ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನವನ್ನು ಭಾರತದ ವಿರುದ್ಧ ಬಳಸಲು ಸಾಧ್ಯವಿಲ್ಲ!
ವಾಷಿಂಗ್ಟನ (ಅಮೇರಿಕಾ) – ಈಗ ಅಮೇರಿಕಾ ಪಾಕಿಸ್ತಾನಕ್ಕೆ ನೀಡಿದ ‘ಎಫ್ -16’ ಯುದ್ಧ ವಿಮಾನಗಳ ಮೇಲೆ ಕಣ್ಣಿಟ್ಟಿದೆ. ಅಮೇರಿಕಾ ಈ ವಿಮಾನಗಳನ್ನು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಪಾಕಿಸ್ತಾನಕ್ಕೆ ನೀಡಿತ್ತು; ಆದರೆ ಈ ವಿಮಾನಗಳನ್ನು ಭಾರತದ ವಿರುದ್ಧ ಬಳಸಲಾಗಿದ್ದರಿಂದ ಮತ್ತು ಕಾಶ್ಮೀರ ಗಡಿಯಲ್ಲಿ ನಿಯೋಜಿಸಲಾಗಿದ್ದರಿಂದ ಅಮೇರಿಕಾ ಈ ನಿರ್ಧಾರ ತೆಗೆದುಕೊಂಡಿದೆ, ಎಂದು ಹೇಳಲಾಗುತ್ತಿದೆ. ಈ ವಿಮಾನಗಳ ಮೇಲ್ವಿಚಾರಣೆಗಾಗಿ ಟ್ರಂಪ್ ಸರಕಾರ ದೊಡ್ಡ ಹಣಕಾಸಿನ ನಿಯೋಜನೆ ಮಾಡಿದೆ.
2019 ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಬಾಲಕೋಟ್ನಲ್ಲಿರುವ ಭಯೋತ್ಪಾದಕ ಶಿಬಿರದ ಮೇಲೆ ಭಾರತೀಯ ವಾಯುಪಡೆಯು ದಾಳಿ ಮಾಡಿದ ನಂತರ ಪಾಕಿಸ್ತಾನ ವಾಯುಪಡೆಯು ಭಾರತದ ವಿರುದ್ಧ ಎಫ್ -16 ವಿಮಾನಗಳನ್ನು ಬಳಸಿತು. ಈ ವಿಮಾನವನ್ನು ಭಾರತೀಯ ‘ಮಿಗ್-21’ ವಿಮಾನ ಹೊಡೆದುರುಳಿಸಿತು; ಆದರೆ ಪಾಕಿಸ್ತಾನ ಅದನ್ನು ನಿರಾಕರಿಸಿತ್ತು.