
ವಾಷಿಂಗ್ಟನ – ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಬಿಲಿಯನೇರ್ ಉದ್ಯಮಿ ಇಲಾನ್ ಮಸ್ಕ್ ಕೂಡ ಭಾಗವಹಿಸಿದ್ದರು. ಇಲಾನ್ ಮಸ್ಕ್ ಸರಕಾರದ ಕಾರ್ಯಕ್ಷಮತೆ ವಿಭಾಗದ ಮುಖ್ಯಸ್ಥರಾಗಿದ್ದು, ಅವರು ಜಾರಿಗೊಳಿಸುತ್ತಿರುವ ನೀತಿಗಳಿಂದಾಗಿ ಸಾಕಷ್ಟು ವಿರೋಧವನ್ನು ಎದುರಿಸುತ್ತಿದ್ದಾರೆ. ಕ್ಯಾಬಿನೆಟ್ ಸಭೆಯ ಸಮಯದಲ್ಲಿ, ಮಸ್ಕ್ ಅವರನ್ನು ಅವರ ಯೋಜನೆಗಳ ಬಗ್ಗೆ ವಿವರಿಸಲು ಟ್ರಂಪ್ ಕೇಳಿದಾಗ, ಅವರು ತಮಗೆ ನಿರಂತರ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಬಹಿರಂಗಪಡಿಸಿದರು.
1. ಇಲಾನ್ ಮಸ್ಕ್ ಮಾತನಾಡಿ, ಅನೇಕ ಸರಕಾರಿ ವ್ಯವಸ್ಥೆಗಳು ತುಂಬಾ ಹಳೆಯದಾಗಿದ್ದು, ಅವುಗಳಲ್ಲಿ ಸುಧಾರಣೆಗಳನ್ನು ಮಾಡಲಾಗುತ್ತಿದೆ. ‘ನಮ್ಮ ಮುಖ್ಯ ಗುರಿ ಅಮೇರಿಕಾದಲ್ಲಿ ಹೆಚ್ಚುತ್ತಿರುವ ಕೊರತೆಯನ್ನು ಕಡಿಮೆ ಮಾಡುವುದಾಗಿದೆ, ಒಂದು ವೇಳೆ ನಾವು ಈಗಲೇ ಕ್ರಮ ಕೈಗೊಳ್ಳದಿದ್ದರೆ ದೇಶ ದಿವಾಳಿಯಾಗಬಹುದು. ದೇಶವು 2 ಟ್ರಿಲಿಯನ್ ಡಾಲರ್ (174 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು) ಕೊರತೆಯನ್ನು ಭರಿಸಲು ಸಾಧ್ಯವಿಲ್ಲ’, ಎಂದು ಇಲಾನ್ ಮಸ್ಕ್ ಹೇಳಿದರು.
2. ಇಲಾನ್ ಮಸ್ಕ ಇವರು ಸರಕಾರಿ ದಕ್ಷತೆ ಇಲಾಖೆಯಿಂದ ತಪ್ಪುಗಳಾಗಬಹುದು ಎಂದು ಒಪ್ಪಿಕೊಂಡರು; ಆದರೆ ಅವುಗಳನ್ನು ಆದಷ್ಟು ಬೇಗನೆ ಸರಿಪಡಿಸಲಾಗುವುದು. ಮಸ್ಕ ಮಾತು ಮುಮದುವರೆಸಿ, ‘2026ರ ವರೆಗೆ ಸರಕಾರದ ಕೊರತೆಯನ್ನು 1 ಟ್ರಿಲಿಯನ್ ಡಾಲರ್ಸಗಳಷ್ಟು (87 ಲಕ್ಷ ಕೋಟಿಗಳಿಗಿಂತ ಹೆಚ್ಚು) ಕಡಿಮೆ ಮಾಡುವ ಗುರಿ ಹೊಂದಿದೆ. ಇದಕ್ಕಾಗಿ ಪ್ರತಿದಿನ 4 ಬಿಲಿಯನ್ ಡಾಲರಗಳಷ್ಟು ಉಳಿತಾಯ ಮಾಡಬೇಕಾಗುವುದು’, ಎಂದು ಹೇಳಿದರು.
3. ಸರಕಾರಿ ದಕ್ಷತಾ ಇಲಾಖೆಯ ನೀತಿಗಳಿಂದಾಗಿ ಅನೇಕ ಸರಕಾರಿ ನೌಕರರು ರಾಜೀನಾಮೆ ನೀಡಿದ್ದಾರೆ. ಸರಕಾರಿ ನೌಕರರ ಅತಿದೊಡ್ಡ ಒಕ್ಕೂಟವಾದ ‘ಅಮೇರಿಕನ್ ಫೆಡರೇಶನ್ ಆಫ್ ಗವರ್ನಮೆಂಟ್ ಎಂಪ್ಲಾಯೀಸ್’, ಇದು ಮಸ್ಕ್ ಅವರ ನೀತಿಗಳನ್ನು ಅಕ್ರಮ ಮತ್ತು ಅಪಾಯಕಾರಿ ಎಂದು ಕರೆದಿದೆ ಮತ್ತು ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
4. ಈ ಕ್ಯಾಬಿನೆಟ್ ಸಭೆಯಲ್ಲಿ ಅಧ್ಯಕ್ಷ ಟ್ರಂಪ್ ಇಲಾನ್ ಮಸ್ಕ್ ಅವರನ್ನು ಬೆಂಬಲಿಸಿದರು. ಮಸ್ಕ್ ಅವರನ್ನು ಹೊಗಳಿದ ಟ್ರಂಪ್, ಅವರು ತುಂಬಾ ಶ್ರಮಿಸುತ್ತಿದ್ದಾರೆ. ಕೆಲವು ಜನರು ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ; ಆದರೆ ಹೆಚ್ಚಿನ ಜನರು ತುಂಬಾ ಸಂತೋಷವಾಗಿದ್ದಾರೆ’, ಎಂದು ಹೇಳಿದರು.