Muslim Man Attacks Police Constable : ಪೊಲೀಸ್ ಪೇದೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಮಹಮ್ಮದ್ ಬಶೀರ್ !

ಜಯಪುರ (ರಾಜಸ್ಥಾನ) – ಟೋಂಕ್ ಜಿಲ್ಲೆಯ ಕೊತ್ವಾಲಿ ನಗರ ಪ್ರದೇಶದಲ್ಲಿ ಮಹಮ್ಮದ್ ಬಶೀರ್ ಹೆಸರಿನ ಓರ್ವ ಮುಸಲ್ಮಾನ ಯುವಕನು ಪೊಲೀಸ್ ಠಾಣೆಯ ಎದುರು ಪೊಲೀಸ್ ಪೇದೆಯೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.  ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಸಾರ ಮಾಧ್ಯಮವು ನೀಡಿದ ವರದಿಯ ಪ್ರಕಾರ, ಟೋಂಕ್ ಜಿಲ್ಲೆಯ ಕೊತ್ವಾಲಿ ನಗರ ಪ್ರದೇಶದಲ್ಲಿ ವಾಸಿಸುವ ಸದ್ದಾಂ ಅಲಿಯಾಸ್ ಮಹಮ್ಮದ್ ಬಶೀರ್ ಇವನಿಗೆ ಉಪಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ  ಹಾಜರಾಗುವಂತೆ ನೋಟೀಸ್ ಬಂದಿತ್ತು. ಈ ನೋಟೀಸ್ ಸಿಕ್ಕ ನಂತರ ಸದ್ದಾಂನು ಸಿಟ್ಟಿನಿಂದ ಪೊಲೀಸ್ ಠಾಣೆಗೆ ಬಂದನು. ಪ್ರವೇಶದ್ವಾರದಲ್ಲಿ ಒಬ್ಬ ಪೊಲೀಸ್ ಪೇದೆ ನಿಂತಿದ್ದನು. ಸದ್ದಾಂ ಅವರನ್ನು, ‘ನನ್ನ ವಿರುದ್ಧ ಯಾರು ದೂರು ನೀಡಿದ್ದಾರೆ ? ನಾನು ಅವನನ್ನು  ಬಿಡುವುದಿಲ್ಲ’ ಎಂದು ವಿಚಾರಿಸಿದನು. ಪೊಲೀಸ್ ಪೇದೆ ಉತ್ತರಿಸುವ ಮೊದಲೇ ಸದ್ದಾಂನು ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಪೊಲೀಸರು ಮಹಮ್ಮದ್ ಬಶೀರ್ ನನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಬಗ್ಗೆ ಅಗತ್ಯ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಸಂಪಾದಕೀಯ ನಿಲುವು

ಪೊಲೀಸರ ಮೇಲೆ ದಾಳಿ ಮಾಡುವಷ್ಟೂ ಉದ್ಧಟರಾದ ಮುಸಲ್ಮಾನರು !