ಅಮೇರಿಕೆಯಲ್ಲಿ ಸರಕಾರಿ ಆ್ಯಪ್ನಲ್ಲಿ ಅಶ್ಲೀಲ ಸಂಭಾಷಣೆ; 100 ಗುಪ್ತಚರ ಅಧಿಕಾರಿಗಳ ವಜಾ

ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್

ವಾಷಿಂಗ್ಟನ (ಅಮೇರಿಕಾ) – ಅಮೇರಿಕಾದ ಗುಪ್ತಚರ ಸಂಸ್ಥೆಯ ‘ಇಂಟೆಲಿಂಕ್’ ಹೆಸರಿನ ಆ್ಯಪ್ ನಲ್ಲಿ ಲೈಂಗಿಕ ಸಂಭಾಷಣೆ ನಡೆಸಿದ 100 ಕ್ಕೂ ಹೆಚ್ಚು ಗುಪ್ತಚರ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ ಎಂದು ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಸ್ವತಃ ತಿಳಿಸಿದ್ದಾರೆ. ಲೇಖಕ ಕ್ರಿಸ್ಟೋಫರ್ ರುಫೊ ಈ ದುಷ್ಕೃತ್ಯವನ್ನು ಬಹಿರಂಗಪಡಿಸಿದರು.

1. ಗುಪ್ತಚರ ಅಧಿಕಾರಿಗಳಿಗೆ ವರ್ಗೀಕೃತ ಮತ್ತು ಸೂಕ್ಷ್ಮ ಭದ್ರತಾ ಮೂಲಗಳ ಕುರಿತು ಚರ್ಚಿಸಲು ‘ಇಂಟೆಲಿಂಕ್’ ಎಂಬ ಅಪ್ಲಿಕೇಶನ್ ಅನ್ನು ರಚಿಸಲಾಗಿದೆ. ಈ ಅತ್ಯಂತ ಸುರಕ್ಷಿತ ಅಪ್ಲಿಕೇಶನ್ ಅನ್ನು ಅಶ್ಲೀಲ ಸಂಭಾಷಣೆಗಳಿಗಾಗಿ ಬಳಸಲಾಗುತ್ತಿತ್ತು. ಇದರಲ್ಲಿ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಯ ಕುರಿತಾದ ಚರ್ಚೆಯೂ ಸೇರಿತ್ತು.

2. ಈ ಪ್ರಕರಣದ ಬಗ್ಗೆ ಗಬ್ಬಾರ್ಡ್ ಮಾತನಾಡುತ್ತಾ, ಉದ್ಯೋಗದ ಬಳಕೆಗಾಗಿ ಉದ್ದೇಶಿಸಲಾದ ಅಪ್ಲಿಕೇಶನ್ ಬಳಸಿ ಈ ರೀತಿ ವರ್ತಿಸುವುದು ನಾಚಿಕೆಯಿಲ್ಲದ ಸಂಗತಿ ಎಂದು ಹೇಳಿದರು. ಸಂಬಂಧಪಟ್ಟ ಅಧಿಕಾರಿಗಳನ್ನು ವಜಾಗೊಳಿಸುವುದಲ್ಲದೆ, ಅವರ ಭದ್ರತಾ ಅನುಮತಿಗಳನ್ನು ಸಹ ರದ್ದುಗೊಳಿಸಲಾಗುತ್ತಿದೆ.