‘ಬಂಗಾಳದಲ್ಲಿ ಗಲಭೆಗಳನ್ನು ಪ್ರಚೋದಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ! – ಮಮತಾ ಬ್ಯಾನರ್ಜಿ, ಮುಖ್ಯಮಂತ್ರಿ, ಬಂಗಾಳ

ಕೋಲಕಾತಾ (ಪಶ್ಚಿಮ ಬಂಗಾಳ) – ಪಶ್ಚಿಮ ಬಂಗಾಳದಲ್ಲಿ ಗಲಭೆಗಳನ್ನು ಪ್ರಚೋದಿಸುವ ಪ್ರಯತ್ನಗಳು ನಡೆಯುತ್ತಿವೆ. ಗಲಭೆಗಳನ್ನು ಸೃಷ್ಟಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲು ಯತ್ನಿಸಲಾಗುತ್ತಿದೆ. ಮಣಿಪುರದಲ್ಲಿ ಏನಾಯಿತು? ಗಲಭೆಗಳನ್ನು ಸಾಮಾನ್ಯ ಜನರು ಮಾಡುವುದಿಲ್ಲ, ಆದರೆ ರಾಜಕೀಯ ಪಕ್ಷಗಳು ಮಾಡುತ್ತವೆ. ಈ ಬಲೆಯಲ್ಲಿ ನೀವು ಸಿಲುಕಿಕೊಳ್ಳಬೇಡಿ. ಬಂಗಾಳ ಸರಕಾರ ಅಲ್ಪಸಂಖ್ಯಾತರ ಬೆಂಬಲಕ್ಕಿದೆ ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಮಜಾನ್ ಈದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ಮಮತಾ ಬ್ಯಾನರ್ಜಿ ಅವರು ಮಂಡಿಸಿದ ಅಂಶಗಳು

೧. ನಾವು ಜಾತ್ಯತೀತರು. ನವರಾತ್ರಿ ನಡೆಯುತ್ತದೆ. ನಾನು ನಿಮಗೂ ಶುಭ ಹಾರೈಸುತ್ತೇನೆ; ಆದರೆ ಯಾರೂ ಗಲಭೆ ಹರಡಬಾರದು, ಅದನ್ನು ನಾವು ನಿರೀಕ್ಷಿಸುವುದಿಲ್ಲ. ಸಾಮಾನ್ಯ ಜನರು ಗಲಭೆ ಹರಡುವುದಿಲ್ಲ; ಆದರೆ ರಾಜಕೀಯ ಪಕ್ಷಗಳು ಹಾಗೆ ಆಗುವಂತೆ ಮಾಡುತ್ತವೆ. ಇದು ನಾಚಿಕೆಗೇಡಿನ ಸಂಗತಿ.

೨. ನಾವು ಎಲ್ಲಾ ಧರ್ಮಗಳಿಗಾಗಿ ಪ್ರಾಣವನ್ನು ಅರ್ಪಿಸಲು ಸಿದ್ಧರಿದ್ದೇವೆ. ಅಲ್ಪಸಂಖ್ಯಾತರನ್ನು ರಕ್ಷಿಸುವುದು ಬಹುಸಂಖ್ಯಾತರ ಕರ್ತವ್ಯ ಮತ್ತು ಬಹುಸಂಖ್ಯಾತರೊಂದಿಗೆ ವಾಸಿಸುವುದು ಅಲ್ಪಸಂಖ್ಯಾತರ ಕರ್ತವ್ಯ. (ವಾಸ್ತವವಾಗಿ ಇದು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿಲ್ಲ, ಈ ಬಗ್ಗೆ ಮಮತಾ ಬ್ಯಾನರ್ಜಿ ಏಕೆ ಮಾತನಾಡುತ್ತಿಲ್ಲ? ಬಂಗಾಳದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಬಹುಸಂಖ್ಯಾತ ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಿದ್ದಾರೆ, ಹಾಗೆಯೇ ಅವರು ಹಿಂದೂಗಳ ಧಾರ್ಮಿಕ ಸ್ಥಳಗಳು ಮತ್ತು ಹಬ್ಬಗಳನ್ನು ಗುರಿಯಾಗಿಸುತ್ತಿದ್ದಾರೆ, ಇದರ ಬಗ್ಗೆ ಮಮತಾ ಬ್ಯಾನರ್ಜಿ ಏಕೆ ಮೌನವಾಗಿದ್ದಾರೆ? – ಸಂಪಾದಕರು)

೩. ಕಮ್ಯುನಿಸ್ಟ್ ಮತ್ತು ರಾಮ ಒಟ್ಟಿಗೆ ಇರುವುದರ ಬಗ್ಗೆ ಪ್ರಶ್ನಿಸಲಾಯಿತು. ನಾನು ಹಿಂದೂವೇ ಎಂದು ಪ್ರಶ್ನಿಸಲಾಯಿತು? ನಾನು ನನ್ನನ್ನು ಹೆಮ್ಮೆಯಿಂದ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಮತ್ತು ಭಾರತೀಯಳು ಎಂದು ಹೇಳಿದೆ. (ಯಾವುದಾದರೂ ಮುಸಲ್ಮಾನನು ತಾನು ಮುಸ್ಲಿಂ ಮತ್ತು ಹಿಂದೂ ಎಂದು ಹೇಳುತ್ತಾನೆಯೇ? ಮತ್ತು ಅದರಂತೆ ನಡೆದುಕೊಳ್ಳುತ್ತಾನೆಯೇ? – ಸಂಪಾದಕರು) ಅವರು ನಮ್ಮಲ್ಲಿ ಭೇದ-ಭಾವ ನಿರ್ಮಿಸಲು ಬಯಸುತ್ತಾರೆ. ಅವರು ಗಲಭೆಗಳನ್ನು ಸೃಷ್ಟಿಸಲು ಬಯಸುತ್ತಾರೆ. ಅವರ ಬಲೆಯಲ್ಲಿ ಸಿಲುಕಿಕೊಳ್ಳಬೇಡಿ. ನಾನು ನಿಮ್ಮೊಂದಿಗೆ ಇದ್ದೇನೆ, ಇಡೀ ಸರಕಾರ ನಿಮ್ಮೊಂದಿಗಿದೆ. (ಬಂಗಾಳ ಸರಕಾರ ಮುಸ್ಲಿಮರೊಂದಿಗಿದ್ದು ಹಿಂದೂಗಳಿಗೆ ವಿರುದ್ಧವಾಗಿದೆ ಎಂಬುದು ಚಿರಪರಿಚಿತವಾಗಿದೆ ! – ಸಂಪಾದಕರು)

೪. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂಬುದು ಸುಳ್ಳು ಘೋಷಣೆ. ನಾವು ರಾಮಕೃಷ್ಣ, ವಿವೇಕಾನಂದರನ್ನು ನಂಬುತ್ತೇವೆ; (ವಿವೇಕಾನಂದರನ್ನು ನಂಬುವವರು ಎಂದಿಗೂ ಹಿಂದೂ ವಿರೋಧಿ ಮತ್ತು ದೇಶವಿರೋಧಿಗಳಾಗಿ ವರ್ತಿಸಲು ಸಾಧ್ಯವಿಲ್ಲ. ಆದ್ದರಿಂದ ಮಮತಾ ಬ್ಯಾನರ್ಜಿ ಸುಳ್ಳು ಹೇಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ! – ಸಂಪಾದಕರು) ಆದರೆ ನಾವು ಘೋಷಣೆಗಳನ್ನು ಮಾಡುವ ಪಕ್ಷವು ಸೃಷ್ಟಿಸಿದ ಧರ್ಮದ ವಿರುದ್ಧವಾಗಿದ್ದೇವೆ. ಅವರು ಹಿಂದೂ ವಿರೋಧಿಗಳು.

೫. ನಾನು ಯಾರಿಗೂ ಗಲಭೆ ಮಾಡಲು ಬಿಡುವುದಿಲ್ಲ. (ಗಲಭೆಗಳನ್ನು ಮುಸ್ಲಿಮರು ಯಾವಾಗಲೂ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಾಲದಾ ಮತ್ತು ಮುರ್ಷಿದಾಬಾದನಲ್ಲಿ ಗಲಭೆಗಳು ಭುಗಿಲೆದ್ದಿವೆ. ಇದರಿಂದ ಮಮತಾ ಬ್ಯಾನರ್ಜಿ ಅವರ ಸುಳ್ಳುತನ ಗಮನಕ್ಕೆ ಬರುತ್ತದೆ! – ಸಂಪಾದಕರು)

ಸಂಪಾದಕೀಯ ನಿಲುವು

ಮೂಲತಃ ಪಶ್ಚಿಮ ಬಂಗಾಳದಲ್ಲಿ ಕೆಲವು ವರ್ಷಗಳ ಹಿಂದೆಯೇ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸುವುದು ಅಗತ್ಯವಾಗಿದ್ದರೂ, ಇನ್ನೂ ಅದನ್ನು ಜಾರಿಗೊಳಿಸದಿರುವುದು ಭಾರತೀಯರ ದುರದೃಷ್ಟ. ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರ ಕೇವಲ ಹಿಂದೂ ವಿರೋಧಿ ಮಾತ್ರವಲ್ಲ, ದೇಶವಿರೋಧಿ ಕೃತ್ಯಗಳಿಗೆ ಸಹಾಯ ಮಾಡುತ್ತಿದೆ, ಇದು ಕಳೆದ ಹಲವಾರು ವರ್ಷಗಳಿಂದ ಬೆಳಕಿಗೆ ಬರುತ್ತಿದ್ದರೂ ರಾಷ್ಟ್ರಪತಿ ಆಳ್ವಿಕೆಯನ್ನು ಏಕೆ ಹೇರಲಾಗಿಲ್ಲ ಎಂಬುದು ಅರ್ಥವಾಗುತ್ತಿಲ್ಲ.