Indian Army Inducts Indigenous Drones: ಭಾರತೀಯ ಸೇನೆಗೆ ದೊರಕಿತು ಮೊದಲ ಸ್ವದೇಶಿ ಮಾರಣಾಂತಿಕ ಡ್ರೋನ್ ‘ನಾಗಾಸ್ತ್ರ-೧’ ! 

ನವದೆಹಲಿ – ಭಾರತೀಯ ಸೇನೆಯಲ್ಲಿ ’ನಾಗಸ್ತ್ರ-೧’ ಈ ಸ್ವದೇಶಿ ವಿನ್ಯಾಸದ ಮಾರಣಾಂತಿಕ ಡ್ರೋನ್‌ಅನ್ನು ಸೇರ್ಪಡೆಗೊಳಿಸಲಾಗಿದೆ. ಸೇನೆಯಲ್ಲಿ ಈ ಡ್ರೋನ್‌ನ ಮೊದಲ ಗುಂಪಿನ ಸಮಾವೇಶ ಆಗಿದ್ದು ಅದರಲ್ಲಿ ೧೨೦ ಡ್ರೋನ್‌ಗಳಿವೆ. ೪ ಸಾವಿರದ ೫೦೦ ಮೀಟರ್ ಎತ್ತರದಲ್ಲಿ ಹಾರಬಲ್ಲ ಈ ಡ್ರೋನ್ ಶತ್ರುಗಳ ಬಂಕರ್‌ಗಳು(ಸೇನಾ ನೆಲೆ), ಔಟ್‌ಪೋಸ್ಟ್‌ಗಳು(ಚೌಕಗಳು) ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹಗಳನ್ನು ನಾಶಪಡಿಸಬಲ್ಲದು. ಸೇನೆಯ ಮಾರಣಾಂತಿಕ ಡ್ರೋನ್‌ಗಳನ್ನು ’ಲೋಯಿಟರಿಂಗ್ ಮುನಿಶನ್’ ಎಂದು ಕರೆಯುತ್ತಾರೆ. ಈ ಡ್ರೋನ್‌ಗಳನ್ನು ’ಎಕನಾಮಿಕ್ಸ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ ಕಂಪನಿ’ ಮತ್ತು ’ಝಡ್ ಮೋಷನ್ ಆಟೋನಾಮಸ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್’ ಇವರು ತಯಾರಿಸಿವೆ. ಎರಡೂ ಸಂಸ್ಥೆಗಳು ಸೌರ ಕೈಗಾರಿಕೆಗಳ ಉಪ-ಸಂಸ್ಥೆಗಳಾಗಿವೆ. ಸೇನೆಗೆ ಒಟ್ಟು ೪೫೦ ನಾಗಾಸ್ತ್ರಗಳನ್ನು ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಚೀನಾದ ಗಡಿಯ ಹತ್ತಿರ ಲಡಾಖ್‌ನ ನುಬ್ರಾ ಕಣಿವೆಯಲ್ಲಿ ಇದರ ಪರೀಕ್ಷೆಗಳನ್ನು ನಡೆಸಲಾಗಿದೆ.

ನಾಗಾಸ್ತ್ರವು ಸ್ಥಿರ ರೆಕ್ಕೆಗಳನ್ನು ಹೊಂದಿರುವ ಡ್ರೋನ್ ಆಗಿದೆ. ಇದು ಒಂದು ಬಾರಿಗೆ ೬೦ ನಿಮಿಷಗಳ ಕಾಲ ಹಾರಬಲ್ಲದು. ಅದರಲ್ಲಿ ಒಂದು ಕಿಲೋ ತೂಕದ ಸ್ಫೋಟಕಗಳನ್ನು ಸಾಗಿಸಬಹುದಾಗಿದೆ. ಅವುಗಳ ಸ್ಫೋಟ್ ೨೦ ಮೀಟರ್ ಪ್ರದೇಶವನ್ನು ನಾಶಪಡಿಸಬಲ್ಲದು.