Taliban Challenge Trump : ತಾಲಿಬಾನದಿಂದ ಡೊನಾಲ್ಡ್ ಟ್ರಂಪ್ ಇವರಿಗೆ ಬಹಿರಂಗ ಸವಾಲು : ಧೈರ್ಯ ಇದ್ದರೆ ಕಾಬುಲ್‌ಗೆ ಬನ್ನಿ !

ಅಮೆರಿಕದ 61 ಸಾವಿರ ಕೋಟಿ ರೂಪಾಯಿ ಶಸ್ತ್ರಾಸ್ತ್ರಗಳು ಅಫ್ಘಾನಿಸ್ತಾನದಲ್ಲಿ ಸಿಕ್ಕಿಹಾಕಿಕೊಂಡಿವೆ

ಕಾಬುಲ (ಅಪಘಾನಿಸ್ತಾನ) – ಅಪಘಾನಿಸ್ತಾನದಲ್ಲಿನ ತಾಲಿಬಾನದ ನೇತೃತ್ವದಲ್ಲಿನ ಮಧ್ಯಂತರ ಸರಕಾರದಿಂದ ಅಮೇರಿಕಾದ ಶಸ್ತ್ರಾಸ್ತ್ರಗಳನ್ನು ಹಿಂತಿರುಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ‘ಅಮೇರಿಕಾದ ರಾಷ್ಟ್ರಾಧ್ಯಕ್ಷರಿಗೆ ಧೈರ್ಯ ಇದ್ದರೆ ಇಲ್ಲಿ ಬಂದು ಅವರ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಬೇಕು’, ಎಂದು ತಾಲಿಬಾನ್ ಡೊನಾಲ್ಡ್ ಟ್ರಂಪ್ ಇವರಿಗೆ ಬಹಿರಂಗ ಸವಾಲು ಹಾಕಲಾಗಿದೆ.

೧. ಟ್ರಂಪ್ ಇವರು ಅಪಘಾನಿಸ್ತಾನದಲ್ಲಿ ಅಮೆರಿಕಾದ ಸೈನ್ಯವು ಬಿಟ್ಟು ಬಂದಿರುವ ಶಸ್ತ್ರಾಸ್ತ್ರಗಳು ಹಿಂತಿರುಗಿತರುವುದರ ಬಗ್ಗೆ ಟಿಪ್ಪಣಿ ಮಾಡಿದ್ದರು. ಈ ಟಿಪ್ಪಣಿಗೆ ಪ್ರತಿಕ್ರಿಯೆ ನೀಡುತ್ತಾ, ತಾಲಿಬಾನದ ಸೈನ್ಯ ಪ್ರಮುಖ ಅಮೇರಿಕಾಗೆ ಬೆದರಿಕೆ ನೀಡಿದೆ.

೨. ೨೦೨೧ ರಲ್ಲಿ ತಾಲಿಬಾನವು ಕಾಬುಲ್ ಕಡೆಗೆ ಪ್ರಯಾಣ ಬೆಳೆಸಿದ ನಂತರ ಅಮೆರಿಕ ಸೈನ್ಯವು ಅಪಘಾನಿಸ್ತಾನ ತೆರವುಗೊಳಿಸಿತ್ತು. ಆ ಸಮಯದಲ್ಲಿ ಅಮೆರಿಕದಿಂದ ಅಪಘಾನಿಸ್ತಾನದಲ್ಲಿ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳು ಬಿಟ್ಟು ಹೋಗಿದ್ದರು. ಈಗ ಟ್ರಂಪ್ ಇವರು ಶಸ್ತ್ರಾಸ್ತ್ರ ಹಿಂಪಡೆಯುವುದಕ್ಕಾಗಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ತಾಲಿಬಾನ್ ಆಕ್ರೋಶಗೊಂಡಿದೆ.

೩. ಅಪಘಾನಿಸ್ತಾನದ ಸೈನ್ಯ ಪ್ರಮುಖ ಕಾರಿ ಫಸಿಉದ್ದೀನ್ ಫಿತರತ್ ಇವರು ಟ್ರಂಪ್ ಇವರಿಗೆ, ನಿಮ್ಮಲ್ಲಿ ಧೈರ್ಯ ಇದ್ದರೆ, ಇಲ್ಲಿ ಬನ್ನಿ ಮತ್ತು ನಿಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಿ’, ಎಂದು ಉತ್ತರಿಸಿದ್ದಾರೆ.

೪. ಈ ಹಿಂದೆ ಅಪಘಾಣ ಸರಕಾರದ ವಕ್ತಾರ ಜಬಿಹುಲ್ಲಹ ಮುಜಾಹಿದ್ ಇವರು ಕೂಡ ಟ್ರಂಪ್ ಇವರಿಗೆ ಹೀಗೆ ಸವಾಲು ಹಾಕಿದ್ದರು. ಮುಜಾಹಿದ್ ಈ ಶಸ್ತ್ರಾಸ್ತ್ರಗಳು ಈಗ ಅಪಘಾನಿಸ್ತಾನದ್ದಾಗಿದೆ. ನಾವು ಈ ಯುದ್ಧ ಗೆದ್ದಿದ್ದೇವೆ. ಆದ್ದರಿಂದ ಇದು ನಮ್ಮ ಸ್ವತ್ತು ಆಗಿದೆ ಎಂದು ಅವರು ಹೇಳಿದರು.

೫. ಅಮೇರಿಕಾದ ರಕ್ಷಣಾ ಇಲಾಖೆಯ ವರದಿಯ ಪ್ರಕಾರ ಅಮೆರಿಕೀ ಸೈನ್ಯ ಹಿಂದೆ ಸರಿದ ನಂತರ ಅಪಘಾನಿಸ್ತಾನದಲ್ಲಿ ಸುಮಾರು ೭ ಅಬ್ಜ ಡಾಲರ್ಸ್ (೬೧ ಸಾವಿರ ಕೋಟಿ ರೂಪಾಯಿಯ) ಸೈನ್ಯದ ಉಪಕರಣಗಳು ಅವರು ಅಲ್ಲಿ ಬಿಟ್ಟು ಹಿಂತಿರುಗಬೇಕಾಯಿತು. ೨೦೦೫ ರಿಂದ ೨೦೨೧ ಈ ೧೭ ವರ್ಷದ ಅವಧಿಯಲ್ಲಿ ಅಮೆರಿಕದಿಂದ ಅಪಘಾನಿಸ್ತಾನಕ್ಕೆ ಅವರ ರಕ್ಷಣೆಗಾಗಿ ೧೮.೬ ಅಬ್ಜ ಡಾಲರ್ಸ್ (೧ ಲಕ್ಷ ೬೨ ಸಾವಿರ ಕೋಟಿ ರೂಪಾಯಿಯ) ಶಸ್ತ್ರಾಸ್ತ್ರಗಳು ನೀಡಿತ್ತು.

೬. ಫೆಬ್ರುವರಿ ೨೯, ೨೦೨೦ ರಂದು ಅಮೆರಿಕ ಮತ್ತು ಅಪಘಾನಿಸ್ತಾನದ ನಡುವೆ ದೋಹ ಒಪ್ಪಂದ ಆಯಿತು. ಈ ಒಪ್ಪಂದದ ಪ್ರಕಾರ ಅಮೆರಿಕೀ ಸೈನ್ಯವು ಅಪಘಾನಿಸ್ತಾನದಿಂದ ಆಗಸ್ಟ್ ೨೦೨೧ ರಲ್ಲಿ ಹಿಂತಿರುಗಿತ್ತು.