಿದ್ದಾನೆಂದು ತಿಳಿದ ತಕ್ಷಣ ರಾಣಿ ಲಕ್ಷ್ಮೀಬಾಯಿ ರಣವೇಶ ಧಾರಣೆ ಮಾಡಿದರು, ತಲೆಗೆ ಝರಿಯ ಬೆಳ್ಳಿಯ ಬಣ್ಣದ ಮುಂಡಾಸನ್ನು ಕಟ್ಟಿಕೊಂಡು ಪೈಜಾಮ ಹಾಕಿದರು, ಮೈಯಲ್ಲಿ ಅಂಗಿಯನ್ನು ಹಾಕಿಕೊಂಡರು ಮತ್ತು ಕೊರಳಲ್ಲಿ ಮುತ್ತಿನ ಕಂಠಿಹಾರವಿತ್ತು. ಅವರ ನಿತ್ಯದ ರಾಜರತ್ನ ಎಂಬ ಕುದುರೆಯು ಗಾಯಗೊಂಡಿತ್ತು; ಆದ್ದರಿಂದ ಅವರು ಇನ್ನೊಂದು ಕುದುರೆಯನ್ನೇರಿದರು. ಕೈಯಲ್ಲಿ ಭರ್ಚಿ, ಖಡ್ಗ ಮತ್ತು ಗುರಾಣಿ ಇತ್ತು. ಅವರ ಸುತ್ತಲೂ ವಿಶ್ವಾಸಿ ಸರದಾರರಿದ್ದರು. ಮಂದಾರ ಮತ್ತು ಕಾಶಿ ಎಂಬ ಅವರ ಆತ್ಮೀಯ ದಾಸಿಯರು ಪುರುಷರ ರಣವೇಶವನ್ನು ಧರಿಸಿ ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದರು.

ಸರ್‌ ಹ್ಯೂ ತನ್ನ ಸೈನ್ಯದೊಂದಿಗೆ ರಾಣೀ ಲಕ್ಷ್ಮೀಬಾಯಿಯ ಸೈನ್ಯದಲ್ಲಿ ನುಗ್ಗಿದನು. ರಾಣಿಯ ಸೈನ್ಯವು ಹೆದರಿತು, ಬಹಳಷ್ಟು ಸೈನಿಕರು ಮರಣ ಹೊಂದಿದರು, ಇನ್ನೂ ಅನೇಕ ಸೈನಿಕರು ಗಾಯಗೊಂಡರು, ಆದರೆ ಈ ರಣರಾಗಿಣಿ ಹಿಂದೆ ಸರಿಯಲಿಲ್ಲ. ಶತ್ರುವಿನ ಕವಚವನ್ನು ಒಡೆದು ಅವರು ಹೊರಗೆ ಬಂದರು ಮತ್ತು ಅವರ ಕೈಯಲ್ಲಿದ್ದ ಖಡ್ಗದಿಂದ ಎದುರಿಗೆ ಬರುವ ಶತ್ರುಗಳನ್ನು ಹೊಡೆದುರುಳಿಸಿದರು. ಆಗ ಅವರ ಜೊತೆಗೆ ರಾಮಚಂದ್ರರಾವ ದೇಶಮುಖ, ರಘುನಾಥಸಿಂಹ, ಗಣಪತರಾವ ಎಂಬ ಹೆಸರಿನ ಒಬ್ಬ ಮರಾಠ ಸೈನಿಕ, ಕಾಶಿ ಮತ್ತು ಮಂದಾರ ಈ ಇಬ್ಬರು ದಾಸಿಯರು ಇಷ್ಟೇ ಜನರಿದ್ದರು. ಈ ಕಾಳಗದಲ್ಲಿ ಮಂದಾರದಾಸಿ ಸಹಾಯವಾದಳು. ಅವಳನ್ನು ಆಂಗ್ಲ ಸೈನಿಕನು ಗುಂಡು ಹೊಡೆದು ಕೊಂದು ಹಾಕಿದ್ದನು. ಮಂದಾರಳಿಗೆ ಗುಂಡು ಹೊಡೆದವನನ್ನು ರಾಣೀ ಲಕ್ಷ್ಮೀಬಾಯಿ ಖಡ್ಗದಿಂದ ಇರಿದು ಮುಗಿಸಿಬಿಟ್ಟರು. ಬಿಳಿ ಸೈನಿಕರು ರಾಣೀ ಲಕ್ಷ್ಮೀಬಾಯಿಯವರ ಮೇಲೆ ದಾಳಿ ಮಾಡಿದರು. ಅವರಲ್ಲಿ ಒಬ್ಬ ಸೈನಿಕನು ಅವರ ತಲೆಯ ಮೇಲೆ ಪ್ರಹಾರ ಮಾಡಿದನು. ಅವರ ತಲೆಯ ಒಂದು ಭಾಗ ನುಚ್ಚು ನೂರಾಯಿತು. ಅದರಿಂದ ಅವರ ಬಲಕಣ್ಣು ಹೊರಗೆ ಬಂದು ನೇತಾಡುತ್ತಿತ್ತು. ಇನ್ನೊಬ್ಬನು ಅವರ ಎದೆಯ ಮೇಲೆ ಪ್ರಹಾರ ಮಾಡಿದನು. ಆ ಪರಿಸ್ಥಿತಿಯಲ್ಲಿಯೂ ಮಂದಾರಳ ಮೇಲೆ ಗುಂಡು ಹಾರಿಸಿದ ಬಿಳಿಯ ಸೈನಿಕನನ್ನು ಕೊಂದು ಹಾಕಿದರು ಮತ್ತು ಅವರು ಕುದುರೆಯ ಮೇಲಿಂದ ಕೆಳಗೆ ಬಿದ್ದರು. ಅನಂತರ ರಾಣೀ ಲಕ್ಷ್ಮೀಬಾಯಿ ರಾಮಚಂದ್ರರಾವ ದೇಶಮುಖ ಎಂಬ ಅವರ ಏಕನಿಷ್ಠ ಸೇವಕನಿಗೆ ಸಂಕೇತ ಮಾಡಿ ಕರೆದುಕೊಂಡರು. ಅವರು ಝಾನ್ಸಿಯ ರಾಣಿಯನ್ನು ರಣರಂಗದಿಂದ ದೂರವಿರುವ ಗಂಗಾಧರ ಬಾಬಾ ಇವರ ಮಠಕ್ಕೆ ಸಾಗಿಸಿದರು. ಅಲ್ಲಿ ಅವರ ಬಾಯಿಯಲ್ಲಿ ಗಂಗೋದಕ (ಗಂಗಾಜಲ) ಹಾಕಿದರು. ರಾಣಿ, ”ನನ್ನ ದೇಹಕ್ಕೆ ಒಬ್ಬ ಆಂಗ್ಲನ ಸ್ಪರ್ಶವಾಗಬಾರದು” ಇಷ್ಟು ಹೇಳಿ ಕೊನೆಯುಸಿರೆಳೆದರು. ಅವರ ಇಚ್ಛೆಗನುಸಾರ ರಾಮಚಂದ್ರರಾವ ದೇಶಮುಖರು ಹುಲ್ಲಿನ ಬಣವೆಯನ್ನು ರಚಿಸಿ ಅವರ ಮೃತದೇಹಕ್ಕೆ ಅಗ್ನಿ ಸಂಸ್ಕಾರ ಮಾಡಿದರು. ಅದು ೧೮ ಜೂನ್‌ ೧೮೫೮ ಆಗಿತ್ತು. ಝಾನ್ಸಿಯ ರಾಣೀ ಲಕ್ಷ್ಮೀಬಾಯಿ ಇದೇ ಸ್ಥಳದಲ್ಲಿ ರಣರಂಗದಲ್ಲಿ ಬಿದ್ದು ಅಮರರಾದರು.’

– ಶ್ರೀ. ದುರ್ಗೇಶ ಜಯವಂತ ಪರೂಳೆಕರ್, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಿಲಿ (೧೬.೧೧.೨೦೨೨)