ಸನಾತನದ ಆಶ್ರಮಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಬೇಕಾಗುವ ವಿವಿಧ ಉಪಕರಣಗಳು !

ಸನಾತನದ ವಿವಿಧೆಡೆಗಳಲ್ಲಿರುವ ಆಶ್ರಮಗಳಲ್ಲಿ ರಾಷ್ಟ ಮತ್ತು ಧರ್ಮಕ್ಕಾಗಿ ನಿಸ್ವಾರ್ಥವಾಗಿ ಸೇವೆ ಮಾಡುತ್ತಿರುವ ವಿವಿಧ ವಯೋಮಾನದ ನೂರಾರು ಸಾಧಕರು ಇರುತ್ತಾರೆ. ಆಶ್ರಮದಲ್ಲಿನ ವೃದ್ಧ ಸಾಧಕರಿಗೆ ಹಾಗೂ ಮಧುಮೇಹ, ಸಂಧಿವಾತ, ಹೃದಯಕ್ಕೆ ಸಂಬಂಧಿತ ರೋಗಗಳು ಇವೇ ಮುಂತಾದ ದೈಹಿಕ ಕಾಯಿಲೆಗಳಿಂದ ಬಳಲುತ್ತಿರುವ ಸಾಧಕರಿಗೆ ವೈದ್ಯಕೀಯ ಚಿಕಿತ್ಸೆಗೆ ಬೇಕಾಗುವ ಉಪಕರಣಗಳ ಅವಶ್ಯಕತೆ ಇದೆ.

ಅವಿರತವಾಗಿ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿರುವ ರಾಮನಾಥಿ (ಗೋವಾ) ಸನಾತನದ ಆಶ್ರಮಕ್ಕೆ ಧಾನ್ಯಗಳನ್ನು ಅರ್ಪಿಸಿ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಿ

‘ಸನಾತನ ಸಂಸ್ಥೆಯು ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳಿಗಾಗಿ ಕಟಿಬದ್ಧವಾಗಿದೆ. ಸನಾತನದ ಆಶ್ರಮ ಹಾಗೂ ಸೇವಾಕೇಂದ್ರಗಳ ಮೂಲಕ ಧರ್ಮಪ್ರಸಾರ ಕಾರ್ಯವನ್ನು ನಡೆಸಲಾಗುತ್ತದೆ.

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಇನ್ನೂ ೮೦೦೦ ಗ್ರಂಥಗಳನ್ನು ಪ್ರಕಟಿಸುವಷ್ಟು ಜ್ಞಾನ ಸಂಗ್ರಹವಾಗಿದೆ. ಈ ಅಗಾಧ ಪ್ರಮಾಣದಲ್ಲಿರುವ ಗ್ರಂಥಸಂಪತ್ತನ್ನು ಮರಾಠಿಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆಯಲ್ಲಿ ಭಾಗಿಯಾಗುವುದೆಂದರೆ ಈ ಧರ್ಮಕಾರ್ಯದ ಅಮೂಲ್ಯ ಅವಕಾಶವೇ ಆಗಿದೆ.

ಸಾಧಕರೇ, ಸಾಧಕರ ಹೆಸರ ಹೇಳಿ ಹಣ ಕೇಳುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರದಿಂದಿರಿ !

‘ಒಂದು ನಗರದಲ್ಲಿ ಸಾಧಕಿಯೊಬ್ಬಳ ಮನೆಗೆ ಅಪರಿಚಿತ ಮಹಿಳೆಯೊಬ್ಬಳು ದ್ವಿಚಕ್ರ ವಾಹನದಿಂದ ಬಂದಿದ್ದಳು. ಆಗ ಆ ಸಾಧಕಿಯು ಪರವೂರಿಗೆ ಹೋಗಿದ್ದಳು. ಆಕೆಯ ಪತಿ ಮನೆಯಲ್ಲಿದ್ದರು. ಈ ಮಹಿಳೆಯು ಸಾಧಕಿಯ ಪತಿಗೆ, “ನಿಮ್ಮ ಪತ್ನಿಯ ಬಳಿ ಸನಾತನದ ಗ್ರಂಥ ಮತ್ತು ಸನಾತನದ ಪಂಚಾಂಗ ವಿತರಣೆಯ ೪-೫ ಸಾವಿರ ರೂಪಾಯಿ ಹಣವಿದೆ. ಅದನ್ನು ನನಗೆ ಕೊಡಿ’, ಎಂದು ಹೇಳಿದಳು.

ಕೊರೋನಾದ ಓಮಿಕ್ರಾನ್ ತಳಿಯ ವಿರುದ್ಧ ಆಧ್ಯಾತ್ಮಿಕ ಬಲ ಪಡೆಯಲು ನಾಮಜಪ !

೨೦೨೦ ನೇ ಇಸವಿಯಿಂದ ಜಗತ್ತಿನಾದ್ಯಂತದ ಜನರಿಗೆ ಕೊರೋನಾ ವಿಷಾಣುಗಳ (ವೈರಸ್) ಸಂಕಟ ಎದುರಾಗಿದೆ ಮತ್ತು ೨ ವರ್ಷಗಳಾದರೂ ಇದುವರೆಗೂ ಆ ವಿಷಾಣುಗಳ ಸೋಂಕು ಜನರಿಗೆ ಆಗುತ್ತಲೇ ಇದೆ. ಅಂತಹುದರಲ್ಲಿ ಈಗ ಕೊರೋನಾದ ಹೊಸ ತಳಿಯಾಗಿರುವ ಓಮಿಕ್ರಾನ್ ಹೆಸರಿನ ವಿಷಾಣುಗಳು ಹರಡುತ್ತಿರುವುದು ಗಮನಕ್ಕೆ ಬಂದಿದೆ. ಕೊರೋನಾ ವಿಷಾಣುಗಳೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹೋರಾಡಲು ಯಾವ ನಾಮಜಪವನ್ನು ಮಾಡಬೇಕು ಮತ್ತು ಅದನ್ನು ಎಷ್ಟು ಸಮಯ ಮಾಡಬೇಕು ?, ಎಂಬ ಮಾಹಿತಿ, ಹಾಗೆಯೇ ಇದರ ಧ್ವನಿಮುದ್ರಿತ ನಾಮಜಪವನ್ನು ಸನಾತನ ಸಂಸ್ಥೆಯ ಜಾಲತಾಣದಲ್ಲಿ ಕೊಡಲಾಗಿದೆ. ಜಗತ್ತಿನಾದ್ಯಂತ … Read more

ನೆಲಬೇವು (ಕಾಲಮೇಘ) ವನಸ್ಪತಿ ಮತ್ತು ರೋಗಗಳಲ್ಲಿ ಅದರ ಉಪಯೋಗ

ಈ ವನಸ್ಪತಿಯು ಸಾಂಕ್ರಾಮಿಕರೋಗಗಳಿಗೆ ತುಂಬಾ ಉಪಯುಕ್ತವಾಗಿದೆ. ಇದು ಬಹಳ ಕಹಿ ಇರುತ್ತದೆ. ಇದನ್ನು ಜ್ವರಕ್ಕೆ ಮತ್ತು ಹೊಟ್ಟೆಯಲ್ಲಿನ ಜಂತುಗಳ ನಿವಾರಣೆಗೆ ಉಪಯೋಗಿಸುತ್ತಾರೆ. ಇದು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ; ಹಾಗಾಗಿ ಕೆಲವೆಡೆಗಳಲ್ಲಿ ಮಳೆಗಾಲದಲ್ಲಿ ಮತ್ತು ಶರತ್ಕಾಲದಲ್ಲಿ ವಾರಕ್ಕೊಮ್ಮೆ ಅದರ ಕಷಾಯ ಮಾಡಿ ಸೇವಿಸುವ ವಾಡಿಕೆ ಇದೆ.

ಸನಾತನದ ರಾಮನಾಥಿ (ಗೋವಾ) ಆಶ್ರಮಕ್ಕೆ ವಿದ್ಯುತ್‍ಚಾಲಿತ ದ್ವಿಚಕ್ರ ವಾಹನದ ಆವಶ್ಯಕತೆ !

ಪ್ರಸ್ತುತ ಪೆಟ್ರೋಲ್‍ನ ಬೆಲೆ ಏರುತ್ತಿರುವುದರಿಂದ, ಪೆಟ್ರೋಲ್‍ನಿಂದ ಚಲಿಸುವ ದ್ವಿಚಕ್ರ ವಾಹನಗಳ ವೆಚ್ಚ ಅಧಿಕವಾಗುತ್ತಿದೆ. ಈ ವೆಚ್ಚವನ್ನು ಕಡಿಮೆ ಮಾಡಲು ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿ ವಿದ್ಯುತ್‍ಚಾಲಿತ ದ್ವಿಚಕ್ರ ವಾಹನಗಳ ಆವಶ್ಯಕತೆಯಿದೆ.

ಸನಾತನದ ಸಾಧಕ ಎಂದು ಹೇಳಿಕೊಂಡು ಆರ್ಥಿಕ ವಂಚನೆ ಮಾಡುವ ಸುಳ್ಯದ ಶಿವಾನಂದ ಪ್ರಭು ಇವರಿಂದ ಎಚ್ಚರದಿಂದಿರಿ !

ಸನಾತನದ ಸಾಧಕ ಎಂದು ಹೇಳಿ ಓರ್ವ ವ್ಯಕ್ತಿಯು ಅನೇಕರಿಗೆ ಆರ್ಥಿಕವಾಗಿ ವಂಚಿಸಿರುವುದು ಗಮನಕ್ಕೆ ಬಂದಿದೆ. ಆತ ಸುಳ್ಯದವನಾಗಿದ್ದು ತನ್ನ ಹೆಸರು ಶಿವಾನಂದ ಪ್ರಭು ಎಂದು ಹೇಳಿ ವಂಚನೆ ಮಾಡಿದ್ದಾನೆಂದು ಮೋಸ ಹೋದ ವ್ಯಕ್ತಿಯಿಂದ ತಿಳಿದುಬಂದಿದೆ.

ಸಾಪ್ತಾಹಿಕ ಮತ್ತು ಪಾಕ್ಷಿಕ ‘ಸನಾತನ ಪ್ರಭಾತ’ಗಳಲ್ಲಿ ಮುದ್ರಿತ ಲೇಖನಗಳನ್ನುಈಗ ಜಾಲತಾಣದ ಒಂದೇ ‘ಲಿಂಕ್’ನಲ್ಲಿ ವೀಕ್ಷಿಸುವ ಸೌಲಭ್ಯ ಲಭ್ಯ !

ಸಾಪ್ತಾಹಿಕ ಸನಾತನ ಪ್ರಭಾತದ ಆಯಾ ವಾರದ ಸಂಚಿಕೆಯು ಒಂದೇ ಲಿಂಕ್‌ನಲ್ಲಿ ಓದುವ ವ್ಯವಸ್ಥೆ ಇದೆ. ಅದಕ್ಕಾಗಿ ಜಾಲತಾಣದ ಮುಖ್ಯ ಪುಟದಲ್ಲಿನ ‘ಮೆನುಬಾರ್’ ನಲ್ಲಿನ ‘ಈ ವಾರದ ಸಾಪ್ತಾಹಿಕದ ಮೇಲೆ ಕ್ಲಿಕ್ ಮಾಡಿದರೆ, ಆ ಲಿಂಕ್‌ನಲ್ಲಿ ಆ ವಾರದ ಸಾಪ್ತಾಹಿಕದ ಎಲ್ಲ ಲೇಖನಗಳು ‘ಪೋಸ್ಟ್’ಗಳ ರೂಪದಲ್ಲಿ ಒಂದರ ಕೆಳಗೆ ಒಂದರಂತೆ ಕಾಣಿಸಿಕೊಳ್ಳುತ್ತವೆ.

ಆಪತ್ಕಾಲದ ಪೂರ್ವಸಿದ್ಧತೆಯೆಂದು ಕಾರ್ತಿಕ ಏಕಾದಶಿಯಿಂದ (೧೫.೧೧.೨೦೨೧) ಆರಂಭವಾದ ಸನಾತನದ ‘ಮನೆ ಮನೆಯಲ್ಲಿ ಕೈದೋಟ’ ಅಭಿಯಾನದಲ್ಲಿ ಪಾಲ್ಗೊಳ್ಳಿ

ಇಂದು ಮಾರುಕಟ್ಟೆಯಲ್ಲಿ ಸಿಗುವ ತರಕಾರಿ, ಹಣ್ಣು ಇತ್ಯಾದಿಗಳ ಮೇಲೆ ಹಾನಿಕರ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ. ಇಂತಹ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದರಿಂದ ವಿಷಯುಕ್ತ ಪದಾರ್ಥಗಳು ನಮ್ಮ ಹೊಟ್ಟೆ ಸೇರುತ್ತವೆ. ಇದರಿಂದ ರೋಗಗಳು ಉಂಟಾಗುತ್ತದೆ. ಸಾಧನೆಗಾಗಿ ದೇಹವು ಆರೋಗ್ಯಕರವಾಗಿರಬೇಕು.