Ban On Import of Arms: ಭಾರತೀಯ ಸೇನಾಪಡೆಯಿಂದ ಇನ್ನು ಮುಂದೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಆಮದು ನಿಷೇಧ!

ಈ ನಿರ್ಣಯಕ್ಕೆ ಬರಲು, ಸ್ವಾತಂತ್ರ್ಯಾ ನಂತರ 77 ವರ್ಷಗಳು ಬೇಕಾಯಿತು, ಇದು ಎಲ್ಲಾ ಪಕ್ಷದ ಸರ್ಕಾರಗಳಿಗೆ ಲಜ್ಜಾಸ್ಪದ!

ನವದೆಹಲಿ – ಭಾರತೀಯ ಸೇನಾಪಡೆಯು ಇನ್ನು ಮುಂದೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಆಮದು ಮಾಡಿಕೊಳ್ಳುವುದಿಲ್ಲ. ಮುಂದಿನ ಹಣಕಾಸು ವರ್ಷದಿಂದ ಮದ್ದುಗುಂಡುಗಳ ಆಮದನ್ನು ಸಂಪೂರ್ಣವಾಗಿ ನಿಲ್ಲಿಸುವ ಗುರಿಯನ್ನು ಹೊಂದಿದೆ. ಸೇನಾಪಡೆಗೆ ಸಶಸ್ತ್ರ ಪಡೆಗಳ ಅವಶ್ಯಕತೆಗೆ ಅನುಸಾರ ದೇಶೀಯ ಕೈಗಾರಿಕೆಗಳಿಂದ ಶಸ್ತ್ರಾಸ್ತ್ರಗಳನ್ನು ಪೂರೈಸಬೇಕು; ಏಕೆಂದರೆ ದೇಶೀಯ ಕೈಗಾರಿಕೆಗಳು ಎಲ್ಲಾ ಬೇಡಿಕೆಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿವೆ.

ಭಾರತೀಯ ಸೇನೆಯ ಮೇಜರ್ ಜನರಲ್ ವಿ.ಕೆ.ಶರ್ಮಾ ಮಾತನಾಡಿ, ಪ್ರಸ್ತುತ ಸೇನೆಯು ವಾರ್ಷಿಕ 6 ರಿಂದ 8 ಸಾವಿರ ಕೋಟಿ ಮೌಲ್ಯದ ಮದ್ದುಗುಂಡುಗಳನ್ನು ಖರೀದಿಸುತ್ತಿದೆ. ಈಗ ಅವುಗಳನ್ನು ಭಾರತೀಯ ಮೂಲಗಳಿಂದ ಸರಬರಾಜು ಮಾಡಲಾಗುವುದು. ಶೀಘ್ರದಲ್ಲೇ ಭಾರತೀಯ ಸಂಸ್ಥೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಪ್ರಮುಖ ಪಾತ್ರ ವಹಿಸಬಹುದೆಂಬ ವಿಶ್ವಾಸವನ್ನು ಮೇಜರ್ ಜನರಲ್ ಶರ್ಮಾ ಅವರು ವ್ಯಕ್ತಪಡಿಸಿದರು