ಇಂಡಿಯನಾಪೊಲೀಸ್ (ಅಮೇರಿಕಾ) – ಅಮೇರಿಕಾದಲ್ಲಿನ ಇಂಡಿಯಾನಾ ರಾಜ್ಯದಲ್ಲಿನ ಓರ್ವ ಶಿಕ್ಷಕೀಯ ಅಸಹ್ಯಕರ ಕೃತ್ಯ ಬೆಳಕಿಗೆ ಬಂದಿದೆ. ಈ ಮಹಿಳಾ ಶಿಕ್ಷಕಿಯು ಅಪ್ರಾಪ್ತ ೧೦ ಹುಡುಗರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಳೆ. ಶಿಕ್ಷಕಿಯು ಮಕ್ಕಳಿಗೆ ಮಾದಕ ಪದಾರ್ಥ ನೀಡಿ ಪ್ರಜ್ಞೆ ತಪ್ಪಿಸುತ್ತಿದ್ದಳು ಮತ್ತು ಮನೆಯಲ್ಲಿ ಇಟ್ಟಿರುವ ಲೈಂಗಿಕ ವಸ್ತುಗಳನ್ನು ತೋರಿಸಿದಳು. ಇದರ ನಂತರ ಅವರ ಜೊತೆಗೆ ದೈಹಿಕ ಸಂಬಂಧ ಹೊಂದಿದಳು. ಈ ಪ್ರಕಾರಣದಲ್ಲಿ ೩೧ ವರ್ಷದ ಶಿಕ್ಷಕಿ ಬ್ರಿಟನಿ ಫೋರ್ಟಿನಬೆರಿಯನ್ನು ಬಂದಿಸಲಾಗಿದೆ.
೧. ಓರ್ವ ೧೫ ವರ್ಷದ ಸಂತ್ರಸ್ತ ಹುಡುಗನ ಅಜ್ಜಿ ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
೨. ಸಂತ್ರಸ್ತ ಹುಡುಗನು ಪೊಲೀಸರಿಗೆ, ಈ ಶಿಕ್ಷಕಿಯ ಲೈಂಗಿಕ ದೌರ್ಜನ್ಯಕ್ಕೆ ೧೦ ಕ್ಕಿಂತಲೂ ಹೆಚ್ಚಿನ ಮಕ್ಕಳು ಬಲಿಯಾಗಿರಬಹುದು ಎಂದು ಹೇಳಿದನು. ಈ ಶಿಕ್ಷಕಿಯ ವಿರುದ್ಧ ಅಪ್ರಾಪ್ತ ಹುಡುಗರ ಲೈಂಗಿಕ ಶೋಷಣೆ ನಡೆಸಿ ಅವರ ಜೀವನ ಹಾಳು ಮಾಡಿರುವ ಆರೋಪವಿದೆ ಎಂದು ಹೇಳಿದರು.
೩. ಸಂತ್ರಸ್ತ ಹುಡುಗನು ಪೊಲೀಸರಿಗೆ, ಶಿಕ್ಷಕಿಯು ಅವನಿಗೆ ಅಶ್ಲೀಲ ಛಾಯಾ ಚಿತ್ರಗಳು ಮತ್ತು ಸಂದೇಶಗಳು ಕಳುಹಿಸಿದಳು ಎಂದು ಹೇಳಿದನು. ‘ಸ್ನಾಪ್ ಚಾಟ್’ ಮೂಲಕ ಅವನ ಜೊತೆಗೆ ಸಂಪರ್ಕಿಸಿ ದೈಹಿಕ ಸಂಬಂಧದ ಬಗ್ಗೆ ಯಾರಿಗಾದರೂ ಹೇಳಿದರೆ, ಆಕೆ ಆತ್ಮಹತ್ಯೆ ಮಾಡಿಕೊಳ್ಳುವೆ’, ಎಂದು ಬೆದರಿಕೆ ಹಾಕಿದ್ದಳು. ಶಿಕ್ಷಕಿ ಆ ಹುಡುಗನಿಗೆ ಇಂಡಿಯಾನಾದಲ್ಲಿನ ಒಂದು ನಗರಕ್ಕೆ ಟ್ರಿಪ್ಪಿಗೆ ಎಂದು ಕರೆದುಕೊಂಡು ಹೋಗಿದ್ದಳು ಮತ್ತು ಅಲ್ಲಿ ಅವನ ಜೊತೆಗೆ ಅಶ್ಲೀಲ ವರ್ತನೆ ನಡೆಸಿದಳು. ಪೊಲೀಸರು ಶಿಕ್ಷಕಿಯ ಮನೆಯನ್ನು ತಪಾಸಣೆ ನಡೆಸಿದ್ದಾರೆ.
೪. ಬ್ರಿಟನಿ ವಿದ್ಯಾರ್ಥಿಗಳಿಗೆ, ಆಕೆಗೆ ಅವರ ಜೊತೆಗೆ ದೈಹಿಕ ಸಂಬಂಧ ಹೊಂದಿರುವ ಕುರಿತು ಕನಸು ಬಂದಿತ್ತು ಎಂದು ಹೇಳಿದಳು. ಓರ್ವ ಸಂತ್ರಸ್ತ ಹುಡುಗನು, ಶಾಲೆಯ ಶಿಕ್ಷಕರ ಮೇಲೆ ವಿಶ್ವಾಸ ಇರಿಸಬೇಕು; ಆದರೆ ಇದು ಬಹಳ ವಿಚಿತ್ರವಾಗಿ ಇದೆ ಎಂದು ಹೇಳಿದನು.
ಸಂಪಾದಕೀಯ ನಿಲುವು“ಅಮೇರಿಕನ್ ಸಮಾಜದ ನೈತಿಕತೆ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ತಿಳಿಯಲು ಈ ಉದಾಹರಣೆ ಸಾಕು. ಭಾರತವು ಹಿಂದೂ ಮೌಲ್ಯಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳದಿದ್ದರೆ, ಅದರ ಸ್ಥಿತಿಯೂ ಈ ಪಶುತ್ವದ ವಿಕೃತಿಯಂತೆಯೇ ಆಗುತ್ತದೆ ಎಂದು ತಿಳಿಯಿರಿ!” |