Statement by Ajit Doval: ಭಯೋತ್ಪಾದನೆಯನ್ನು ಬೆಂಬಲಿಸುವವರಿಗೆ ತಕ್ಷಣವೇ ಪಾಠ ಕಲಿಸಬೇಕು !

ಪಾಕಿಸ್ತಾನದ ಹೆಸರನ್ನು ಹೇಳದೆ ಕರೆ ನೀಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ

ಅಸ್ತಾನಾ (ಕಝಕಿಸ್ತಾನ್) – ಭಯೋತ್ಪಾದನೆಯನ್ನು ಬೆಂಬಲಿಸುವವರನ್ನು ಪಾಠ ಕಲಿಸುವಲ್ಲಿ ತಡಮಾಡಬಾರದು ಎದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ ಇವರು ಪಾಕಿಸ್ತಾನದ ಹೆಸರನ್ನು ಹೇಳದೆ ಕರೆ ನೀಡಿದ್ದಾರೆ. ಇಲ್ಲಿ ಆಯೋಜಿಸಲಾಗಿದ್ದ ಶಾಂಘೈ ಸಹಕಾರ ಪರಿಷತ್ತಿನಲ್ಲಿ ಅವರು ಮಾತನಾಡುತ್ತಿದ್ದರು.

1. ಅಜಿತ ದೋವಲ ಮಾತು ಮುಂದುವರಿಸುತ್ತಾ, ಭಾರತ ಇತರ ದೇಶಗಳೊಂದಿಗೆ ವ್ಯಾಪಾರ ಮತ್ತು ಸಂಪರ್ಕಗಳನ್ನು ವೃದ್ಧಿಸಲು ಕಟಿಬದ್ಧವಾಗಿದೆ. ಪರಿಷತ್ತಿನ ಸದಸ್ಯ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಅಖಂಡತೆಯನ್ನು ಗಮನಕ್ಕೆ ತೆಗೆದುಕೊಂಡು ಇಂತಹ ಉಪಕ್ರಮಗಳನ್ನು ಕೈಗೊಳ್ಳಬೇಕು. ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಯಾರೇ, ಎಲ್ಲಿಯಾದರೂ, ಯಾವುದೇ ಉದ್ದೇಶದಿಂದ ಮಾಡಿರುವ ಯಾವುದೇ ಭಯೋತ್ಪಾದಕ ಕೃತ್ಯವನ್ನು ಖಂಡಿತವಾಗಿಯೂ ಬೆಂಬಲಿಸಲು ಸಾಧ್ಯವಿಲ್ಲ. ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ತೊಡಗಿರುವವರ ವಿರುದ್ಧ ಪರಿಣಾಮಕಾರಿ ಮತ್ತು ತ್ವರಿತ ಕ್ರಮ ಕೈಗೊಳ್ಳಬೇಕು. ಭಯೋತ್ಪಾದಕರಿಗೆ ನೀಡಲಾಗುವ ಹಣಕಾಸು ನೆರವು ನೀಡುವುದನ್ನು ತಡೆಯಲು ಪರಿಷತ್ತಿನ `ಫ್ರೇಮವರ್ಕ ಟು ಕೌಂಟರ ಟೆರರಿಸಂ’ ಅಡಿಯಲ್ಲಿ ಸಹಕಾರಕ್ಕಾಗಿ ಪರಿಣಾಮಕಾರಿ ಕಾರ್ಯವಿಧಾನಗಳನ್ನು ಸಿದ್ಧಗೊಳಿಸಲು ಭಾರತ ಬೆಂಬಲಿಸುತ್ತದೆ.

2. ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ದೊವಾಲ್ ಇವರು, ಅಫ್ಘಾನಿಸ್ತಾನದ ಹತ್ತಿರದ ನೆರೆಯ ರಾಷ್ಟ್ರದ ಸಂಬಂಧದಿಂದ ಭಾರತವು ಅಫ್ಘಾನಿಸ್ತಾನದಲ್ಲಿ ಕಾನೂನು ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಹೊಂದಿದೆ. ಅಫ್ಘಾನಿಸ್ತಾನದ ಮಾನವತಾವಾದಿ ಸಹಾಯ ನೀಡುವುದು, ಸಮಗ್ರತೆ ಮತ್ತು ಪ್ರಾತಿನಿಧಿಕ ಸರಕಾರದ ರಚನೆಯನ್ನು ಖಚಿತಪಡಿಸುವುದು, ಭಯೋತ್ಪಾದನೆ ಮತ್ತು ಮಾದಕ ವಸ್ತು ಕಳ್ಳಸಾಗಣೆಯ ವಿರುದ್ಧ ಹೋರಾಡುವುದು ಮತ್ತು ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರು ಹಕ್ಕುಗಳನ್ನು ರಕ್ಷಿಸುವುದು ಇದು ಭಾರತದ ತಕ್ಷಣದ ಪ್ರಾಧಾನ್ಯತೆಯಾಗಿದೆಯೆಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತವು ಇತರರಿಗೆ ಕರೆ ನೀಡುವ ಬದಲು, ತಾನೇ ಮೊದಲು ಪ್ರಯತ್ನಿಸುವುದು ಆವಶ್ಯಕವಾಗಿದೆ ಎಂದೇ ಭಾರತೀಯ ಜನತೆಗೆ ಅನಿಸುತ್ತದೆ