ಡೊಂಬಿವಲಿ: ‘ಹಿಂದೂ ಗ್ರಾಹಕ ಜಾಗೃತಿ ಅಭಿಯಾನ’ದ ಪ್ರಾರಂಭ!

ಭಾರತ ಹಿಂದವಿ ಸ್ವರಾಜ್ಯವಾಗಿದೆ ಎಂದು ಜಗತ್ತಿಗೆ ಸಾರಿ ಹೇಳಿ! – ದುರ್ಗೇಶ ಪರುಳಕರ್, ಪ್ರಸಿದ್ಧ ಲೇಖಕರು ಮತ್ತು ಭಾಷಣಕಾರರು

ಡೊಂಬಿವಲಿ, ಮಾರ್ಚ್ 31 (ವಾರ್ತೆ).- ವ್ಯಾಪಾರ ಕ್ಷೇತ್ರದಲ್ಲಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ವ್ಯಾಪಕವಾಗಿ ಮಾರಾಟ ಮಾಡುವಂತೆ, ಸರಕಾರವು ‘ಓಂ ಪ್ರಮಾಣಪತ್ರ’ಕ್ಕೆ ಮಾನ್ಯತೆ ನೀಡಿ ಹಿಂದೂಗಳ ರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇದು ಇಸ್ಲಾಮಿಕ್ ರಾಷ್ಟ್ರವಲ್ಲ, ಹಿಂದವಿ ಸ್ವರಾಜ್ಯ ಎಂದು ಛತ್ರಪತಿ ಶಿವಾಜಿ ಮಹಾರಾಜರು ನಮಗೆ ಕಲಿಸಿದ್ದಾರೆ. ಈಗ ನಾವು ಅದನ್ನು ಜಗತ್ತಿಗೆ ಸಾರಿ ಹೇಳಬೇಕು. ಅದಕ್ಕಾಗಿ ನಾವು ಯುಗಾದಿಯ ಶುಭ ಮುಹೂರ್ತವನ್ನು ಆರಿಸಿಕೊಂಡಿದ್ದೇವೆ. ಈ ಬ್ರಹ್ಮಧ್ವಜ ಆಕಾಶವನ್ನು ಮುಟ್ಟುವಷ್ಟು ಎತ್ತರಕ್ಕೆ ಏರಬೇಕು. ಈ ಮೂಲಕ ಹಿಂದೂಗಳ ಬೃಹತ್ ಸಂಘಟನೆ ನಡೆದರೆ, ಅದು ಜಗತ್ತಿಗೆ ಉತ್ತಮ ಸಂದೇಶವನ್ನು ನೀಡುತ್ತದೆ. ಇದರಿಂದಾಗಿ ವಿಶ್ವಗುರು ಸ್ಥಾನದ ಗೌರವ ನಮಗೆ ಸಿಗುತ್ತದೆ, ಇದು ನಮ್ಮ ಅಂತಿಮ ಗುರಿಯಾಗಿದೆ ಎಂದು ಪ್ರಸಿದ್ಧ ಲೇಖಕ ಮತ್ತು ಭಾಷಣಕಾರರಾದ ಶ್ರೀ. ದುರ್ಗೇಶ ಪರುಳಕರ್ ಅವರು ಹೇಳಿದರು. ನಗರದಲ್ಲಿ ನಡೆದ ಹೊಸ ವರ್ಷದ ಸ್ವಾಗತ ಯಾತ್ರೆಯಲ್ಲಿ, ಸ್ವಾತಂತ್ರ್ಯವೀರ ಸಾಮಾಜಿಕ ಸಂಸ್ಥೆ, ಡೊಂಬಿವಲಿ ಶಾಖೆ ಮತ್ತು ‘ಓಂ ಪ್ರತಿಷ್ಠಾನ’ ಶಿದೋರಿ ಉಪಾಹಾರ ಗೃಹದ ಬಳಿ ಜಂಟಿಯಾಗಿ ಹಿಂದೂ ಗ್ರಾಹಕ ಜಾಗೃತಿ ಅಭಿಯಾನ ಪ್ರಾರಂಭಿಸಿದರು. ಈ ಅಭಿಯಾನದಡಿ ‘ಓಂ’ ಪ್ರಮಾಣೀಕೃತ ಗ್ರಾಹಕರ ಉಚಿತ ನೋಂದಣಿಯನ್ನು ಪ್ರಾರಂಭಿಸಲಾಯಿತು.