‘ಪೂಜಾ ಸ್ಥಳ ಕಾನೂನು 1991’ ರದ್ದುಪಡಿಸುವ ಬಗ್ಗೆ ಕೇಂದ್ರ ಸರಕಾರ ಪ್ರಮಾಣಪತ್ರ ಸಲ್ಲಿಸಬೇಕು ! – ಸರ್ವೋಚ್ಚ ನ್ಯಾಯಾಲಯ

ಈ ಪ್ರಕರಣದಲ್ಲಿ ಮುಂದಿನ ದಿನಾಂಕದ ವರೆಗೆ ಯಾವುದೇ ಹೊಸ ಅರ್ಜಿಯನ್ನು ದಾಖಲಿಸುವುದರ ಮೇಲೆ ನಿರ್ಬಂಧ

ನವ ದೆಹಲಿ – ‘ಪೂಜಾ ಸ್ಥಳಗಳ ಕಾನೂನು 1991’ (ಪ್ಲೇಸಸ್ ಆಫ್ ವರ್ಶಿಪ್ 1991) ಈ ಕಾನೂನಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ 4 ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಆದೇಶಿಸಿದೆ. ಹಾಗೆಯೇ ನ್ಯಾಯಾಲಯವು, ಎಲ್ಲಿಯವರೆಗೆ ನಾವು ಈ ಪ್ರಕರಣದ ಆಲಿಕೆ ನಡೆಸುತ್ತಿದ್ದೇವೆಯೋ ಅಲ್ಲಿಯ ವರೆಗೆ ದೇಶದ ಧಾರ್ಮಿಕ ಸ್ಥಳಗಳ ವಿರುದ್ಧ ಯಾವುದೇ ಹೊಸ ಪ್ರಕರಣವನ್ನು ದಾಖಲಿಸಬಾರದು ಎಂದು ಹೇಳಿದೆ.

1. ಸಿಪಿಐ(ಎಂ), ಇಂಡಿಯನ್ ಮುಸ್ಲಿಂ ಲೀಗ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ (ಶರದ ಪವಾರ) ಈ ಪಕ್ಷಗಳ ಪ್ರತಿನಿಧಿಗಳು ಹಾಗೂ ರಾಷ್ಟ್ರೀಯ ಜನತಾ ದಳದ ಸಂಸದ ಮನೋಜ್ ಝಾ, ಭಾಜಪ ನಾಯಕ ಡಾ. ಸುಬ್ರಹ್ಮಣ್ಯಂ ಸ್ವಾಮಿ, ಕಥಾವಾಚಕ ದೇವಕಿನಂದನ ಠಾಕೂರ ಮತ್ತು ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಅವರು ಈ ಅರ್ಜಿಗಳನ್ನು ನಮೂದಿಸಿದ್ದಾರೆ.

2. ಈ ಅರ್ಜಿಗಳ ವಿರುದ್ಧ ಜಮಿಯತ್ ಉಲೇಮಾ-ಎ-ಹಿಂದ್ ಅರ್ಜಿ ಸಲ್ಲಿಸಿದೆ. ಜಮಿಯತ ತನ್ನ ವಾದದಲ್ಲಿ, ಈ ಕಾನೂನಿನ ವಿರುದ್ಧದ ಅರ್ಜಿಗಳನ್ನು ವಿಚಾರ ನಡೆಸಿದರೆ, ದೇಶಾದ್ಯಂತ ಮಸೀದಿಗಳ ವಿರುದ್ಧ ಮೊಕದ್ದಮೆಗಳ ಪ್ರವಾಹವೇ ಹರಿದು ಬರಬಹುದು ಎಂದು ಹೇಳಿದೆ. (ಮುಸ್ಲಿಂ ದಾಳಿಕೋರರು ದೇವಸ್ಥಾನಗಳ ಮೇಲಿನ ದಾಳಿಯ ‘ಪ್ರವಾಹ’ ವನ್ನೇ ತಂದಿದ್ದರು, ಅದು ಸರಿಯಾಗಿತ್ತು, ಎಂದು ಜಮಿಯತಗೆ ಅನಿಸುತ್ತದೆಯೇ ? – ಸಂಪಾದಕರು) ಮುಸ್ಲಿಂ ಪರ್ಸನಲ ಲಾ ಬೋರ್ಡ ಮತ್ತು ಜ್ಞಾನವಾಪಿ ಮಸೀದಿಯ ಉಸ್ತುವಾರಿಯನ್ನು ನೋಡಿಕೊಳ್ಳುವ ಅಂಜುಮನ್ ಮಸೀದಿ ಆಡಳಿತ ಸಮಿತಿ ಕೂಡ ಈ ಅರ್ಜಿಯನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದೆ. (ಮುಸ್ಲಿಂ ದಾಳಿಕೋರರು ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಮಸೀದಿಗಳನ್ನಾಗಿ ಪರಿವರ್ತಿಸಿದ ಇತಿಹಾಸವಿರುವಾಗ ಅದನ್ನು ತಿರಸ್ಕರಿಸಿ ದೇವಸ್ಥಾನಗಳ ಮೇಲೆ ತಮ್ಮ ಹಕ್ಕನ್ನು ಪ್ರತಿಪಾದಿಸುವ ಮುಸ್ಲಿಮರು ಮತ್ತು ಅವರ ಸಂಘಟನೆಗಳು ದೇಶದಲ್ಲಿ ಇರುವಾಗ ಹಿಂದೂ-ಮುಸ್ಲಿಂರ ನಡುವೆ ಎಂದಾದರೂ ಸಹೋದರತ್ವ ಇರಲು ಸಾಧ್ಯವೇ ? ಹಿಂದೂಗಳನ್ನು ಇಲ್ಲಿಯವರೆಗೆ ಸಹೋದರತ್ವದ ಅಮಲಿನಲ್ಲಿಟ್ಟು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದರು, ಈಗ ಹಿಂದೂಗಳು ಜಾಗೃತರಾಗಿದ್ದಾರೆ ಮತ್ತು ಅವರು ತಮ್ಮ ದೇವಸ್ಥಾನಗಳನ್ನು ಮರಳಿ ಪಡೆದೇ ಪಡೆಯುತ್ತಾರೆ ! – ಸಂಪಾದಕರು)

‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ 1991’ ಕಾಯಿದೆಯಲ್ಲಿನ ಆಕ್ಷೇಪಾರ್ಹ ಕಲಂ

1. ರಾಜ್ಯ ಸಂವಿಧಾನದ ಕಲಂ 25 ಅಡಿಯಲ್ಲಿ ಎಲ್ಲಾ ನಾಗರಿಕರು ಮತ್ತು ನಾಗರಿಕರಲ್ಲದವರು ತಮ್ಮ ಧರ್ಮದ ಮೇಲೆ ವಿಶ್ವಾಸವಿಡಲು, ಆಚರಿಸಲು ಮತ್ತು ಪ್ರಚಾರ ಮಾಡಲು ಸಮಾನ ಅಧಿಕಾರವನ್ನು ಹೊಂದಿದ್ದಾರೆ. ಈ ಕಾಯ್ದೆಯು ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖರಿಂದ ಈ ಅಧಿಕಾರವನ್ನು ಕಸಿದುಕೊಳ್ಳುತ್ತದೆ ಎಂದು ಅರ್ಜಿಗಳಲ್ಲಿ ಹೇಳಲಾಗಿದೆ.

2. ಸಂವಿಧಾನದ ಕಲಂ 26 ಇದು ಪ್ರತಿಯೊಂದು ಧಾರ್ಮಿಕ ಸಮುದಾಯಕ್ಕೆ ಅವರ ಪ್ರಾರ್ಥನಾಸ್ಥಳಗಳು ಮತ್ತು ತೀರ್ಥಕ್ಷೇತ್ರಗಳನ್ನು ನಿರ್ವಹಿಸುವ, ನೋಡಿಕೊಳ್ಳುವ ಮತ್ತು ಆಡಳಿತ ನಡೆಸುವ ಅಧಿಕಾರವಿದೆ. ಈ ಅರ್ಜಿಯಲ್ಲಿ, ಈ ಕಾನೂನು ಜನರನ್ನು ಧಾರ್ಮಿಕ ಆಸ್ತಿಯ ಮಾಲೀಕತ್ವ/ಸ್ವಾಧೀನದಿಂದ ವಂಚಿತಗೊಳಿಸುತ್ತದೆ. ಆದ್ದರಿಂದ, ಈ ಕಾಯಿದೆಯು ಅವರ ಪ್ರಾರ್ಥನಾ ಸ್ಥಳಗಳು, ತೀರ್ಥಕ್ಷೇತ್ರಗಳು ಭೇಟಿ ನೀಡುವ ಮತ್ತು ದೇವರ ಆಸ್ತಿಯನ್ನು ಹಿಂಪಡೆಯುವ ಅಧಿಕಾರವನ್ನು ಸಹ ಕಸಿದುಕೊಂಡಿದೆ, ಎಂದು ಹೇಳಿದೆ.

3. ಸಂವಿಧಾನದ ಕಲಂ 29 ಎಲ್ಲಾ ನಾಗರಿಕರಿಗೆ ಅವರ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಹಕ್ಕನ್ನು ನೀಡುತ್ತದೆ. ಈ ಕಾಯಿದೆಯು ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ಧಾರ್ಮಿಕ ಸ್ಥಳಗಳು ಮತ್ತು ತೀರ್ಥಕ್ಷೇತ್ರಗಳನ್ನು ಹಿಂಪಡೆಯಲು ಈ ಸಮುದಾಯಗಳ ಅಧಿಕಾರವನ್ನು ಕಸಿದುಕೊಳ್ಳುತ್ತದೆ.