ಭಾರತೀಯ ಸೈನ್ಯದ ಒಂದು ವಿಶೇಷ ದಳ (ಯುನಿಟ್) ‘ಸ್ಟೇಗ್’ !

(‘ಸ್ಟೇಗ್‌’ಯುನಿಟ್’ : ಭವಿಷ್ಯದಲ್ಲಿನ ವಿನಾಶಕಾರಿ ತಂತ್ರಜ್ಞಾನ ತನಿಖೆಗೆ ಮೀಸಲಾದ ವಿಶೇಷ ತಂತ್ರಜ್ಞರ ಒಂದು ದಳ)

ಭವಿಷ್ಯದ ಯುದ್ಧಗಳಲ್ಲಿ ತಂತ್ರಜ್ಞಾನವು ಮಹತ್ವದ ಪಾತ್ರವನ್ನು ವಹಿಸಲಿದೆ. ಯುದ್ಧದಲ್ಲಿ ಯುನಿಟ್ಸ್ ಮತ್ತು ಫಾರ್ಮೇಶನ್ಸ್‌ಗಳನ್ನು ಸಮರ್ಥಿಸಲು ಆಧುನಿಕ ಯುದ್ಧದಲ್ಲಿ ಹೊಸ ಉಪಕರಣಗಳನ್ನು ಸೇರಿಸುವುದು ಆವಶ್ಯಕವಾಗಿದೆ. ತಂತ್ರಜ್ಞಾನದ ಇಂತಹ ಪ್ರಗತಿಯನ್ನು ಮೈಗೂಡಿಸಿಕೊಳ್ಳಲು ಭಾರತೀಯ ಸೈನ್ಯವು ‘ಸಿಗ್ನಲ್‌ ಟೆಕ್ನಾಲಾಜಿ ಇವ್ಯಾಲ್ಯುಏಶನ್‌ ಎಂಡ್‌ ಅಡಾಪ್ಶನ್‌ ಗ್ರೂಪ್’ (ಸ್ಟೇಗ್) ಈ ‘ಗ್ರೌಂಡ್‌ ಬ್ರೇಕಿಂಗ್’ (ಒಂದು ಕ್ರಾಂತಿಕಾರಿ ಸಂಶೋಧನೆ, ಇದು ಉದ್ಯೋಗ ಅಥವಾ ಸಮಾಜದ ಲಕ್ಷಣೀಯ ಪ್ರಗತಿ ಮಾಡುತ್ತದೆ.) ತಂತ್ರಜ್ಞಾನಾಧಾರಿತ ‘ಸ್ಟೇಗ್’ ದಳವನ್ನು ಸಿದ್ಧಗೊಳಿಸಲಾಗಿದೆ. ಅದು ‘ಡಿಜಿಟಲ್‌ ಡೋಮೇನ್‌’ನಲ್ಲಿ (ತನ್ನದೇ ಜಾಲತಾಣದ ಹೆಸರು) ತನ್ನ ಕ್ಷಮತೆಗೆ ಶಕ್ತಿ ನೀಡುವುದಾಗಿದೆ.

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೧. ‘ಸ್ಟೇಗ್’ ದಳದ ಕಾರ್ಯ ಮತ್ತು ಅದರ ಉದ್ದೇಶ

ಸದ್ಯದ ತಂತ್ರಜ್ಞಾನದ ಬದಲಾವಣೆಯಿಂದಾಗಿ ಯಾವ ಶಸ್ತ್ರಗಳನ್ನು ಆಯ್ದುಕೊಳ್ಳಬೇಕು ? ಆ  ಶಸ್ತ್ರಗಳನ್ನು ಯಾವಾಗ ಸೈನ್ಯದಲ್ಲಿ ಸೇರಿಸಿಕೊಳ್ಳಬೇಕು ? ಮತ್ತು ಹೀಗೆ ಮಾಡುವಾಗ ಅತ್ಯಂತ ಅತ್ಯಾಧುನಿಕ; ಆದರೆ ಕಡಿಮೆ ಖರ್ಚಿನಲ್ಲಿ ಅಂತಹ ತಂತ್ರಜ್ಞಾನವನ್ನು ನಮ್ಮ ಸೈನ್ಯದಲ್ಲಿ ಹೇಗೆ ತರಬಹುದು ? ಎಂಬುದನ್ನು ನಿರ್ಧರಿಸುವುದು ಮತ್ತು ಅದನ್ನು ತರುವುದು ಅತ್ಯಂತ ಮಹತ್ವದ್ದಾಗಿರುತ್ತದೆ. ಅದಕ್ಕಾಗಿ ಭಾರತೀಯ ಸೈನ್ಯವು ‘ಸ್ಟೇಗ್‌ ಯುನಿಟ್’ ಎಂಬ ಒಂದು ಹೊಸ ದಳವನ್ನು ಸ್ಥಾಪಿಸಿದೆ. ಭಾರತೀಯ ಸೈನ್ಯದಲ್ಲಿ ವಿನಾಶಕಾರಿ ತಂತ್ರಜ್ಞಾನ (Disruptive Niche technologies),  ಅಂದರೆ “ಎಐ” (ಕೃತಕ ಬುದ್ಧಿವಂತಿಕೆ), ‘೫ ಜಿ’, ‘೬ ಜಿ’, ‘ಕ್ವಾಂಟಮ್’ ತಂತ್ರಜ್ಞಾನ ಸಹಿತ ಇತರ ಅನೇಕ ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ಸಂಶೋಧನೆ ಮಾಡಲಾಗುತ್ತಿದೆ.

‘ಸ್ಟೇಗ್’ ದಳವು ಭವಿಷ್ಯದಲ್ಲಿನ ವಿನಾಶಕಾರಿ ತಂತ್ರಜ್ಞಾನ ತನಿಖೆಗೆ ಮೀಸಲಾದ ವಿಶೇಷ ತಂತ್ರಜ್ಞರ ಒಂದು ದಳವಾಗಿದೆ. ‘ಸ್ಟೇಗ್’ ಸೈನ್ಯವು ‘ಸಿಗ್ನಲ್‌ ಸಂಚಾಲನದ ಅಂತರ್ಗತ ಕಾರ್ಯ ವನ್ನು ಮಾಡುವುದು ಹಾಗೂ ‘ಕಾರ್ಪ್ಸ್‌ ಆಫ್‌ ಸಿಗ್ನಲ್’ ನಲ್ಲಿನ ಕರ್ನಲ್‌ ಅದರ ನೇತೃತ್ವ ವಹಿಸುವರು. ಈ ದಳದಲ್ಲಿ ಸುಮಾರು ೨೮೦ ನೌಕರರು ಇರುವರು. ಅವರ ಪ್ರಾಥಮಿಕ ಉದ್ದೇಶ ‘ಕಠೋರ ಮೌಲ್ಯಮಾಪನ ಹಾಗೂ ಭವಿಷ್ಯದ ತಂತ್ರಜ್ಞಾನವನ್ನು ಉಪಯೋಗಿಸಿ ಸೈನ್ಯದ ಕ್ಷಮತೆಗೆ ಚಾಲನೆ ನೀಡುವುದಾಗಿದೆ’. ‘ಸ್ಟೇಗ್’ ಇದು ಅತ್ಯಾಧುನಿಕ ತಂತ್ರಜ್ಞಾನದ ಸಂಶೋಧನೆ ಮತ್ತು ಮೌಲ್ಯಮಾಪನ ಮಾಡುತ್ತದೆ; ಆದುದರಿಂದ ಒಟ್ಟು ಕಾರ್ಯಕ್ಷಮತೆ ಯನ್ನು ಹೆಚ್ಚಿಸುವುದು ಅದರ ಉದ್ದೇಶವಾಗಿರುವುದು.

೨. ಸೈನ್ಯಕ್ಕೆ ಅತ್ಯಾಧುನಿಕ ಸಾಧನಗಳನ್ನು ಒದಗಿಸುವುದು ‘ಸ್ಟೇಗ್‌ ಯುನಿಟ್‌’ನ ಮಹತ್ವದ ಉದ್ದೇಶ !  

‘ಸ್ಟೇಗ್‌ ಯುನಿಟ್’ ಇದು ತಂತಿ ಮತ್ತು ತಂತಿರಹಿತ (ವಯರ್ಡ್ – ವಯರ್‌ಲೆಸ್) ತಂತ್ರಜ್ಞಾನವನ್ನು ನವೀಕರಿಸುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಲಿದೆ. ಈ ಯುನಿಟ್‌ನ ಮೂಲಕ ಭಾರತೀಯ ಸೈನ್ಯಕ್ಕಾಗಿ ‘ಮೋಬೈಲ್’ ಯಾಪ್‌ ಹಾಗೂ ವೆಬ್‌ (ಜಾಲತಾಣಗಳು) ಇತ್ಯಾದಿಗಳನ್ನು ವಿಕಾಸಗೊಳಿಸಲಾಗುವುದು. ‘ಸ್ಟೇಗ್‌ ಯುನಿಟ್’ ವೇಗವಾಗಿ ಬದಲಾಗುತ್ತಿರುವ ಪ್ರಸ್ತುತ ಕಾಲದ ಯುದ್ಧಗಳಿಗಾಗಿ ಸಿದ್ಧವಾಗಿರಲು ಹಾಗೂ ಭವಿಷ್ಯದ ಯುದ್ಧಭೂಮಿಯ ವಿಚಾರ ಮಾಡಿ ತಂತ್ರಜ್ಞಾನವನ್ನು ವಿಕಸಿತಗೊಳಿಸುವ ಸೈನ್ಯದ ಪ್ರಯತ್ನದ ಒಂದು ಭಾಗವಾಗಿದೆ. ಅದಕ್ಕಾಗಿ ‘ವಯರ್ಡ್‌’ ಮತ್ತು ‘ವಯರ್‌ಲೆಸ್‌ ಸಿಸ್ಟಮ್‌ ಕಮ್ಯುನಿಕೇಶನ್’ ಆವಶ್ಯಕವಾಗಿದೆ.

ಸಂಚಾರಿವಾಣಿ ಸಂಪರ್ಕ ಪದ್ಧತಿಯ ಹೊರತು ‘ಸಾಫ್ಟ್ ಡಿಫಾಯಿಂಡ್‌ ರೇಡಿಯೊ’ (ರೇಡಿಯೋ ಸಂವಹನ ವ್ಯವಸ್ಥೆ) ಇಲೆಕ್ಟ್ರಾನಿಕ್‌ ಎಕ್ಸ್‌ಚೇಂಜ್, ಇಲೆಕ್ಟ್ರಾನಿಕ್‌ ಯುದ್ಧಪ್ರಣಾಲಿ, ೫ಜಿ ಮತ್ತು ೬ಜಿ ನೆಟ್‌ವರ್ಕ್‌, ಕ್ವಾಂಟಮ್‌ ತಂತ್ರಜ್ಞಾನ, ಕೃತಕ ಬುದ್ಧಿವಂತಿಕೆ (ಆರ್ಟಿಫೀಶಿಯಲ ಇಂಟಲಿಜನ್ಸ), ಮಶೀನ್‌ ಲರ್ನಿಂಗ್‌ ಇತ್ಯಾದಿಗಳನ್ನು ವಿಕಸನಗೊಳಿಸಲಾಗುತ್ತಿದೆ. ಅದಕ್ಕಾಗಿ ಭಾರತೀಯ ಸೈನ್ಯ ಔದ್ಯೋಗಿಕ ಕ್ಷೇತ್ರಗಳ ತಜ್ಞರೊಂದಿಗೆ ಪಾಲುದಾರಿಕೆ ಮಾಡಲಿದೆ. ಈ ‘ಹೈಟೆಕ್‌ ಯುನಿಟ್’ (ಉಚ್ಚ ತಂತ್ರಜ್ಞಾನಯುಕ್ತ ದಳ) ತಾಂತ್ರಿಕ ‘ಸ್ಕೌಂಟಿಂಗ್’ (ಗೂಢಚಾರ), ಮೌಲ್ಯಮಾಪನ, ವಿಕಾಸ, ‘ಕೋಅರ್‌ ಐಸಿಟಿ’ (ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ) ಉಪಾಯಗಳ ವ್ಯವಸ್ಥಾಪನೆ ಮಾಡಲಿದೆ.

ಇದರ ಜೊತೆಗೆ ಜಗತ್ತಿನಲ್ಲಿ ಉಪಲಬ್ಧವಿರುವ ಸಮಕಾಲೀನ ತಂತ್ರಜ್ಞಾನವನ್ನು ಸುಧಾರಣೆ ಮಾಡಿ ಭಾರತೀಯ ಸೈನ್ಯವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಕ್ಕೆ ಒಯ್ಯಲಿದೆ. ‘ಸ್ಟೇಗ್‌ ಯುನಿಟ್’ ಭವಿಷ್ಯದ ತಂತ್ರಜ್ಞಾನದ ಸಂಶೋಧನೆ ಹಾಗೂ ಮೌಲ್ಯಮಾಪನ ಮಾಡಲಿದೆ. ಕ್ಷೇತ್ರದ ಬದಲಾಗುತ್ತಿರುವ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಸೈನಿಕರ ಉಪಯೋಗಕ್ಕಾಗಿ ಶಿಕ್ಷಣ, ಕ್ವಾಂಟಮ್‌ ಗಣಕಯಂತ್ರಗಳನ್ನು ವಿಕಾಸಗೊಳಿಸುವುದು, ಅತ್ಯಾಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ‘ಸೊಲ್ಯುಶನ್ಸ್‌’ನ (ಉಪಾಯಯೋಜನೆಯ) ಲಾಭ ಪಡೆಯುವುದು ಹಾಗೂ ಶೈಕ್ಷಣಿಕ, ಉದ್ಯೋಗಗಳ ಸಹಾಯದಿಂದ ಒಳ್ಳೆಯ ತಂತ್ರಜ್ಞಾನವನ್ನು ಸಿದ್ಧಪಡಿಸುವುದು, ಇದು ‘ಸ್ಟೇಗ್‌’ನ ಉದ್ದೇಶವಾಗಿದೆ. ಮುಂದಿನ ಯುದ್ಧಕ್ಷೇತ್ರ ಸುರಕ್ಷಿತ ಹಾಗೂ ಸುದೃಢ ಸಂಚಾರಸಾರಿಗೆ ಪದ್ಧತಿಯನ್ನು ಹೆಚ್ಚೆಚ್ಚು ಅವಲಂಬಿಸಿದೆ. ಪಾರಂಪರಿಕ ಪದ್ಧತಿಗಳಿಗೆ ಸತತ ಹೊಸ ಸವಾಲುಗಳು ಎದುರಾಗುತ್ತಿವೆ.

‘ಸ್ಟೇಗ್‌’ನ ಉದ್ದೇಶವೇನೆಂದರೆ, ಸೈನ್ಯಕ್ಕೆ ಅತ್ಯಾಧುನಿಕ ಸಾಧನಗಳು ಉಪಲಬ್ಧವಾಗುತ್ತಿವೆಯಲ್ಲ ಎಂದು ಖಚಿತಪಡಿಸಿಕೊಳ್ಳುವುದು. ಈ ಉಪಕ್ರಮ ಕೇವಲ ಹೊಸ ತಂತ್ರಜ್ಞಾನವನ್ನು ಅಂಗೀಕರಿಸುವುದರ ಆಚೆಗೆ ಇದೆ. ಆಧುನಿಕ ಯುದ್ಧಗಳಲ್ಲಿ ಸಂಪೂರ್ಣ ರಣರಂಗದಲ್ಲಿ ಉಚ್ಚ ಪ್ರಮಾಣದ ಮಾಹಿತಿಯ ಕೊಡು-ಕೊಳ್ಳುವಿಕೆ ಹಾಗೂ ‘ರಿಯಲ್‌ ಟೈಮ್’ (ವಾಸ್ತವಿಕ ಸಮಯದ) ಸಮನ್ವಯದ ಅವಶ್ಯಕತೆಯಿರುತ್ತದೆ. ಸುರಕ್ಷಿತ ಹಾಗೂ ವಿಶ್ವಾಸಾರ್ಹ ಸಂಪರ್ಕ ವ್ಯವಸ್ಥೆ, ಪ್ರಭಾವೀ ಆದೇಶ ಮತ್ತು ನಿಯಂತ್ರಣಕ್ಕಾಗಿ ಸರ್ವೋಪಯೋಗಿಯಾಗಿದೆ.

೩. ಭಾರತೀಯ ಸೈನ್ಯದ ದೃಷ್ಟಿಯಿಂದ ‘ಸ್ಟೇಗ್‌’ನ ಮಹತ್ವಪೂರ್ಣ ಪಾತ್ರ

ಅತ್ಯಾಧುನಿಕ ತಂತ್ರಜ್ಞಾನದ ಮೇಲೆ ಕೆಲವು ವಿಕಸಿತ ದೇಶಗಳ ಹಿಡಿತವಿದೆ. ‘ಸ್ಟೇಗ್‌’ಸಹಿತ ಭಾರತ ರಕ್ಷಣಾಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದಲ್ಲಿ ಆತ್ಮನಿರ್ಭರವಾಗುವ ನಿಟ್ಟಿನಲ್ಲಿ ಧೈರ್ಯದಿಂದ ಹೆಜ್ಞೆಯನ್ನು ಇಟ್ಟಿದೆ. ‘ಸ್ಟೇಗ್‌’ನ ಸ್ಥಾಪನೆ ಸೈನ್ಯದ ವ್ಯಾಪಕ ಆಧುನೀಕರಣದ ಪ್ರಯತ್ನದೊಂದಿಗೆ ಜೊತೆಗೂಡುತ್ತದೆ. ‘ಆತ್ಮನಿರ್ಭರ ಭಾರತ’ ಮತ್ತು ‘ಸ್ಟಾರ್ಟ್ಪ್‌ ಇಂಡಿಯಾ’ ಇವುಗಳಿಗೆ ಅನುರೂಪವಾಗಿರುವ ‘ಸ್ಟೇಗ್’ ಒಂದೆಡೆ ಸಶಸ್ತ್ರದಳ ಮತ್ತು ಇನ್ನೊಂದೆಡೆ ಉದ್ಯೋಗ, ಶೈಕ್ಷಣಿಕ ಕ್ಷೇತ್ರದ ಸಹಾಯ ಪಡೆದು ತನ್ನ ಕೊರತೆಯನ್ನು ನೀಗಿಸಿಕೊಳ್ಳಲು ಸಹಾಯ ಮಾಡುವುದು. ಉಚ್ಚ ಮಟ್ಟದ ತಂತ್ರಜ್ಞಾನ ದೇಶಕ್ಕೆ ಮಹತ್ವದ್ದಾಗಿದೆ, ಅದೇ ರೀತಿ ಅದನ್ನು ಅಂಗೀಕರಿಸಿಕೊಂಡರೆ ಅದನ್ನು ಹೆಚ್ಚು ಸ್ವಯಂಪೂರ್ಣ ಗೊಳಿಸುವುದಾಗಿದೆ. ಸಂಚಾರಸಾರಿಗೆ ಇದು ಸೈನಿಕ ಆಯೋಜನೆಯ ಒಂದು ಮಹತ್ವದ ಭಾಗವಾಗಿದೆ. ‘ಸ್ಟೇಗ್’ ಹಮ್ಮಿಕೊಂಡಿರುವ ವಿಶಿಷ್ಟ ಯೋಜನೆಗಳ ವಿವರಣೆ ಭದ್ರತೆಯ ದೃಷ್ಟಿಯಿಂದ ಅಜ್ಞಾತವಾಗಿರುತ್ತವೆ; ಆದರೆ ಒಂದು ಮಾತ್ರ ನಿಜ, ಈ ‘ಯುನಿಟ್’ ಅನೇಕ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸುವುದು.

೪. ಶತ್ರುವನ್ನು ಎದುರಿಸಲು ಉಪಯುಕ್ತ 

ಯುದ್ಧ ಕ್ಷೇತ್ರಕ್ಕಾಗಿ ವೇಗವಾಗಿ ವಿಕಸಿತಗೊಳ್ಳುತ್ತಿರುವ ತಂತ್ರಜ್ಞಾನದಲ್ಲಿ ಉತ್ತಮ ತಂತ್ರಜ್ಞಾನ ಹಾಗೂ ಮಾಹಿತಿಯ ಕೊಡು-ಕೊಳ್ಳುವಿಕೆಗೆ ಸಂಪೂರ್ಣ ಭಾರತೀಯ ಸೈನ್ಯವನ್ನು ಜೋಡಿಸುವ ಕ್ಷಮತೆ ಇರುವುದು, ಇದೂ ಸಹ ಪಾಕಿಸ್ತಾನ ಮತ್ತು ಚೀನಾವನ್ನು ಎದುರಿಸಲು ಸಾಧ್ಯವಾಗುವುದು. ಚೀನೀ ಸೈನ್ಯ ‘೬ಜಿ’ ತಂತ್ರಜ್ಞಾನವನ್ನು ಉಪಯೋಗಿಸುತ್ತಿದ್ದು ಭಾರತದಲ್ಲಿಯೂ ಅದಕ್ಕೆ ಪ್ರಾಧಾನ್ಯತೆಯನ್ನು ನೀಡಲಾಗುವುದು. ‘೬ಜಿ’ ತಂತ್ರಜ್ಞಾನದಿಂದ ಮಾನವರಹಿತ ಸೈನಿಕ ಸ್ವತ್ತುಗಳ ಮೇಲೆ ‘ಅಪರೇಟರ್‌’ನ ಮೂಲಕ ಯೋಗ್ಯ ರೀತಿಯಲ್ಲಿ ನಿಯಂತ್ರಣ ಸಾಧಿಸಲಾಗುವುದು.

– ಬ್ರಿಗೇಡಿಯರ್‌ ಹೇಮಂತ ಮಹಾಜನ (ನಿವೃತ್ತ), ಪುಣೆ.