ಕೇಂಬ್ರಿಡ್ಜ್ (ಅಮೇರಿಕಾ) – ಜಗತ್ತಿನ ಅತ್ಯಂತ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆ ‘ಹಾರ್ವರ್ಡ್ ವಿಶ್ವವಿದ್ಯಾಲಯ’ದ ದ್ವಿಮುಖ ಬಹಿರಂಗವಾಗಿದೆ. ಸ್ವತಃ ಅಭಿವ್ಯಕ್ತಿ ಸ್ವಾತಂತ್ರ್ಯದ ಬೆಂಬಲಿಗರು ಎಂದು ಹೇಳಿಕೊಳ್ಳುವ ಈ ಸಂಸ್ಥೆಯು ‘ಖಲಿಸ್ತಾನಿ ಭಯೋತ್ಪಾದನೆ ಮತ್ತು ಅದರ ಭಾರತ-ಕೆನಡಾ ಸಂಬಂಧಗಳ ಮೇಲಿನ ಪರಿಣಾಮ’ ಈ ವಿಷಯದ ಕುರಿತು ಬರೆದ ಲೇಖನವನ್ನು ಖಲಿಸ್ತಾನಿಗಳ ಒತ್ತಡಕ್ಕೆ ಮಣಿದು ತೆಗೆದುಹಾಕಿದೆ. ಈ ಲೇಖನವನ್ನು ತೆಗೆದುಹಾಕಿದ್ದಕ್ಕಾಗಿ ವಿಶ್ವವಿದ್ಯಾಲಯದ ಮೇಲೆ ಟೀಕೆಗಳಾಗುತ್ತಿವೆ.
1. ಖಲಿಸ್ತಾನಕ್ಕೆ ಸಂಬಂಧಿಸಿದ ಈ ಲೇಖನವು ವಿಶ್ವವಿದ್ಯಾಲಯದ ‘ಹಾರ್ವರ್ಡ್ ಇಂಟರನ್ಯಾಷನಲ್ ರಿವ್ಯೂ’ ನಲ್ಲಿ ಪ್ರಕಟವಾಗಿತ್ತು. ಇದನ್ನು ಝಿನಾ ಧಿಲ್ಲನ್ ಎಂಬ ವಿದ್ಯಾರ್ಥಿನಿ ಬರೆದಿದ್ದರು. ‘ಎ ಥಾರ್ನ್ ಇನ್ ದಿ ಮೇಪಲ್: ಹೌ ದಿ ಖಲಿಸ್ತಾನ್ ಕ್ವೆಶ್ಚನ್ ಈಸ್ ರೀಶೇಪಿಂಗ್ ಇಂಡಿಯಾ-ಕೆನಡಾ ರಿಲೇಶನ್ಸ್’ ಎಂದು ಈ ಲೇಖನದ ಶೀರ್ಷಿಕೆಯಾಗಿತ್ತು. ಈ ಲೇಖನವು ಫೆಬ್ರವರಿ 15, 2025 ರಂದು ಪ್ರಕಟವಾಗಿತ್ತು. ಈ ಲೇಖನದಲ್ಲಿ ಭಾರತದಲ್ಲಿ ಹೆಚ್ಚುತ್ತಿರುವ ಖಲಿಸ್ತಾನಿ ಭಯೋತ್ಪಾದನೆಯ ಬಗ್ಗೆ, ಕೆನಡಾದಲ್ಲಿ ಅದರ ಬೆಳವಣಿಗೆಯ ಬಗ್ಗೆ ಮತ್ತು ಭಾರತ-ಕೆನಡಾ ಸಂಬಂಧಗಳ ಮೇಲೆ ಅದು ಹೇಗೆ ಪರಿಣಾಮ ಬೀರುತ್ತಿದೆ ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿತ್ತು. ಈ ಲೇಖನವನ್ನು ಫೆಬ್ರವರಿ 22, 2025 ರಂದು ತೆಗೆದುಹಾಕಲಾಯಿತು.
2. ‘ಹಾರ್ವರ್ಡ್ ಇಂಟರನ್ಯಾಷನಲ್ ರಿವ್ಯೂ’ ಇದು ಹಾರ್ವರ್ಡ್ ವಿಶ್ವವಿದ್ಯಾಲಯದ ‘ಹಾರ್ವರ್ಡ್ ಇಂಟರನ್ಯಾಷನಲ್ ರಿಲೇಶನ್ಸ್ ಕೌನ್ಸಿಲ್’ ನಿಂದ ಪ್ರಕಟವಾಗುವ ತ್ರೈಮಾಸಿಕ ಪತ್ರಿಕೆಯಾಗಿದೆ. ಈ ಲೇಖನದ ಲೇಖಕಿ ಝಿನಾ ಧಿಲ್ಲನ್ ಹಾರ್ವರ್ಡ್ ವಿದ್ಯಾರ್ಥಿನಿಯಾಗಿದ್ದಾರೆ. ವಿವಾದದ ನಂತರ ಅವರ ಚರಿತ್ರೆ ಹಾರ್ವರ್ಡ್ ಇಂಟರ್ನ್ಯಾಷನಲ್ ರಿವ್ಯೂ ಸಂಕೇತಸ್ಥಳದಿಂದ ಅಕಸ್ಮಿಕವಾಗಿ ಕಣ್ಮರೆಯಾಯಿತು.
3. ಈ ಬಗ್ಗೆ ಝಿನಾ ಧಿಲ್ಲನ ಮಾತನಾಡಿ, ಹಾರ್ವರ್ಡ್ ಇಂಟರನ್ಯಾಷನಲ ರಿವ್ಯೂ ಒತ್ತಡದಲ್ಲಿದೆ ಎಂದು ನನಗೆ ಅನ್ನಿಸಿತು. ಇದು ಆತುರದಿಂದ ತೆಗೆದುಕೊಂಡ ನಿರ್ಧಾರ ಎಂದು ನನ್ನ ಅಭಿಪ್ರಾಯ ಎಂದಿದ್ದಾರೆ.
ಸಂಪಾದಕೀಯ ನಿಲುವುಖಲಿಸ್ತಾನಿ ಭಯೋತ್ಪಾದನೆ ಅಮೇರಿಕಾ ಮತ್ತು ಕೆನಡಾ ಪ್ರಾಯೋಜಿತವಾಗಿದೆ ಎನ್ನುವ ಚಿತ್ರಣವಿದೆ. ಆದ್ದರಿಂದ ಖಲಿಸ್ತಾನ ವಿರೋಧಿ ಲೇಖನ ಅಮೇರಿಕಕ್ಕೆ ಹೇಗೆ ಒಪ್ಪಿಗೆಯಾಗಬಹುದು? |