Major Radhika Sen : ವಿಶ್ವಸಂಸ್ಥೆಯಿಂದ ಮೇಜರ್ ರಾಧಿಕಾ ಸೇನ್ ಗೆ ಸೇನಾ ಪ್ರಶಸ್ತಿ !

ನವ ದೆಹಲಿ – ಕಾಂಗೋದಲ್ಲಿ ವಿಶ್ವಸಂಸ್ಥೆಯ ಮಿಷನ್‌ನಲ್ಲಿ ಸೇವೆ ಸಲ್ಲಿಸಿದ ಭಾರತೀಯ ಮಹಿಳೆ ಮೇಜರ್ ರಾಧಿಕಾ ಸೇನ್ ಅವರಿಗೆ ಮಿಲಿಟರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ಹಸ್ತದಿಂದ ಈ ಪ್ರಶಸ್ತಿ ಕೊಡಲಾಗುವುದು. ಮೇ 30 ರಂದು ‘ಅಂತರರಾಷ್ಟ್ರೀಯ ವಿಶ್ವಸಂಸ್ಥೆಯ ಶಾಂತಿರಕ್ಷಕ ದಿನ’ದ ನಿಮಿತ್ತ ಮೇಜರ್ ರಾಧಿಕಾ ಸೇನ್ ಅವರಿಗೆ ‘2023 ವಿಶ್ವಸಂಸ್ಥೆಯ ಮಿಲಿಟರಿ ಜೆಂಡರ್ ಅಡ್ವೊಕೇಟ್ ಆಫ್ ದಿ ಇಯರ್ ಪುರಸ್ಕಾರ್’ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಈ ಕುರಿತು ಪ್ರತಿಕ್ರಿಯಿಸಿರುವ ರಾಧಿಕಾ ಸೇನ್ ಇವರು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು, ನನಗೆ ಸಂದ ಗೌರವ ಎಂದು ಹೇಳಿದ್ದಾರೆ.

ಮೇಜರ್ ರಾಧಿಕಾ ಸೇನ್ ಅವರನ್ನು ಮಾರ್ಚ್ 2023 ರಿಂದ ಏಪ್ರಿಲ್ 2024 ರವರೆಗೆ ‘ಇಂಡಿಯನ್ ರಾಪಿಡ್ ಡಿಪ್ಲೋಯ್ಮೆಂಟ್ ಬೆಟಾಲಿಯನ್’ ಕಮಾಂಡರ್ ಆಗಿ ಕಾಂಗೋ ಗಣರಾಜ್ಯದ ಪೂರ್ವ ಭಾಗದಲ್ಲಿ ನಿಯೋಜಿಸಲಾಗಿತ್ತು. ರಾಧಿಕಾ ಸೇನ್ ಮೂಲತಃ ಹಿಮಾಚಲ ಪ್ರದೇಶದವರಿದ್ದಾರೆ. ಅವರು 1993 ರಲ್ಲಿ ಜನಿಸಿದರು. ಅವರು ಬಯೋಟೆಕ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ನಂತರ ಭಾರತೀಯ ಸೇನೆಗೆ ಸೇರಿದರು.