ಛತ್ತೀಸ್ ಗಢ: ನಕ್ಸಲೀಯರ ಗುಂಡಿನ ದಾಳಿಗೆ ಪೊಲೀಸರ ದಿಟ್ಟ ಪ್ರತ್ಯುತ್ತರ

ಪಲಾಯನಗೊಂಡ ನಕ್ಸಲೀಯರು

ಗಢಚಿರೋಲಿ – ತೆಂದುಪತ್ತಾ ಗುತ್ತಿಗೆದಾರರ ಸಭೆ ಕರೆದು ಹಣ ವಸೂಲಿ ಮಾಡುವ ನಕ್ಸಲೀಯರ ಮೇಲೆ ದಾಳಿ ನಡೆಸಿ ಅವರ ಶಿಬಿರವನ್ನು ಸೈನಿಕರು ಧ್ವಂಸಗೊಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಕ್ಕ ಅಪಾಯಕಾರಿ ಸ್ಫೋಟಕಗಳನ್ನು ಸ್ಥಳದಲ್ಲೇ ನಾಶಪಡಿಸಲಾಗಿದೆ. ನಕ್ಸಲೀಯರು ನಡೆಸಿದ ಗುಂಡಿನ ದಾಳಿಗೆ ಯೋಧರು ತಕ್ಕ ಪ್ರತ್ಯುತ್ತರ ನೀಡಿದರು. ಛತ್ತೀಸ್ ಗಢದ ಗಡಿಭಾಗದ ಸಾವರಗಾವ್ ಬಳಿಯ ದಟ್ಟ ಅರಣ್ಯದಲ್ಲಿ ಜೂನ್ 5ರ ಸಂಜೆ ಈ ಘಟನೆ ನಡೆದಿದೆ. ಪೊಲೀಸರು ಸಿ-60 ಯೋಧರೊಂದಿಗೆ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿದ್ದರು. ದಟ್ಟವಾದ ಕಾಡು ಮತ್ತು ಕತ್ತಲೆಯಿಂದಾಗಿ ನಕ್ಸಲೀಯರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಸಂಪಾದಕೀಯ ನಿಲುವು

ನಕ್ಸಲಿಸಂನ ಸಮಸ್ಯೆ ನಿರ್ಮೂಲನೆಯಾಗುವವರೆಗೆ ಸರ್ಕಾರವು ದಿಟ್ಟ ಕ್ರಮ ತೆಗೆದುಕೊಳ್ಳಬೇಕು!