ಸಾಧಕರಿಗೆ ಸೂಚನೆ ಮತ್ತು ಓದುಗರಲ್ಲಿ ವಿನಂತಿ
ಮಾರ್ಚ್ ೨೦೨೦ ರಿಂದ ಜಾಗತಿಕ ಮಹಾಮಾರಿ ‘ಕೋವಿಡ್’ ಭಾರತದಲ್ಲಿ ಕೋಲಾಹಲವೆಬ್ಬಿಸುತ್ತಿದೆ. ಕಳೆದ ವರ್ಷವಿಡೀ ಇದು ಸಾಂಕ್ರಾಮಿಕವಾಗಿ ಹರಡುವಲ್ಲಿ ರೋಗಿಗಳ ದೃಷ್ಟಿಯಿಂದ ಮುಂದಿನ ಎರಡು ಪ್ರಮುಖ ಕಾರಣಗಳು ಗಮನಕ್ಕೆ ಬಂದಿವೆ.
೧. ಸಾಮಾಜಿಕ ಅಂತರವನ್ನು ಕಾಪಾಡುವುದು, ಮಾಸ್ಕ್ ಬಳಸುವುದು ಹಾಗೂ ಸಮಾರಂಭಗಳಲ್ಲಿ ಭಾಗವಹಿಸದಿರುವುದು ಇತ್ಯಾದಿ ಮೂಲಭೂತ ವಿಷಯಗಳನ್ನು ಅನೇಕ ಬಾರಿ ಮಾಧ್ಯಮಗಳ ಮೂಲಕ ಹೇಳಲಾಗುತ್ತಿದ್ದರೂ, ವ್ಯಕ್ತಿಗಳು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಅನೇಕರು ನಿಷ್ಕಾಳಜಿಯಿಂದ ವರ್ತಿಸುತ್ತಾರೆ.
೨. ವಿವಿಧ ಮಾಧ್ಯಮಗಳಿಂದ ಸರಿಯಾಗಿ ಔಷಧೋಪಚಾರವನ್ನು ಪಡೆದುಕೊಳ್ಳುವಂತೆ ತಿಳುವಳಿಕೆ ನೀಡಲಾಗುತ್ತಿದ್ದರೂ, ರೋಗದ ಲಕ್ಷಣಗಳು ತಮ್ಮಲ್ಲಿ ಕಂಡು ಬಂದರೂ ಅವನ್ನು ಉದ್ದೇಶ ಪೂರ್ವಕವಾಗಿ ಮುಚ್ಚಿಡುತ್ತಾರೆ. ಸಮಯಕ್ಕೆ ಸರಿಯಾಗಿ ಔಷಧೋಪಚಾರವನ್ನು ಪಡೆದುಕೊಳ್ಳುವುದಿಲ್ಲ. ಇದರಿಂದ ವಿಷಾಣು ದೇಹದೊಳಗೆ ಪ್ರಬಲವಾಗಿ ಹರಡಿ ರೋಗಿಯು ಜೀವವನ್ನು ಕಳೆದುಕೊಂಡಿರುವ ಉದಾಹರಣೆಗಳು ಕಂಡು ಬಂದಿವೆ.
ಸಾಧಕರು ಈ ಎರಡೂ ತಪ್ಪುಗಳನ್ನು ಮಾಡದೇ ಶೀತ, ಕೆಮ್ಮು, ಗಂಟಲು ನೋವು, ಮೈ ಕೈ ನೋವು, ಛಳಿ, ಜ್ವರ, ಮೂಗಿಗೆ ವಾಸನೆ ಗೊತ್ತಾಗದಿರುವುದು, ಭೇದಿಯಾಗುವುದು, ಸುಸ್ತು, ಹಸಿವಾಗದಿರುವುದು ಇಂತಹ ಯಾವುದೇ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಔಷಧೋಪಚಾರವನ್ನು ಪಡೆದುಕೊಳ್ಳುವುದು ಆವಶ್ಯಕವಿದೆ.
ಕೊರೊನಾ ರೋಗಕ್ಕೆ ಯಶಸ್ವಿಯಾಗಿ ಉಪಚಾರವನ್ನು ಮಾಡಿರುವ ಡಾಕ್ಟರರಿಂದ ಔಷಧೋಪಚಾರವನ್ನು ಪಡೆದುಕೊಳ್ಳಲು ಆದ್ಯತೆಯನ್ನು ನೀಡಿ
ತಮ್ಮ ಪ್ರದೇಶದಲ್ಲಿ ಕೊರೊನಾ ರೋಗಕ್ಕೆ ಯಶಸ್ವಿಯಾಗಿ ಉಪಚಾರವನ್ನು ಮಾಡಿರುವ ಅಲೋಪಥಿ ಡಾಕ್ಟರರು, ಆಯುರ್ವೇದದ ವೈದ್ಯರು ಅಥವಾ ಹೋಮಿಯೋಪಥಿ ಡಾಕ್ಟರರು ಇದ್ದರೆ ಅವರಿಂದ ಔಷಧೋಪಚಾರವನ್ನು ಪಡೆದುಕೊಳ್ಳಲು ಪ್ರಾಮುಖ್ಯತೆಯನ್ನು ನೀಡಬೇಕು. ಈ ಮಾಹಿತಿ ಸಿಗದಿದ್ದರೆ ಹತ್ತಿರದ ಡಾಕ್ಟರರಿಗೆ ತೋರಿಸಿ ಉಪಚಾರವನ್ನು ಪ್ರಾರಂಭಿಸಬೇಕು. ಡಾಕ್ಟರರು ತಿಳಿಸುವ ಎಲ್ಲ ಆವಶ್ಯಕ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಡಾಕ್ಟರರಿಂದ ಯಾವುದೇ ಲಕ್ಷಣಗಳನ್ನು ಮುಚ್ಚಿಡಬಾರದು. ಅವರು ತಿಳಿಸಿದಂತೆ ತಮ್ಮ ಆರೋಗ್ಯದ ವರದಿಯನ್ನು ಆಯಾ ಸಮಯಕ್ಕೆ ನೀಡಬೇಕು. ಉಪಚಾರ ನಡೆಯುತ್ತಿರುವಾಗಲೂ ರೋಗದ ತೀವ್ರತೆ ಹೆಚ್ಚಾಗುತ್ತಿದ್ದರೆ, ಆವಶ್ಯಕವೆನಿಸಿದರೆ ಬೇರೆ ಡಾಕ್ಟರರ ಅಥವಾ ವೈದ್ಯರ ಅಭಿಪ್ರಾಯವನ್ನು ಪಡೆದುಕೊಳ್ಳಬೇಕು ಮತ್ತು ಆಸ್ಪತ್ರೆಗೆ ದಾಖಲಾಗುವ ಬಗ್ಗೆ ತಾರತಮ್ಯದಿಂದ ನಿರ್ಣಯವನ್ನು ತೆಗೆದುಕೊಳ್ಳಬೇಕು. ಸ್ವಂತ ಮನಸ್ಸಿನಂತೆ, ಹಾಗೆಯೇ ಪುಸ್ತಕಗಳು ಅಥವಾ ಸಾಮಾಜಿಕ ಮಾಧ್ಯಮಗಳ ‘ಪೋಸ್ಟ್’ಗಳನ್ನು ಓದಿ ತಾವೇ ಮಾಡಿಕೊಳ್ಳುವ ಉಪಚಾರಗಳ ಮೇಲೆ ಅವಲಂಬಿಸಿರಬಾರದು.
ಜಾಗರೂಕತೆಯಿಂದ ಇದ್ದು ಉಪಚಾರ ಮಾಡಿಕೊಳ್ಳುವುದು ಆವಶ್ಯಕ !
ಶೇ. ೮೫ ರಷ್ಟು ಕೊರೊನಾ ಪೀಡಿತರು ತಮ್ಮ ರೋಗನಿರೋಧಕ ಶಕ್ತಿಯ ಬಲದಿಂದ ಗುಣಮುಖರಾಗುತ್ತಾರೆ, ಕೇವಲ ಶೇ. ೧೫ ರಷ್ಟು ರೋಗಿಗಳು ಮುಂದಿನ ಹಂತಕ್ಕೆ ಹೋಗುತ್ತಾರೆ ಎನ್ನುವ ವಿಷಯ ಇಲ್ಲಿಯ ವರೆಗಿನ ಎಲ್ಲೆಡೆಯ ನಿರೀಕ್ಷಣೆಯಾಗಿದೆ. ಹೀಗಿದ್ದರೂ ಶೇ. ೧೫ ರಷ್ಟು ಯಾರು ? ಎಂದು ಮೊದಲೇ ಯಾರೂ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಈ ರೋಗದ ಸಂದರ್ಭದಲ್ಲಿ ನಿಷ್ಕಾಳಜಿಯಿಂದ ವರ್ತಿಸದೇ ಆದಷ್ಟು ಬೇಗನೆ ಉಪಚಾರವನ್ನು ಪ್ರಾರಂಭಿಸಬೇಕು. ಕೊರೊನಾ ಪೀಡಿತರು ಗುಣಮುಖರಾಗುವ ಪ್ರಮಾಣ ಅಧಿಕವಿರುವುದರಿಂದ ಈ ರೋಗಕ್ಕೆ ಹೆದರಬಾರದು; ಆದರೆ ಜಾಗರೂಕತೆಯಿಂದ ಇರಬೇಕು.
ಜನ್ಮ-ಮೃತ್ಯು ಇವು ಪ್ರಾರಬ್ಧಕ್ಕನಸಾರವಾಗಿದ್ದರೂ, ಜೀವದ ರಕ್ಷಣೆಗಾಗಿ ಸಮಯಕ್ಕೆ ಸರಿಯಾಗಿ ಸೂಕ್ತ ಕ್ರಮ ವಹಿಸುವುದು ನಮ್ಮ ಸಾಧನೆಯಾಗಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಕೃತಿಯನ್ನು ಮಾಡಬೇಕು.
– ಡಾ. ಪಾಂಡುರಂಗ ಮರಾಠೆ, ಸನಾತನ ಆಶ್ರಮ, ರಾಮನಾಥಿ, ಗೋವಾ.