ನವದೆಹಲಿ – ‘ಬೆವರ್ಲಿ ಹಿಲ್ಸ್ ಪೊಲೊ ಕ್ಲಬ್’ನ ಟ್ರೇಡ್‌ಮಾರ್ಕ್’ನ ಪ್ರಕರಣದಲ್ಲಿ ವಸ್ತುಗಳ ಆನ್‌ಲೈನ್ ಮಾರಾಟ ಮಾಡುವ ‘ಅಮೆಜಾನ್’ ಸಂಸ್ಥೆಗೆ ದೆಹಲಿ ಹೈಕೋರ್ಟ್ 340 ಕೋಟಿ ರೂಪಾಯಿ ದಂಡ ವಿಧಿಸಿದೆ. ಭಾರತೀಯ ವಕೀಲರು ಈ ತೀರ್ಪನ್ನು “ಐತಿಹಾಸಿಕ” ಎಂದು ಹೇಳಿದ್ದಾರೆ; ಏಕೆಂದರೆ ಟ್ರೇಡ್‌ಮಾರ್ಕ್ ಪ್ರಕರಣದಲ್ಲಿ ಹಿಂದೆಂದೂ ಅಮೆರಿಕದ ಸಂಸ್ಥೆಗೆ ಇಷ್ಟು ಭಾರಿ ದಂಡ ವಿಧಿಸಿರಲಿಲ್ಲ.
2020 ರಲ್ಲಿ, ಬೆವರ್ಲಿ ಹಿಲ್ಸ್ ಪೊಲೊ ಕ್ಲಬ್‌ನ “ಕುದುರೆಯ ಟ್ರೇಡ್‌ಮಾರ್ಕ” ನ ಮಾಲಿಕತ್ವ ಹೊಂದಿರುವ ‘ಲೈಫ್‌ಸ್ಟೈಲ್ ಇಕ್ವಿಟೀಸ್’ ಈ ಸಂಸ್ಥೆಯು ಮೊಕದ್ದಮೆ ದಾಖಲಿಸಿತ್ತು. ಅಮೆಜಾನ್‌ನ ಭಾರತೀಯ ವೆಬ್‌ಸೈಟ್ ಅದೇ ಲೋಗೋ (ಚಿನ್ಹೆ) ಹೊಂದಿರುವ ಬಟ್ಟೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ ಎಂದು ಈ ಸಂಸ್ಥೆ ಆರೋಪಿಸಿತ್ತು. ಅಮೆಜಾನ್‌ನ ಭಾರತೀಯ ಶಾಖೆಯ ಈ ಆರೋಪವನ್ನು ನಿರಾಕರಿಸಿತ್ತು.