ಚೀನಾಜೊತೆಗಿನ ಗಡಿ ವಿವಾದದ ಬಗ್ಗೆ ಭಾರತೀಯ ಸೈನ್ಯ ಗಮನವಿಟ್ಟಿದೆ !

ಭಾರತ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರ ಹೇಳಿಕೆ !

ನವದೆಹಲಿ – ಕಳೆದ ೪ ವರ್ಷಗಳಿಂದ ಲಡಾಕ್ ದಲ್ಲಿ ಚೀನಾ ಜೊತೆ ನಡೆಯುತ್ತಿರುವ ಗಡಿ ವಿವಾದದ ಬಗ್ಗೆ ಭಾರತೀಯ ಸೈನ್ಯವು ಗಮನ ಇರಿಸಿದೆ. ನಮ್ಮ ಸಿದ್ಧತೆ ಉನ್ನತ ಮಟ್ಟದ್ದಾಗಿದೆ. ಸಂಪೂರ್ಣ ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲಿ (೩ ಸಾವಿರದ ೪೮೮ ಕಿಲೋಮೀಟರ್ ಗಡಿಯಲ್ಲಿ) ನಮ್ಮ ಸೈನ್ಯವನ್ನು ನೇಮಕ ಮಾಡಲಾಗಿದೆ, ಎಂಬ ಆತ್ಮವಿಶ್ವಾಸ ಪೂರಿತ ಹೇಳಿಕೆಯನ್ನು ಭಾರತೀಯ ಸೈನ್ಯ ಪ್ರಮುಖ ಜನರಲ್ ಮನೋಜ್ ಪಾಂಡೆ ಅವರು ಒಂದು ವಾರ್ತಾವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನೀಡಿದರು.

೧. ಜನರಲ್ ಪಾಂಡೆ ಅವರು ಮಾತನಾಡುತ್ತಾ, ನಾವು ಪೂರ್ವ ಲಡಾಕ್ ದಲ್ಲಿನ ಪರಿಸ್ಥಿತಿಯ ಕುರಿತು ಸೈನ್ಯ ಮತ್ತು ರಾಜನೈತಿಕ ಮಟ್ಟದಲ್ಲಿ ಚರ್ಚೆ ನಡೆಸಿದ್ದೇವೆ. ಇಲ್ಲಿಯವರೆಗೆ ೨೧ ಸುತ್ತಿನ ಚರ್ಚೆಗಳು ನಡೆದಿವೆ. ಈಗಿನ ಸಮಸ್ಯೆಯ ಬಗ್ಗೆ ಸಂವಾದದಿಂದಲೇ ಪರಿಹಾರ ಕಂಡುಕೊಳ್ಳಲು ಸಾಧ್ಯ.

೨. ಚಳಿಗಾಲದ ತುಲನೆಯಲ್ಲಿ ಬೇಸಿಗೆಯ ಕಾಲದಲ್ಲಿ ಈ ಅಪಾಯ (ಸಮಸ್ಯೆ) ಸ್ವಲ್ಪ ಬೇರೆ ರೀತಿಯದ್ದಾಗಿರುತ್ತದೆ. ನಮ್ಮ ಪಶ್ಚಿಮಾತ್ಯ ಪ್ರತಿಸ್ಪರ್ಧಿಯ ಹಾಗೆ ಉತ್ತರದಲ್ಲಿನ ಪ್ರತಿಸ್ಪರ್ಧಿಯ ಸಂದರ್ಭದಲ್ಲಿ ನಾನು ಇಷ್ಟೇ ಹೇಳು ಬಯಸುತ್ತೇನೆ ಅದೇನೆಂದರೆ, ನಮ್ಮ ತಯಾರಿಯು ಅತ್ಯುನ್ನತ ಮಟ್ಟದ್ದಾಗಿದೆ. ತುರ್ತು ಪರಿಸ್ಥಿತಿಯನ್ನು ಎದುರಿಸಲು ನಮ್ಮ ಬಳಿ ಸಾಕಷ್ಟು ಶಸ್ತ್ರಾಸ್ತ್ರ ಸಂಗ್ರಹ ಇವೆ ಎಂಬುದನ್ನು ಕೂಡ ನಾವು ಖಚಿತಪಡಿಸಿಕೊಂಡಿದ್ದೇವೆ. ನಮ್ಮ ಪ್ರತ್ಯುತ್ತರ ನೀಡುವ ವ್ಯವಸ್ಥೆ ಕೂಡ ಬಲವಾಗಿದೆ ಎಂದು ಅವರು ತಿಳಿಸಿದರು.