ಮಾರ್ಚ್ 10 ರಂದು ಹಿಂದಿರುಗುವ ಸೈನಿಕರ ಸ್ಥಾನವನ್ನು ತೆಗೆದುಕೊಳ್ಳಲಿದೆ !

ಮಾಲೆ (ಮಾಲ್ಡೀವ್ಸ್) – ಭಾರತೀಯ ತಾಂತ್ರಿಕ ಸಿಬ್ಬಂದಿಯ ಮೊದಲ ಬ್ಯಾಚ್ ಮಾಲ್ಡೀವ್ಸ್‌ಗೆ ಆಗಮಿಸಿದೆ. ಈ ಸಿಬ್ಬಂದಿ ಮಾರ್ಚ್ 10 ರಂದು ಭಾರತಕ್ಕೆ ಮರಳುವ ಸೈನಿಕರ ಸ್ಥಾನವನ್ನು ಪಡೆಯಲಿದ್ದಾರೆ. ಎಂದು ಮಾಲ್ಡೀವ್ಸ್ ರಕ್ಷಣಾ ಸಚಿವಾಲಯವು ಮಾಹಿತಿ ನೀಡಿದೆ.
ವಾಸ್ತವವಾಗಿ, ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಒಪ್ಪಂದದ ಪ್ರಕಾರ, ಭಾರತೀಯ ಸೈನಿಕರು ಮೇ 10 ರೊಳಗೆ ಭಾರತಕ್ಕೆ ಮರಳುತ್ತಾರೆ ಮತ್ತು ಮಾಲ್ಡೀವ್ಸ್ ರಕ್ಷಣಾ ಘಟಕವನ್ನು ಭಾರತೀಯ ತಾಂತ್ರಿಕ ಸಿಬ್ಬಂದಿ ನಿರ್ವಹಿಸುತ್ತಾರೆ. ಈ ಒಪ್ಪಂದದ ಮೊದಲ ಹಂತವು ಮಾರ್ಚ್ 10 ರೊಳಗೆ ಪೂರ್ಣಗೊಳ್ಳಲಿದೆ.
(ಸೌಜನ್ಯ – GK Drishti)
ಮಾಲ್ಡೀವ್ಸ್‌ನಲ್ಲಿ ಭಾರತದ 3 ವಿಮಾನ ನಿಲ್ದಾಣಗಳು !
ಮಾಲ್ಡೀವ್ಸ್‌ನ ವಿದೇಶಾಂಗ ಸಚಿವಾಲಯದ ಹೇಳಿಕೆಯ ಪ್ರಕಾರ, ಮಾಲ್ಡೀವ್ಸ್‌ನಲ್ಲಿ ಭಾರತದ ಮೂರು ವಿಮಾನ ನಿಲ್ದಾಣಗಳು ಇವೆ. ಇವುಗಳಲ್ಲಿ ಒಂದರಲ್ಲಿ ಇರುವ ಸೈನಿಕರು ಮಾರ್ಚ್ 10 ರೊಳಗೆ ಭಾರತಕ್ಕೆ ಮರಳುತ್ತಾರೆ. ಇದರ ನಂತರ, ಇತರ ಎರಡು ನೆಲೆಗಳಲ್ಲಿ ಇರುವ ಭಾರತೀಯ ಸೈನಿಕರು ಮೇ 10 ರೊಳಗೆ ಭಾರತಕ್ಕೆ ಮರಳುತ್ತಾರೆ.
ಮಾಲ್ಡೀವ್ಸ್‌ನಲ್ಲಿ ಸುಮಾರು 80 ಭಾರತೀಯ ಸೈನಿಕರ ನೇಮಕ !
ಮಾಲ್ಡೀವ್ಸ್‌ನಲ್ಲಿ ಸುಮಾರು 80 ಭಾರತೀಯ ಸೈನಿಕರು ಬೀಡುಬಿಟ್ಟಿದ್ದಾರೆ ಮತ್ತು ಅವರು ಎರಡು ಹೆಲಿಕಾಪ್ಟರ್‌ಗಳು ಮತ್ತು ಒಂದು ವಿಮಾನವನ್ನು ನಿರ್ವಹಿಸುತ್ತಾರೆ. ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳು ಅಲ್ಲಿನ ಜನರಿಗೆ ಮಾನವೀಯ ನೆರವು ಮತ್ತು ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸುತ್ತವೆ.
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!