ಕೇಂದ್ರ ಸರಕಾರದ ಸ್ಪಷ್ಟೀಕರಣ
ನವದೆಹಲಿ – ದೇಶದ ನೂತನ ಸೈನಿಕ ಶಾಲೆಗಳು ನಡೆಸುವ ದಾಯಿತ್ವವನ್ನು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದವರಿಗೆ ನೀಡಿರುವ ಕುರಿತಾದ ದಾವೆಗಳನ್ನು ರಕ್ಷಣಾ ಸಚಿವಾಲಯವು ತಿರಸ್ಕರಿಸಿದೆ. ಸೈನಿಕ ಶಾಲೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಲೇಖನಗಳೆಲ್ಲವೂ ನಿರಾಧಾರವಾಗಿವೆ. ನಮ್ಮ ಬಳಿ ಹೊಸ ಸೈನಿಕ ಶಾಲೆಗಾಗಿ ೫೦೦ ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅವುಗಳಲ್ಲಿ ಇಲ್ಲಿಯವರೆಗೆ ನಾವು ೪೫ ಶಾಲೆಯ ಅರ್ಜಿಗಳನ್ನು ಸಮ್ಮತಿಸಿದ್ದೇವೆ. ಅರ್ಜಿದಾರರ ರಾಜಕೀಯ ಒಲವು ಮತ್ತು ವಿಚಾರಧಾರೆ ಅಥವಾ ಇತರ ಯಾವುದೇ ವಿಷಯವೂ ಆಯ್ಕೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವುದಿಲ್ಲ. ಈ ಪ್ರಕ್ರಿಯೆಯ ರಾಜಕಾರಣ ಮಾಡುವುದು ಅಥವಾ ಯೋಜನೆಯ ಉದ್ದೇಶದ ಬಗ್ಗೆ ಅಪನಂಬಿಕೆ ನಿರ್ಮಾಣ ಮಾಡುವುದು ತಪ್ಪಾಗಿದೆ. ಆನ್ಲೈನ್ ಜಾಲತಾಣದಲ್ಲಿ ,’ ದ ರಿಪೋರ್ಟರ್ ಕಲೆಕ್ಟೀವ್ ‘ ಪ್ರಸಾರ ಮಾಡಿದ ಒಂದು ವರದಿಯಲ್ಲಿ, ಕೇಂದ್ರ ಸರಕಾರವು ಶೇಕಡ ೬೨ ರಷ್ಟು ಹೊಸ ಸೈನಿಕ ಶಾಲೆಯ ಹೊಣೆಗಾರಿಕೆಯನ್ನು ಸಂಘ ಪರಿವಾರ ಮತ್ತು ಬಿಜೆಪಿ ನಾಯಕರಿಗೆ ಸಂಬಂಧಿಸಿದವರಿಗೆ ನೀಡಲಾಗಿದೆ ಎಂದು ಹೇಳಿದೆ.
ಮೊದಲನೆಯ ಹಂತದಲ್ಲಿ ೧೦೦ ಸೈನ್ಯ ಶಾಲೆಗಳು ಆರಂಭ
ಕೇಂದ್ರ ಸರಕಾರವು ಮೊದಲನೆಯ ಹಂತದಲ್ಲಿ ದೇಶದಲ್ಲಿ ೧೦೦ ಸೈನಿಕ ಶಾಲೆ ತೆರೆಯುವ ಯೋಜನೆ ಜಾರಿಗೊಳಿಸಿದೆ. ಇದರ ಅಂತರ್ಗತ ಅನೇಕ ಸ್ವಯಂಸೇವಿ ಸಂಸ್ಥೆ , ರಾಜ್ಯ ಸರಕಾರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಖಾಸಗಿ ಕ್ಷೇತ್ರದ ಜೊತೆಗೆ ಪಾಲುದಾರಿಕೆ ಮಾಡಲಾಗಿದೆ. ಈ ಶಾಲೆಗಳಿಗೆ ತಾತ್ಕಾಲಿಕವಾಗಿ ಅನುಮತಿ ನೀಡಲಾಗಿದೆ. ಶಾಲಾ ಪರಿಶೀಲನ ಸಮಿತಿಯ ವಾರ್ಷಿಕ ಪರಿಶೀಲನೆಯ ಆಧಾರದಿಂದ ಈ ಮಾನ್ಯತೆ ನೀಡಲಾಗುತ್ತದೆ. ಅಂದರೆ, ಈ ಯೋಜನೆಯ ಅಂತರ್ಗತ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ಈ ಶಾಲೆ ನಡೆಸಲು ಅನುಮತಿ ನೀಡಬೇಕೋ ಬೇಡವೋ, ಎಂಬುದು ನಿಗದಿತ ಮಾನದಂಡ ಪೂರ್ಣಗೊಳಿಸಿದ ನಂತರವೇ ನೀಡಲಾಗುವುದು ಎಂದು ಸರಕಾರ ಸ್ಪಷ್ಟಪಡಿಸಿದೆ