ಅಮೇರಿಕದಲ್ಲಿ ಶೇ. 20 ರಷ್ಟು ಜನರು ಇಸ್ಲಾಂ ಸ್ವೀಕರಿಸಿದ್ದಾರೆ!

ಪ್ಯೂ ಸಂಶೋಧನಾ ಕೇಂದ್ರದ ಸಮೀಕ್ಷೆಯ ಹೇಳಿಕೆ

ನವದೆಹಲಿ – ಅಮೇರಿಕಾದಲ್ಲಿನ ಪ್ಯೂ ಸಂಶೋಧನಾ ಕೇಂದ್ರವು 36 ದೇಶಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಅಮೇರಿಕದಲ್ಲಿ ಶೇ. 20 ರಷ್ಟು ಮತ್ತು ಕೀನ್ಯಾದಲ್ಲಿ ಶೇ. 11 ರಷ್ಟು ಜನರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಇಸ್ಲಾಂಗೆ ಮತಾಂತರಗೊಂಡ ಈ ಎರಡೂ ದೇಶಗಳ ಜನರು ಈ ಹಿಂದೆ ಕ್ರೈಸ್ತರಾಗಿದ್ದರು. ಇದರಲ್ಲಿ ಹದಿಹರೆಯದವರ ಸಂಖ್ಯೆ ಹೆಚ್ಚಿದೆ. ಈ ಎರಡೂ ದೇಶಗಳಲ್ಲಿ ಪ್ರಸ್ತುತ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದಾರೆ. ಸಮೀಕ್ಷೆ ನಡೆದ ಈ 36 ದೇಶಗಳಲ್ಲಿ ಭಾರತ ಸೇರಿದೆಯೋ ಇಲ್ಲವೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

1. ಈ ಸಮೀಕ್ಷೆಯಲ್ಲಿ, 36 ದೇಶಗಳ ಪೈಕಿ 13 ದೇಶಗಳಲ್ಲಿ ಮಾತ್ರ ಸೂಕ್ತ ಮಾದರಿಗಳನ್ನು ಸಂಗ್ರಹಿಸಲು ಸಾಧ್ಯವಾಯಿತು.ಇದರಲ್ಲಿ ಇಸ್ಲಾಂಗೆ ಮತಾಂತರಗೊಂಡವರು ಮತ್ತು ಇಸ್ಲಾಂ ತೊರೆದವರು, ಹೀಗೆ ಇಬ್ಬರ ಮಧ್ಯೆ, ತುಲನಾತ್ಮಕ ಅಧ್ಯಯನ ಮಾಡಲಾಗಿದೆ ಹಾಗೂ ಅವರ ವಿವರವಾದ ಮಾಹಿತಿಯನ್ನು ದಾಖಲಿಸಲಾಗಿದೆ. ಸಮೀಕ್ಷೆಯಲ್ಲಿ ಆರ್ಥಿಕವಾಗಿ ಮುಂದುವರಿದ ರಾಷ್ಟ್ರಗಳು, ಆಫ್ರಿಕಾ ಮತ್ತು ಇತರ ಖಂಡಗಳ ದೇಶಗಳನ್ನು ಸೇರಿಸಲಾಗಿವೆ.

2. ಇನ್ನು, 13 ದೇಶಗಳಲ್ಲಿ ಇಸ್ಲಾಂ ಧರ್ಮ ತೊರೆದವರ ಮೇಲೆ ಅಧ್ಯಯನ ನಡೆಸಲಾಯಿತು, ಈ ದೇಶಗಳಲ್ಲಿ ಮಾತ್ರ ಪ್ಯೂ ಸಂಸ್ಥೆಗೆ ಮಾದರಿಗಳನ್ನು ಸಂಗ್ರಹಿಸಲು ಸಾಧ್ಯವಾಯಿತು. ಅಲ್ಲಿನ ಜನರು ಇಸ್ಲಾಂ ಧರ್ಮವನ್ನು ತೊರೆದ ನಂತರ ಬೇರೆ ಯಾವುದೇ ಧರ್ಮವನ್ನು ಸ್ವೀಕರಿಸಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಅವರು ನಾಸ್ತಿಕರಾಗಿದ್ದಾರೆ ಅಥವಾ ಯಾವುದೇ ಧರ್ಮವನ್ನು ಸ್ವೀಕರಿಸಲು ಬಯಸುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಇಸ್ಲಾಂ ಧರ್ಮ ತೊರೆದ ನಂತರ ಕೆಲವರು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ್ದಾರೆ ಎಂದು ಬೆಳಕಿಗೆ ಬಂದಿದೆ.