ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೋನಾಲ್ಡ್ ಟ್ರಂಪ್‌ ಮತ್ತು ಭಾರತ ಇವುಗಳ ಹಿತಸಂಬಂಧ

ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೋನಾಲ್ಡ್ ಟ್ರಂಪ್‌

 

ಅಮೇರಿಕಾದ ೪೭ ನೇ ರಾಷ್ಟ್ರಪತಿಯೆಂದು ಡೋನಾಲ್ಡ್ ಟ್ರಂಪ್‌ ಇವರು ಪ್ರಮಾಣವಚನ ಸ್ವೀಕರಿಸಿದರು ಹಾಗೂ ಅಮೇರಿಕಾದಲ್ಲಿ ‘ಟ್ರಂಪ್‌-೨’ ಪರ್ವ ಆರಂಭವಾಯಿತು. ಅವರ ಈ ಎರಡನೆಯ ಆಡಳಿತಾವಧಿ ಭಾರತಕ್ಕೆ ಹೇಗಿರಬಹುದು, ಎಂಬ ವಿಷಯದಲ್ಲಿ ಕುತೂಹಲವಿದೆ. ‘ಜಗತ್ತಿನ ಎಲ್ಲಕ್ಕಿಂತ ಹಳೆಯ ಪ್ರಜಾಪ್ರಭುತ್ವ’ ಆಗಿರುವ ‘ಅಮೇರಿಕಾ’ ಮತ್ತು ‘ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ’ ಆಗಿರುವ ‘ಭಾರತ’ ಈ ಎರಡೂ ದೇಶಗಳ ನಡುವೆ ಶೀತಲಸಮರದ ಕಾಲದಲ್ಲಿ ಅನೇಕ ಸಮಸ್ಯೆಗಳಿಂದ ಸಂಬಂಧ ಹದಗೆಟ್ಟಿತ್ತು. ಎರಡೂ ದೇಶಗಳ ಜಾಗತಿಕ ರಾಜಕಾರಣಗಳತ್ತ ನೋಡುವ ದೃಷ್ಟಿಕೋನ ಭಿನ್ನವಾಗಿತ್ತು. ಅಮೇರಿಕಾ ಮತ್ತು ಭಾರತದ ಪರಸ್ಪರರ ಹಿತಸಂಬಂಧದ ಬಗ್ಗೆ ಈ ಲೇಖನದಲ್ಲಿ ತರ್ಕವಿತರ್ಕವನ್ನು ಮಾಡಲಾಗಿದೆ.

ಲೇಖಕರು : ಡಾ. ಶೈಲೇಂದ್ರ ದೇವಳಾಣಕರ್, ವಿದೇಶ ನಿಲುವಿನ ವಿಶ್ಲೇಷಕರು, ಪುಣೆ.

೧. ಭಾರತವನ್ನು ನೋಡುವ ಅಮೇರಿಕಾದ ದೃಷ್ಟಿಕೋನ ಬದಲಾಗುವುದರಲ್ಲಿನ ೩ ಸಂಗತಿಗಳು

ಭಾರತವು ಆದರ್ಶವಾದಿ ದೃಷ್ಟಿಕೋನದಿಂದ ಹಾಗೂ ಅಮೇರಿಕಾವು ಹಿತಸಂಬಂಧ ಮತ್ತು ವಾಸ್ತವÀವಾದಿ ದೃಷ್ಟಿಕೋನ ದಿಂದ ಜಗತ್ತಿನ ರಾಜಕಾರಣದತ್ತ ನೋಡುತ್ತಿತ್ತು. ಆದ್ದರಿಂದ ಸಂಬಂಧದಲ್ಲಿ ಉದ್ವಿಗ್ನತೆಯಿತ್ತು; ಆದರೆ ಕಳೆದ ಒಂದು ದಶಕ ದಲ್ಲಿ ಅಮೇರಿಕಾದ ಈ ದೃಷ್ಟಿಕೋನ ಬದಲಾಗಲು ಭಾರತದ ೩ ಪ್ರಸಂಗಗಳು ಪ್ರಾಮುಖ್ಯವಾಗಿ ಕಾರಣವಾಗಿವೆ.

ಅ. ಇವುಗಳಲ್ಲಿ ಒಂದು ‘ಆಧಾರ ಕ್ರಾಂತಿ’. ಇಂದು ಭಾರತದಲ್ಲಿನ ಶೇ. ೯೦ ರಷ್ಟು ನಾಗರಿಕರ ಡಿಜಿಟಲ್‌ ಪರಿಚಯ ಆಧಾರ ಕಾರ್ಡ್‌ನ ಮೂಲಕ ಸಿದ್ಧವಾಗಿದೆ.

ಆ. ಎರಡನೆಯದ್ದು, ‘ದೂರಸಂಚಾರ ಕ್ರಾಂತಿ’. ಇಂಟರ್‌ನೆಟ್‌ ನ ‘೫-ಜಿ’ ತಂತ್ರಜ್ಞಾನ ಬಳಕೆಯಲ್ಲಿರುವಾಗಲೇ ಭಾರತ ‘೬-ಜಿ’ ತಂತ್ರಜ್ಞಾನದ ‘ಬ್ಲೂಪ್ರಿಂಟ್’ (ನಕಾಶೆ) ಸಿದ್ಧಪಡಿಸಿದೆ.

ಇ. ಮೂರನೆಯದ್ದು ‘ಸಾಧನಸಂಪತ್ತಿನ ವಿಕಾಸದ ಕ್ರಾಂತಿ’. ಇದು  ಮೂಲಭೂತ ಸೌಲಭ್ಯಗಳ ಕ್ಷೇತ್ರದ ವಿಕಾಸದಿಂದ ನಿರ್ಮಾಣ

ವಾಗಿದೆ. ಕಳೆದ ೯ ವರ್ಷಗಳಲ್ಲಿ ಭಾರತದ ರಸ್ತೆಗಳು, ರೈಲ್ವೇ ಮಾರ್ಗ, ಜಲಮಾರ್ಗ, ಜಲಸಾರಿಗೆ, ವಿಮಾನ ನಿಲ್ದಾಣಗಳು, ಬಂದರುಗಳು, ರಾಷ್ಟ್ರೀಯ ಹೆದ್ದಾರಿಗಳು ಇವೆಲ್ಲವೂ ಬೃಹತ್ಪ್ರಮಾಣದಲ್ಲಿ ವಿಕಾಸ ಹೊಂದಿವೆ. ಇದರಿಂದ ಭಾರತದಲ್ಲಿನ ‘ಲಾಜಿಸ್ಟಿಕ್‌ ಕಾಸ್ಟ್‌’ (ಸಾಮಗ್ರಿಗಳ ಸಾಗಾಟದ ಖರ್ಚು) ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಲಿಕ್ಕಿದೆ.

ಡಾ. ಶೈಲೇಂದ್ರ ದೇವಳಾಣಕರ್‌

೨. ಅಮೇರಿಕಾ ಭಾರತದೊಂದಿಗೆ ಮಾಡಿಕೊಂಡ ಮಹತ್ವದ ಹಾಗೂ ಸಂವೇದನಾಶೀಲ ಒಪ್ಪಂದಗಳು

ಭಾರತ-ಅಮೇರಿಕಾದ ಸಂಬಂಧ ಖರೀದಿದಾರ ಮತ್ತು ಮಾರಾಟಗಾರ ಸ್ವರೂಪದ್ದಾಗಿತ್ತು; ಆದರೆ ಈಗಿನ ವಿವಿಧ ಒಪ್ಪಂದಗಳನ್ನು ನೋಡುವಾಗ ಭಾರತದಂತಹ ದೇಶ ತನ್ನ ಜೊತೆಗಿರುವುದು, ಅಮೇರಿಕಾಗೆ ಅನಿವಾರ್ಯವಾಗಿದೆ. ಆದ್ದರಿಂದ ಕೇವಲ ಆರ್ಥಿಕ ಹೂಡಿಕೆಯ ಒಪ್ಪಂದ ಮಾತ್ರವಲ್ಲ ಹೊಸ ಸಂವೇದನಾಶೀಲ ತಂತ್ರಜ್ಞಾನದ ಹಸ್ತಾಂತರದ ಒಪ್ಪಂದವೂ ಅದರಲ್ಲಿದೆ. ಎರಡು ವರ್ಷಗಳ ಹಿಂದೆ ಅಮೇರಿಕಾದ ಭದ್ರತಾ ಪರಿಷತ್ತು ಮತ್ತು ಭಾರತದ ಭದ್ರತಾ ಪರಿಷತ್ತಿನ ನಡುವೆ ಒಂದು ಮಹತ್ವದ ಒಪ್ಪಂದವಾಗಿದ್ದು ಅದರಲ್ಲಿ ‘ಕ್ರಿಟಿಕಲ್‌ ಎಮರ್ಜಿಂಗ್‌ ಟೆಕ್ನಾಲಾಜಿ’ಯಲ್ಲಿ (ಸಮಸ್ಯೆಗಳ ಉದಯೋನ್ಮುಖ ತಂತ್ರಜ್ಞಾನ ದಲ್ಲಿ) ಭಾರತ ಮತ್ತು ಅಮೇರಿಕಾ ಸಹ ಉತ್ಪಾದನೆ ಮಾಡುವವು’,

ಎಂದು ನಿರ್ಧರಿಸಲಾಗಿದೆ. ‘ಮೈಕ್ರೋ ಚಿಪ್ಸ್‌’ನಿಂದ ಹಿಡಿದು ಅಂತರಿಕ್ಷ ಸಂಶೋಧನೆ ಮತ್ತು ರಕ್ಷಣೆಯ ತಂತ್ರಜ್ಞಾನ ಇದರಲ್ಲಿದೆ. ಈ ರೀತಿ ಅಮೇರಿಕಾ ಯಾವ ದೇಶದೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ.

೩. ಅಮೇರಿಕಾದ ದೃಷ್ಟಿಯಲ್ಲಿ ಭಾರತದ ಮಹತ್ವ

ಕಳೆದ ೨೦ ವರ್ಷಗಳಿಂದ ಅಮೇರಿಕಾ ಭಾರತವನ್ನು ‘ಚೀನಾದ ಸಮಾನ’ವೆಂದು ತಿಳಿಯುತ್ತಿತ್ತು. ‘ಭಾರತ ತನ್ನ ಮೈತ್ರಿ ಪಾಲುದಾರ’ ಆಗಬೇಕು’, ಎಂದು ಅಮೇರಿಕಾಕ್ಕೆ ಇಚ್ಛೆಯಿದೆ; ಆದರೆ ಈ ವಿಷಯದಲ್ಲಿ ಭಾರತದ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಭಾರತ ಅಮೇರಿಕಾದೊಂದಿಗೆ ಸಲಿಗೆಯ ಸಂಬಂಧವನ್ನು ಸ್ಥಾಪಿಸಬಹುದು, ಆದರೆ ‘ಮೈತ್ರಿ ಪಾಲುದಾರ’ ಆಗಲಿಕ್ಕಿಲ್ಲ. ಇದು ಅತ್ಯಂತ ಮಹತ್ವದ ವಿಷಯವಾಗಿದೆ. ಅಮೇರಿಕಾಕ್ಕೆ ಇಂಗ್ಲೆಂಡ್‌ ಮತ್ತು ಜಪಾನ್‌ನೊಂದಿಗಿರುವಂತಹ ಸಂಬಂಧವನ್ನೇ ಭಾರತಕ್ಕೂ ಇಡಡಲಿಕ್ಕಿದೆ. ಇಂಗ್ಲೆಂಡ್‌ ಹಾಗೂ ಜಪಾನ್‌ ಅಮೇರಿಕಾದ ‘ಮೈತ್ರಿ ಪಾಲುದಾರ’ರಾಗಿವೆ.

ಪ್ರಧಾನಮಂತ್ರಿ ಮೋದಿಯವರು ೨೦೧೪ ರಿಂದಲೇ ಅಮೇರಿಕಾದ ಸಂಬಂಧದ ಕಡೆಗೆ ವಿಶೇಷ ಗಮನ ಹರಿಸಿದ್ದಾರೆ. ಇಂದು ಈ ಸಂಬಂಧ ಎಷ್ಟು ದೃಢವಾಗಿದೆಯೆಂದರೆ, ೪ ವರ್ಷಗಳ ಹಿಂದೆ ಪೂರ್ವ ಲಡಾಕ್‌ನಲ್ಲಿ ಚೀನಾದ ಆಕ್ರಮಣದ ನಂತರ ಗಲ್ವಾನದ ಸಂಘರ್ಷ ಉದ್ಭವಿಸಿದಾಗ ಅಮೇರಿಕಾದ ಅಂದಿನ ವಿದೇಶಮಂತ್ರಿ ‘ಚೀನಾ ಭಾರತದ ಮೇಲೆ ದಾಳಿ ಮಾಡಿದರೆ ಅದು ಅಮೇರಿಕಾದ ಮೇಲಿನ ದಾಳಿಯೆಂದು ತಿಳಿಯಲಾಗುವುದು’, ಎಂದು ಒಂದು ಮಹತ್ವದ ಹೇಳಿಕೆಯನ್ನು ನೀಡಿತ್ತು. ಅಮೇರಿಕಾಗೆ ಅದರ ದೀರ್ಘಕಾಲದ ಉದ್ದೇಶಗಳ ಹಾಗೂ ಹಿತಸಂಬಂಧಗಳ  ಪೂರ್ತಿಗಾಗಿ ಭಾರತದ ಅವಶ್ಯಕತೆಯಿದೆ. ಇಂದು ಅಮೇರಿಕಾದ ಹಿತಸಂಬಂಧಗಳಿಗೆ ಎಲ್ಲಕ್ಕಿಂತ ದೊಡ್ಡ ಅಪಾಯವೆಂದರೆ ಚೀನಾ. ಟ್ರಂಪ್‌ ಇವರ ಮೊದಲ ಆಡಳಿತಾವಧಿಯನ್ನು ನೋಡಿದರೆ ಅವರ ಚಿತ್ರಣ ‘ಚೀನಾವಿರೋಧಿ’ ಎಂದು ಜಾಗತಿಕ ರಾಜಕಾರಣದಲ್ಲಿ ಪ್ರತಿಬಿಂಬಿಸಿದೆ; ಆದರೆ ಬೈಡೆನ್‌ ಇವರ ಆಡಳಿತಾವಧಿಯಲ್ಲಿ ರಷ್ಯಾ-ಯುಕ್ರೇನ್‌ ಯುದ್ಧದಲ್ಲಿ ಯುಕ್ರೇನ್‌ಗೆ ಅಬ್ಜಾವಧಿ ಡಾಲರ್ಸ್‌ಗಳ ಸಹಾಯ, ಶಸ್ತ್ರಾಸ್ತ್ರಗಳನ್ನು ಪೂರೈಸುವುದು, ರಷ್ಯಾದ ಮೇಲೆ ಆರ್ಥಿಕ ನಿರ್ಬಂಧ ಹೇರುವುದು, ಇತ್ಯಾದಿಗಳಿಂದ ಅಮೇರಿಕಾದ ಗಮನ ಬೇರೆಡೆಗೆ ತಿರುಗಿತು; ಆದರೆ ಟ್ರಂಪ್‌ ಇವರ ಮುಖ್ಯ ಗುರಿ ಚೀನಾ ಆಗಿದೆ.ರಷ್ಯಾ ಮತ್ತು ಚೀನಾ ಅಮೇರಿಕಾದ ೨ ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ. ರಷ್ಯಾ ಸದ್ಯ ಯುಕ್ರೇನ್‌ನ ಯುದ್ಧದಲ್ಲಿ ಸಿಕ್ಕಿಕೊಂಡಿದೆ. ಎಲ್ಲಿಯವರೆಗೆ ರಷ್ಯಾ ಸಂಪೂರ್ಣ ಬುಡಮೇಲಾಗುವುದಿಲ್ಲವೊ, ಅಲ್ಲಿಯವರೆಗೆ ಅಮೇರಿಕಾ ಈ ಯುದ್ಧವನ್ನು ಮುಂದುವರಿಸು ವುದು; ಆದರೆ ಚೀನಾದ ವರ್ಚಸ್ಸು ತುಂಬಾ ಮೇಲಿನದ್ದಾಗಿದೆ. ಅಮೇರಿಕಾದ ಪಾರಂಪರಿಕ ಸಾಮರ್ಥ್ಯದ ಯಾವ ಯಾವ ಕ್ಷೇತ್ರಗಳಿವೆಯೊ, ಅವೆಲ್ಲವನ್ನೂ ಕಬಳಿಸಲು ಚೀನಾ  ಪ್ರಯತ್ನಿಸು ತ್ತಿದೆ. ಆದ್ದರಿಂದ ಅಮೇರಿಕಾದ ಏಶಿಯಾ ಖಂಡದಲ್ಲಿನ ಸಂರಕ್ಷಣೆ ಹಾಗೂ ವ್ಯಾಪಾರಿ ಹಿತಸಂಬಂಧಗಳಿಗೆ ಅಪಾಯ ಎದುರಾಗಿದೆ. ಮತ್ತು ಅದು ಅಮೇರಿಕಾದ ಎದುರಿನ ದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿ ಅಮೇರಿಕಾಗೆ ಭಾರತದ ‘ಆಪರೇಶನಲ್‌ ಕೊಲಬ್ರೇಶನ್’ (ಕಾರ್ಯರತ ಸಹಯೋಗದ) ಅವಶ್ಯಕತೆಯಿದೆ. ಕೊರೋನಾ ಮಹಾಮಾರಿಯ ನಂತರದ ಅಥವಾ ಅದರ ಹಿಂದಿನ ಅಮೇರಿಕಾ-ಚೀನಾದ ಸಂಬಂಧ ಒತ್ತಡಪೂರ್ಣವಾಗಿದೆ. ಆದ್ದರಿಂದ ಅಮೇರಿಕಾ ಚೀನಾ ದೊಂದಿಗಿನ ತನ್ನ ಅವಲಂಬನೆ ಕಡಿಮೆಗೊಳಿಸುವ ಪ್ರಯತ್ನ ದಲ್ಲಿದೆ. ಅದಕ್ಕಾಗಿ ಅಮೇರಿಕಾ ಭಾರತಕ್ಕೆ ಪ್ರಾಧಾನ್ಯ ನೀಡುತ್ತಿದೆ. ಜಾಗತಿಕ ಪೂರೈಕೆಯ ಕೊಂಡಿಯಲ್ಲಿ ಭಾರತದ ಸ್ಥಾನ ದೊಡ್ಡ ದಾಗಿ ಭಾರತ ಚೀನಾಗೆ ಸಕ್ಷಮ ಪರ್ಯಾಯವಾಗಬೇಕೆಂದು ಅಮೇರಿಕಾ ಪ್ರಯತ್ನಿಸುತ್ತಿದೆ. ಏಕೆಂದರೆ ಅಮೇರಿಕಾಕ್ಕೆ ಭಾರತದ ಆರ್ಥಿಕ ವಿಕಾಸ ಅಮೇರಿಕಾಗೆ ಪೂರಕ ಹಾಗೂ ಚೀನಾದ ಆರ್ಥಿಕ ವಿಕಾಸ ಹಾನಿಕರವಾಗಿದೆ.

೪. ಭಾರತ ಹಾಗೂ ಅಮೇರಿಕಾದ ಮಹತ್ವದ ನಿರ್ಣಯ 

ಇದರಿಂದ ಈ ವರ್ಷದ ‘ಸ್ಟೇಟ್‌ ವಿಸಿಟ್‌’ನಲ್ಲಿ (ಯಜಮಾನ ದೇಶದ ಪ್ರಮುಖರನ್ನು ಆಮಂತ್ರಿಸುವುದು) ಭಾರತ ಹಾಗೂ ಅಮೇರಿಕಾದ ನಡುವೆ ಆದ ಮಹತ್ವ್ವದ ನಿರ್ಣಯಗಳು

ಅ. ಅದರಲ್ಲಿನ ಮೊದಲ ನಿರ್ಣಯ, ಅಮೇರಿಕಾದಲ್ಲಿ ‘ಜೆಟ್‌ ಇಂಜಿನ್’ ತಯಾರಿಸುವ ‘ಜನರಲ್‌ ಇಲೆಕ್ಟ್ರಿಕಲ್ಸ್‌’ ಕಂಪನಿ ಭಾರತದÀ ‘ಹಿಂದೂಸ್ಥಾನ ಎರೋನಾಟಿಕಲ್ಸ್‌’ ಈ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದ್ದರಿಂದ ಭವಿಷ್ಯದಲ್ಲಿ ಜೆಟ್‌ ಇಂಜಿನ್‌ಗಳನ್ನು ಭಾರತದಲ್ಲಿ ನಿರ್ಮಿಸಲಾಗುವುದು.

ಆ. ಇನ್ನೊಂದು ನಿರ್ಣಯವೆಂದರೆ, ಭಾರತ ಅಮೇರಿಕಾದಿಂದ ‘ಪ್ರಿಡೇಟರ್’ ರೀತಿಯ ೩೦ ಅತ್ಯಾಧುನಿಕ ‘ಡ್ರೋನ್ಸ್‌’ಗಳನ್ನು ಖರೀದಿಸುವುದು. ಅದರಲ್ಲಿನ ಕೆಲವು ಡ್ರೋನ್ಸ್‌ಗಳು ಭಾರತದಲ್ಲಿಯೆ ನಿರ್ಮಾಣವಾಗುವವು. ಅದರ ಅವಶ್ಯಕ ತಂತ್ರಜ್ಞಾನ ವನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು.

ಇ. ಸಂವೇದನಾಶೀಲ ತಂತ್ರಜ್ಞಾನದ ಹಸ್ತಾಂತರಕ್ಕೆ ಅಮೇರಿಕಾ ತೋರಿಸಿದ ಸಿದ್ಧತೆ ಮಹತ್ವಪೂರ್ಣವಾಗಿದೆ. ಜಾಗತಿಕ ಪೂರೈಕೆಯ ಸಂಕೋಲೆಯಲ್ಲಿ ಚೀನಾಗೆ ಪರ್ಯಾಯ ಹಾಗೂ ಏಶಿಯಾ-ಫೆಸಿಫಿಕ್‌ಸಾಗರ ಕ್ಷೇತ್ರದಲ್ಲಿ ‘ಆಪರೇಶನಲ್‌ ಕೊಲಬ್ರೇಶನ್‌’ಗಾಗಿ ಭಾರತ ಮಹತ್ವದ್ದಾಗಿದೆ. ಇಂದು ಅಮೇರಿಕಾ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಮಾತ್ರವಲ್ಲ ತಂತ್ರಜ್ಞಾನವನ್ನೂ ಕೊಡು ತ್ತಿದೆ. ಎಲ್ಲಕ್ಕಿಂತ ಮಹತ್ವದ್ದೆಂದರೆ ‘ಜೆಟ್‌ ಇಂಜಿನ್’ ಹಾಗೂ ‘ಪ್ರಿಡೆಟರ್‌ ಡ್ರೋನ್‌’ಗಳು ಈಗ ಭಾರತದಲ್ಲಿ ಉತ್ಪಾದನೆ ಆಗಲಿಕ್ಕಿವೆ. ಈ ಎರಡೂ ತಂತ್ರಜ್ಞಾನಗಳು ಭವಿಷ್ಯದಲ್ಲಿ ಅಮೇರಿಕಾದಿಂದ ಭಾರತಕ್ಕೆ ಹಸ್ತಾಂತರವಾಗಲಿಕ್ಕಿವೆ.

೫. ಡೋನಾಲ್ಡ್ ಟ್ರಂಪ್‌ ಇವರ ಎರಡನೆಯ ಕಾರ್ಯಕಾಲದ ಆರ್ಥಿಕ ಹಾಗೂ ವ್ಯಾಪಾರಿ ದೃಷ್ಟಿಕೋನ

ಡೋನಾಲ್ಡ್ ಟ್ರಂಪ್‌ ಇವರ ಎರಡನೆಯ ಕಾರ್ಯಕಾಲದಲ್ಲಿ ಭಾರತ-ಅಮೇರಿಕಾದ ಸಂಬಂಧದಲ್ಲಿ ಆರ್ಥಿಕ ಹಾಗೂ ವ್ಯಾಪಾರಿ ದೃಷ್ಟಿಕೋನದಿಂದ ಕೆಲವು ಅಡಚಣೆಗಳು ಉದ್ಭವಿಸಬಹುದು. ಟ್ರಂಪ್‌ ಇವರು ಪ್ರಚಾರದ ಸಮಯದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಆಮದು ಶುಲ್ಕ ಶೇ. ೧೦ ರಷ್ಟು ಹೆಚ್ಚಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಇದರಿಂದ ಭಾರತದಿಂದ ಅಮೇರಿಕಾ ಕ್ಕಾಗುವ  ರಫ್ತ್ತಿನ ಮೇಲೆ ಪರಿಣಾಮವಾಗಬಹುದು. ಇನ್ನೊಂದು ವಿಷಯವೆಂದರೆ, ‘ಅಮೇರಿಕಾದ ಸರಕು-ಸಾಮಗ್ರಿ ಗಳು ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗಬೇಕು, ಅದಕ್ಕಾಗಿ ಭಾರತ ಆಮದು ಶುಲ್ಕ ಕಡಿಮೆ ಮಾಡಬೇಕು’, ಎನ್ನುವ ಬೇಡಿಕೆಯನ್ನು ಟ್ರಂಪ್‌ ಮಾಡಿದ್ದಾರೆ. ಅದಕ್ಕಾಗಿ ಟ್ರಂಪ್‌ ಒತ್ತಾಯಪಡಿಸುವರು. ಇದರ ಹೊರತು ಭಾರತ-ಅಮೇರಿಕಾ ವ್ಯಾಪಾರ ಸಂಬಂಧದಲ್ಲಿ ವ್ಯಾಪಾರದ ಕೊರತೆ ದೊಡ್ಡದಾಗಿದ್ದು ಅದು ಭಾರತದ ಪರವಾಗಿದೆ. ಅದನ್ನು ಕಡಿಮೆಗೊಳಿಸುವ ದೃಷ್ಟಿಯಲ್ಲಿ ಟ್ರಂಪ್‌ ಆಗ್ರಹಿಸುವ ಹಾಗೂ ಒತ್ತಡ ಹೇರುವ ಸಾಧ್ಯತೆಯಿದೆ.

(ಆಧಾರ : ಡಾ. ಶೈಲೇಂದ್ರ ದೇವಳಾಣಕರ್‌ ಇವರ ಫೇಸ್‌ಬುಕ್‌ ಹಾಗೂ ದೈನಿಕ ‘ಮಹಾರಾಷ್ಟ್ರ ಟೈಮ್ಸ್‌’ನ ಜಾಲತಾಣ)