ಅಧ್ಯಾತ್ಮದ ಜಿಜ್ಞಾಸುಗಳು, ವಿವಿಧ ಯೋಗ ಮಾರ್ಗಗಳಿಗನುಸಾರ ಸಾಧನೆ ಮಾಡುವ ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಮಾರ್ಗದರ್ಶನವಾಗಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬುದಕ್ಕಾಗಿ ಸನಾತನವು ಆಚಾರಧರ್ಮ, ಧಾರ್ಮಿಕ ಕೃತಿ, ದೇವತೆಗಳು, ಸಾಧನೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ಗ್ರಂಥ ಮತ್ತು ಕಿರುಗ್ರಂಥಗಳನ್ನು ಪ್ರಕಾಶಿಸಿದೆ. ಈ ಜ್ಞಾನದಿಂದ ಕೇವಲ ಭಾರತ ಮಾತ್ರವಲ್ಲ ಜಗತ್ತಿನೆಲ್ಲೆಡೆಯ ಮಾನವರಿಗೆ ಲಾಭವಾಗುತ್ತಿದ್ದು ಅವರ ಜೀವನ ಉದ್ಧಾರವಾಗುತ್ತಿದೆ ಗ್ರಂಥ ನಿರ್ಮಿತಿ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದ್ದು ಡಿಸೆಂಬರ್ ೨೦೨೧ ರ ವರೆಗೆ ಸನಾತನದ ೩೫೦ ಗ್ರಂಥಗಳ ೧೭ ಭಾಷೆಗಳಲ್ಲಿ ೮೪,೭೩,೦೦೦ ಪ್ರತಿಗಳನ್ನು ಪ್ರಕಟಿಸಲಾಗಿದ್ದು, ಇನ್ನೂ ೮೦೦೦ ಗ್ರಂಥಗಳನ್ನು ಪ್ರಕಟಿಸುವಷ್ಟು ಜ್ಞಾನ ಸಂಗ್ರಹವಾಗಿದೆ. ಈ ಅಗಾಧ ಪ್ರಮಾಣದಲ್ಲಿರುವ ಗ್ರಂಥ ಸಂಪತ್ತನ್ನು ಮರಾಠಿಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆಯಲ್ಲಿ ಭಾಗಿಯಾಗುವುದೆಂದರೆ ಈ ಧರ್ಮಕಾರ್ಯದ ಸುವರ್ಣಾವಕಾಶವೇ ಆಗಿದೆ. ಅನುವಾದ ಮಾಡುವವರಿಗೆ ಮರಾಠಿ ಮತ್ತು ಕನ್ನಡ ಭಾಷೆಯ ಸಂಪೂರ್ಣ ಜ್ಞಾನವಿರಬೇಕು, ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವುದು ಮತ್ತು ಅಂತರ್ಜಾಲದ ಮಾಹಿತಿಯಿರಬೇಕು. ಆಸಕ್ತಿಯಿರುವ ಧರ್ಮಾಭಿಮಾನಿಗಳು ಸಂಪರ್ಕಿಸಬೇಕಾಗಿ ವಿನಂತಿಸುತ್ತೇವೆ.
ಸಂಪರ್ಕ ಕ್ರ. : ೯೩೪೨೪೩೫೬೧೭
ವಿ-ಅಂಚೆ : [email protected]
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !