Harvard Khalistan Article : ಖಲಿಸ್ತಾನಿ ಭಯೋತ್ಪಾದನೆ ಲೇಖನ; ಭಯದಿಂದ ಮಾಸಪತ್ರಿಕೆಯಿಂದ ತೆಗೆದ ಹಾರ್ವರ್ಡ್ ವಿವಿ
ಜಗತ್ತಿನ ಅತ್ಯಂತ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆ ‘ಹಾರ್ವರ್ಡ್ ವಿಶ್ವವಿದ್ಯಾಲಯ’ದ ದ್ವಿಮುಖ ಬಹಿರಂಗವಾಗಿದೆ. ಸ್ವತಃ ಅಭಿವ್ಯಕ್ತಿ ಸ್ವಾತಂತ್ರ್ಯದ ಬೆಂಬಲಿಗರು ಎಂದು ಹೇಳಿಕೊಳ್ಳುವ ಈ ಸಂಸ್ಥೆಯು ‘ಖಲಿಸ್ತಾನಿ ಭಯೋತ್ಪಾದನೆ ಮತ್ತು ಅದರ ಭಾರತ-ಕೆನಡಾ ಸಂಬಂಧಗಳ ಮೇಲಿನ ಪರಿಣಾಮ’ ಈ ವಿಷಯದ ಕುರಿತು ಬರೆದ ಲೇಖನವನ್ನು ಖಲಿಸ್ತಾನಿಗಳ ಒತ್ತಡಕ್ಕೆ ಮಣಿದು ತೆಗೆದುಹಾಕಿದೆ.