ನೈಸರ್ಗಿಕ ಕೃಷಿಯ ಬಗೆಗಿನ ತಳಮಳದಿಂದ ಪುಣೆ ನಗರದಲ್ಲಿ ಗೋಶಾಲೆಯನ್ನು ನಿರ್ಮಿಸಿದ ಕಟ್ಟಡಕಾಮಗಾರಿ ಉದ್ಯಮಿ ಶ್ರೀ. ರಾಹುಲ ರಾಸನೆ

ಸನಾತನದ ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನ ಮಾಲಿಕೆ ೧೦

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/57479.html
ಶ್ರೀ. ರಾಹುಲ ರಾಸನೆ

೧. ಜೀವಾಮೃತವನ್ನು ಬಳಸಿ ಮನೆಯಲ್ಲಿಯೇ ತರಕಾರಿಗಳನ್ನು ಬೆಳೆಸುವುದು

ಸುಮಾರು ೫ ವರ್ಷಗಳ ಹಿಂದೆ ಪುಣೆಯ ಕೋಂಢವಾದಲ್ಲಿ ಆದರಣೀಯ ಪದ್ಮಶ್ರೀ ಸುಭಾಷ ಪಾಳೆಕರ ಗುರುಜೀಯವರ ‘ಸುಭಾಷ ಪಾಳೆಕರ ನೈಸರ್ಗಿಕ ಕೃಷಿ ಪದ್ಧತಿ’ ಈ ಕುರಿತಾದ ಶಿಬಿರವಿತ್ತು. ಈ ಶಿಬಿರಕ್ಕೆ ನಾನು ಹೋಗಿದ್ದೆನು. ಮೊದಲಿನಿಂದಲೇ ‘ನಿಸರ್ಗ ಮತ್ತು ಮಾಲಿನ್ಯಮುಕ್ತ ವಾತಾವರಣಕ್ಕಾಗಿ ಏನಾದರೂ ಮಾಡಬೇಕು’, ಎಂಬ ತಳಮಳ ನನ್ನಲ್ಲಿತ್ತು. ಗುರುಜೀಯವರ ಶಿಬಿರದ ನಂತರ ನನಗೆ ನಿಜವಾಗಿಯೂ ಹೃದಯ ತುಂಬಿ ಬಂದಿತು. ಇದಕ್ಕೂ ಮೊದಲು ನಾನು ಮನೆಯಲ್ಲಿನ ಹಸಿ ಕಸವನ್ನು ಮನೆಯಲ್ಲಿಯೇ ಕುಂಡಗಳಲ್ಲಿ ಹಾಕುತ್ತಿದ್ದೆನು; ಆದರೆ ಗುರುಜೀಯವರ ಶಿಬಿರದ ನಂತರ ನಾನು ಜೀವಾಮೃತ ಮತ್ತು ಘನ ಜೀವಾಮೃತವನ್ನು ಬಳಸಲು ಆರಂಭಿಸಿದೆನು. ಇದರಿಂದ ಬಹಳ ಒಳ್ಳೆಯ ತರಕಾರಿಗಳು ಮತ್ತು ಹಣ್ಣುಗಳು ಸಿಗತೊಡಗಿದವು. ನನಗೆ ‘ಬಾಲ್ಕನಿ’ಯ ಜಾಗ ಕಡಿಮೆ ಬೀಳತೊಡಗಿತು. ನಂತರ ನಾನು ಕಿಟಕಿಯ ಗ್ರಿಲ್‌ನಲ್ಲಿಯೂ ತರಕಾರಿಗಳನ್ನು ಬೆಳೆಸಲು ಆರಂಭಿಸಿದೆನು.

೨. ನಗರದಲ್ಲಿ ಜೀವಾಮೃತವನ್ನು ತಯಾರಿಸಲು ಗೋಮಯ ಮತ್ತು ಗೋಮೂತ್ರ ಸಿಗಬೇಕೆಂದು ಗೋಶಾಲೆಯನ್ನು ಸ್ಥಾಪಿಸುವುದು

ಆ ಸಮಯದಲ್ಲಿ ನಗರದಲ್ಲಿ ಗೋಮಯ (ದೇಶಿ ಹಸುವಿನ ಸೆಗಣಿ) ಮತ್ತು ಗೋಮೂತ್ರ ಸಿಗುವುದು ಕಠಿಣವಾಗುತ್ತಿತ್ತು. ಬಹಳಷ್ಟು ಪ್ರಯತ್ನಿಸಿ ಪುಣೆಯ ಹೊರಗಿನಿಂದ ಸೆಗಣಿ, ಗೋಮೂತ್ರ ಅಥವಾ ಜೀವಾಮೃತವನ್ನು ಪಡೆಯಬೇಕಾಗುತ್ತಿತ್ತು. ಇದಕ್ಕೆ ಏನಾದರೂ ಪರಿಹಾರೋಪಾಯ ಮಾಡಬೇಕೆಂದು ಯಾವಾಗಲೂ ಮನಸ್ಸಿನಲ್ಲಿ ವಿಚಾರ ಬರುತ್ತಿತ್ತು. ನನ್ನ ಓರ್ವ ಸ್ನೇಹಿತ ಶ್ರೀ. ತುಷಾರ ಬಾಳಾಸಾಹೇಬ ಝಾಡ ಇವರ ಪುಣೆಯಲ್ಲಿ ಸ್ವಾರಗೆಟ್ ಪ್ರದೇಶದಲ್ಲಿ ಲಕ್ಷ್ಮೀನಾರಾಯಣ ಥಿಯೇಟರ್ ಹಿಂದೆ ಒಂದು ಜಾಗ ಇದೆ. ಒಂದು ದಿನ ನಾನು ಅವರ ತಂದೆ ಅಂದರೆ, ಶ್ರೀ. ಬಾಳಾಸಾಹೇಬ ಝಾಡ ಇವರನ್ನು ಆ ಜಾಗದಲ್ಲಿ ಆಕಳುಗಳನ್ನು ಸಾಕುವ ಬಗ್ಗೆ ಕೇಳಿದೆನು. ಆಗ ಅವರು ಆನಂದದಿಂದ ಆಕಳುಗಳನ್ನು ಸಾಕಲು ಅನುಮತಿ ನೀಡಿದರು. ನಾವು ತಕ್ಷಣ ಒಂದು ಆಕಳನ್ನು ತೆಗೆದುಕೊಂಡು ಬಂದೆವು. ಕೆಲವು ದಿನಗಳ ನಂತರ ಅದನ್ನು ಸಂಭಾಳಿಸಲು ಒಬ್ಬ ವ್ಯಕ್ತಿಯನ್ನು ನೇಮಿಸಿದೆವು. ನಂತರ ನಾವು ಇನ್ನು ಕೆಲವು ಆಕಳುಗಳನ್ನು ತಂದೆವು ಮತ್ತು ನಮ್ಮ ಗೋಶಾಲೆಯು ಆರಂಭವಾಯಿತು.

೩. ನಗರದಲ್ಲಿನ ಜನರಿಗೆ ವಿಷರಹಿತ ತರಕಾರಿಗಳು ಸಿಗಲಿ, ಎಂಬ ಉದ್ದೇಶದಿಂದ ಮೇಲ್ಛಾವಣಿ ಕೃಷಿಯ ಬಗ್ಗೆ ಶಿಬಿರಗಳನ್ನು ಆಯೋಜಿಸುವುದು

ಕೆಲವು ದಿನಗಳ ನಂತರ ನಾವು ಗೋಶಾಲೆಯಲ್ಲಿಯೇ ‘ಮೇಲ್ಛಾವಣಿ ಕೃಷಿ’ ಈ ಕುರಿತಾದ ಮೊದಲ ಶಿಬಿರವನ್ನು ಆಯೋಜಿಸಿದೆವು. ಶ್ರೀಮತಿ ಜ್ಯೋತಿತಾಯಿ ಶಹಾ ಇವರು ಇದರಲ್ಲಿ ಮಾರ್ಗದರ್ಶನ ಮಾಡಿದರು. ಆ ಸಮಯದಲ್ಲಿ ೨೦೦ ಜನರ ಉಪಸ್ಥಿತಿ ಇತ್ತು. ಮೊದಲ ಶಿಬಿರದಲ್ಲಿಯೇ ದೊರಕಿದ ಉತ್ತಮ ಬೆಂಬಲದ ನಂತರ ನಾವು ಇನ್ನೊಂದು ಶಿಬಿರವನ್ನು ನಡೆಸಲು ನಿಶ್ಚಯಿಸಿದೆವು. ಇದಕ್ಕಾಗಿ ೮೦೦ ಜನರು ಹೆಸರುಗಳನ್ನು ನೋಂದಾಯಿಸಿದರು. ೨೦.೧೦.೨೦೧೯ ಈ ದಿನದಂದು ನಡೆದ ಈ ಶಿಬಿರದ ನಂತರ ಜನರು ಮನೆಯಲ್ಲಿಯೇ ಮೇಲ್ಛಾವಣಿ ಕೃಷಿಯನ್ನು ಮಾಡತೊಡಗಿದರು ಮತ್ತು ನಮ್ಮ ಗೋಕುಲ ಗೋಶಾಲೆಯಿಂದ ನಿಯಮಿತವಾಗಿ ಸೆಗಣಿ, ಗೋಮೂತ್ರ, ಜೀವಾಮೃತ ಮತ್ತು ಘನಜೀವಾಮೃತವನ್ನು ತೆಗೆದುಕೊಂಡು ಹೋಗತೊಡಗಿದರು. ನಗರದಲ್ಲಿಯು ನಾವು ಈ ವಿಷಯವನ್ನು ಪೂರೈಸಬಹುದು, ಎಂದು ನಮಗೆ ಬಹಳ ಆನಂದವಾಗುತ್ತಿತ್ತು. ಪ್ರತಿ ಶನಿವಾರ ನಾವು ಗೋಶಾಲೆಯಲ್ಲಿ ಶ್ರಮದಾನವನ್ನು ನಡೆಸತೊಡಗಿದೆವು. ಗೋಶಾಲೆಯನ್ನು ನಡೆಸುವಾಗ ‘ಸುಭಾಷ ಪಾಳೆಕರ ನೈಸರ್ಗಿಕ ಕೃಷಿ ಪರಿವಾರ’ದ ಸಹಕಾರ ಮತ್ತು ಪ್ರೀತಿಯು ಸಿಗುತ್ತಿದೆ. ಈ ಕೃಷಿಪದ್ಧತಿಯು ಆದಷ್ಟು ಬೇಗನೆ ಎಲ್ಲರಿಗೂ ತಿಳಿಯಲಿ ಮತ್ತು ಎಲ್ಲ ನಗರಗಳಲ್ಲಿನ ನಾಗರಿಕರಿಂದ ಮೇಲ್ಛಾವಣಿ ಕೃಷಿ ಸಾಧಿಸುವಂತಾಗಿ ಎಲ್ಲರಿಗೂ ವಿಷಮುಕ್ತ ಆಹಾರವು ದೊರಕಲಿ, ಎಂದು ಆರ್ತ ಪ್ರಾರ್ಥನೆ !

– ಶ್ರೀ. ರಾಹುಲ ರಾಸನೆ, ಗೋಕುಲ ಗೋಶಾಲೆ, ಪುಣೆ (೮.೧೧.೨೦೨೧)

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ !

ಕೈದೋಟಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕ ಲೇಖನ ಕಳುಹಿಸಿ

‘ಗಿಡಗಳನ್ನು ಬೆಳೆಸುವುದು (ಕೃಷಿ ಮಾಡುವುದು) ಇದು ಒಂದು ಪ್ರಾಯೋಗಿಕ ವಿಷಯವಾಗಿದೆ. ಇದರಲ್ಲಿ ಚಿಕ್ಕ ಚಿಕ್ಕ ಅನುಭವಗಳಿಗೂ ಬಹಳ ಮಹತ್ವವಿರುತ್ತದೆ. ಯಾವ ಸಾಧಕರು ಇಲ್ಲಿಯವರೆಗೆ ಕೃಷಿಯನ್ನು ಮಾಡಿಲ್ಲವೋ, ಅವರು ಕೃಷಿಯನ್ನು ಮಾಡುವಾಗ ತಮಗೆ ಬಂದ ಅನುಭವ, ಆದ ತಪ್ಪುಗಳು, ಆ ತಪ್ಪುಗಳಿಂದ ಕಲಿಯಲು ಸಿಕ್ಕಿದ ಅಂಶಗಳು, ಕೃಷಿಗೆ ಸಂಬಂಧಿಸಿದಂತೆ ಮಾಡಿದ ವೈಶಿಷ್ಟ್ಯಪೂರ್ಣ ಪ್ರಯೋಗ ಇವುಗಳ ಬಗೆಗಿನ ಬರವಣಿಗೆಯನ್ನು ತಮ್ಮ ಛಾಯಾಚಿತ್ರದೊಂದಿಗೆ ಕಳುಹಿಸಬೇಕು. ಈ ಬರವಣಿಗೆಯನ್ನು ‘ಸನಾತನ ಪ್ರಭಾತದಲ್ಲಿ ಪ್ರಕಟಿಸಲಾಗುತ್ತದೆ. ಇದರಿಂದ ಇತರರಿಗೂ ಕಲಿಯಲು ಸಿಗುತ್ತದೆ. ಬರವಣಿಗೆಯನ್ನು ಕಳುಹಿಸಲು

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, c/o ‘ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧

ಗಣಕೀಯ ವಿಳಾಸ : [email protected]