Bangladeshi Fishermen Arrested : ಬಾಂಗ್ಲಾದೇಶಿ ಮೀನುಗಾರರನ್ನು ಬಂಧಿಸಿದ ಭಾರತೀಯ ಕರಾವಳಿ ರಕ್ಷಣಾ ಪಡೆ !

ಪಾರಾದೀಪ (ಒಡಿಶಾ) – ಭಾರತೀಯ ಸಮುದ್ರ ಪ್ರದೇಶದಲ್ಲಿ ನುಗ್ಗಿ ಮೀನುಗಾರಿಕೆ ನಡೆಸುತ್ತಿದ್ದ 78 ಬಾಂಗ್ಲಾದೇಶದ ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಬಂಧಿಸಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 2 ನೌಕೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ನೌಕೆಗಳು ‘ಎಫ್‌.ವಿ.ಲೈಲಾ-2’ ಮತ್ತು ‘ಎಫ್‌.ವಿ.ಮೇಘನಾ-5’ ಎಂದು ಗುರುತಿಸಲಾಗಿದೆ. ಅವರನ್ನು ವಿಚಾರಣೆಗಾಗಿ ಪಾರಾದೀಪ ಬಂದರಿಗೆ ಕರೆದೊಯ್ಯಲಾಗಿದೆ. ಭಾರತದ ಸಮುದ್ರದಲ್ಲಿ ನುಗ್ಗಿದ ಬಾಂಗ್ಲಾದೇಶದ ಮೀನುಗಾರರ ವಿರುದ್ಧ ‘ಸಾಗರ ವಲಯ ಕಾಯ್ದೆ 1981’ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಭಾರತದ ಗಡಿಯಲ್ಲಿ ಪ್ರವೇಶಿಸುವ ಶತ್ರು ದೇಶಗಳ ನುಸುಳುಕೋರರಿಗೆ ಮತ್ತೆಂದೂ ಭಾರತದ ಗಡಿಯಲ್ಲಿ ನುಸುಳುವ ಧೈರ್ಯ ಮಾಡಬಾರದು ಎಂಬ ಪಾಠವನ್ನು ಕಲಿಸಬೇಕು! – ಸಂಪಾದಕರು)  

ಭಾರತೀಯ ಕರಾವಳಿ ರಕ್ಷಣಾ ಪಡೆ ಗಸ್ತು ತಿರುಗುತ್ತಿದ್ದಾಗ, ಮೀನುಗಾರಿಕೆ ನಡೆಸುತ್ತಿದ್ದ 2 ಬಾಂಗ್ಲಾದೇಶದ  ನೌಕೆಗಳು ಭಾರತದ ಪ್ರಾದೇಶಿಕ ಸಮುದ್ರದಲ್ಲಿ ನುಸುಳಿರುವುದು ಕಂಡುಬಂದಿದೆ. ಅವರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಸೆರೆಹಿಡಿದಿದ್ದಾರೆ. ನೌಕೆಗಳಲ್ಲಿದ್ದ ಒಟ್ಟು 78 ಜನರನ್ನು ಬಂಧಿಸಲಾಗಿದೆ. ಎರಡೂ ನೌಕೆಗಳು ಬಾಂಗ್ಲಾದೇಶದಲ್ಲಿ ನೋಂದಣಿಯಾಗಿವೆ. ಈ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ.