ಪಾಕಿಸ್ತಾನ ಇದುವರೆಗೆ 51 ಸಾವಿರ ಅಫ್ಘಾನಿ ನಿರಾಶ್ರಿತರನ್ನು ಹೊರಹಾಕಿದೆ !

ಆತ್ಮಾಹುತಿ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಅಫ್ಘಾನಿಗಳನ್ನು ಹೊರಹಾಕಲಾಗುತ್ತಿದೆ !

ಕಾಬೂಲ್ (ಅಫ್ಘಾನಿಸ್ತಾನ) – ಪಾಕಿಸ್ತಾನ ಒಂದೇ ದಿನದಲ್ಲಿ 3 ಸಾವಿರದ 248 ಆಫ್ಘನ್ ನಿರಾಶ್ರಿತರನ್ನು ತನ್ನ ದೇಶದಿಂದ ಅಫ್ಘಾನಿಸ್ತಾನಕ್ಕೆ ಕಳುಹಿಸಿದೆ. ಪಾಕಿಸ್ತಾನ ನೀಡಿರುವ ಮಾಹಿತಿಯ ಪ್ರಕಾರ ಪಾಕಿಸ್ತಾನವು 51 ಸಾವಿರಕ್ಕೂ ಹೆಚ್ಚು ಅಕ್ರಮ ನಿರಾಶ್ರಿತರನ್ನು ಅಫ್ಘಾನಿಸ್ತಾನಕ್ಕೆ ವಾಪಸ್ ಕಳುಹಿಸಿದೆ. ಅಫ್ಘಾನಿಸ್ತಾನದ ತಾಲಿಬಾನ್ ಸರಕಾರ ಹಾಗೆಯೇ ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳ ಸಂಘಟನೆ ’ಆಮ್ನೆಸ್ಟಿ’ಯು ಪಾಕಿಸ್ತಾನದ ಕ್ರಮವನ್ನು ವಿರೋಧಿಸಿವೆ. ಹಾಗೂ ಇದನ್ನು ಮರುಪರಿಶೀಲಿಸುವಂತೆ ಕೋರಿವೆ.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಆತ್ಮಾಹುತಿ ದಾಳಿಗಳನ್ನು ತಡೆಯಲು ಅಕ್ರಮವಾಗಿ ವಾಸಿಸುತ್ತಿರುವ ಆಫ್ಘನ್ನರನ್ನು ಹೊರಹಾಕಲಾಗುತ್ತಿದ್ದು, ಇಂತಹವರಿಗೆ ನವೆಂಬರ್ 1 ರವರೆಗೆ ದೇಶ ತೊರೆಯಲು ಗಡುವು ನೀಡಲಾಗಿದೆ. ಪಾಕಿಸ್ತಾನ ಗೃಹ ಸಚಿವ ಸರ್ಫ್ರರಾಜ್ ಬುಗತಿ ಇವರು, ಭಯೋತ್ಪಾದನೆ ಮತ್ತು ಕಳ್ಳಸಾಗಣೆಯಲ್ಲಿ ತೊಡಗಿರುವವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತವು ಇದೇ ಕಾರಣಗಳಿಗಾಗಿ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರನ್ನು ದೇಶದಿಂದ ಹೊರಹಾಕಬೇಕಾಗಿದೆ. ಪಾಕಿಸ್ತಾನಕ್ಕೆ ಸಾಧ್ಯವಾದರೆ, ಭಾರತ ಏಕೆ ಇಲ್ಲ ?

ಇಸ್ಲಾಮಿಕ್ ದೇಶಗಳು ನೆರೆಯ ದೇಶಗಳ ಮುಸ್ಲಿಮರಿಗೆ ಆಶ್ರಯ ನೀಡಲು ಬಯಸುವುದಿಲ್ಲ, ಹೀಗಿರುವಾಗ ಬಹುಸಂಖ್ಯಾತ ಹಿಂದೂಗಳ ಭಾರತದಲ್ಲಿ ಇತರ ಧರ್ಮಗಳಿಗೆ ಏಕೆ ಆಶ್ರಯ ನೀಡಬೇಕು ?