ಯೂರೋಪಿನಲ್ಲಿ ಇಸ್ಲಾಮೀಕರಣ ನಡೆಯುತ್ತಿದ್ದು, ಇಲ್ಲಿ ಇಸ್ಲಾಂಗೆ ಸ್ಥಾನವಿಲ್ಲ ! – ಇಟಲಿಯ ಪ್ರಖರ ರಾಷ್ಟವಾದಿ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ

  • ಯುರೋಪಿನಲ್ಲಿ ಲಕ್ಷಾಂತರ ಮುಸ್ಲಿಂ ನಿರಾಶ್ರಿತರು ಬರುತ್ತಿರುವ ಬಗ್ಗೆ ಟೀಕೆ !

  • ಇಟಲಿಯ ಪ್ರಖರ ರಾಷ್ಟವಾದಿ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿಯವರ ಹೇಳಿಕೆ !

 

ರೋಮ್ (ಇಟಲಿ) – ಇಸ್ಲಾಮಿಕ್ ಸಂಸ್ಕೃತಿ ಮತ್ತು ಯುರೋಪಿಯನ್ ಸಂಸ್ಕೃತಿಯ ನಡುವೆ ಯಾವುದೇ ಹೋಲಿಕೆಯಿಲ್ಲ. ಯುರೋಪಿನ ಇಸ್ಲಾಮೀಕರಣ ನಡೆಯುತ್ತಿದೆ. ಯುರೋಪಿನಲ್ಲಿ ಇಸ್ಲಾಂ ಗೆ ಯಾವುದೇ ಸ್ಥಾನವಿಲ್ಲ ಎಂದು ಪ್ರಖರವಾದ ಹೇಳಿಕೆಯನ್ನು ಇಟಲಿಯ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ನೀಡಿದ್ದಾರೆ. ಅವರ ಹೇಳಿಕೆಯ ಹಳೆಯ ವಿಡಿಯೋ ಪ್ರಸಾರವಾಗಿದೆ. ಅದರಲ್ಲಿ ಅವರು ಇಟಲಿಯ ಇಸ್ಲಾಮೀ ಸಾಂಸ್ಕೃತಿಕ ಕೇಂದ್ರಗಳಿಗೆ ಸೌದಿ ಅರೇಬಿಯಾದಿಂದ ಆರ್ಥಿಕ ಸಹಾಯ ಸಿಗುತ್ತಿದೆ. ಅಲ್ಲಿ ಶರಿಯತ ಕಾನೂನು ಜಾರಿಯಲ್ಲಿದೆ. ನಮ್ಮ ಸಭ್ಯತೆಯ ಮೌಲ್ಯ ಮತ್ತು ಇಸ್ಲಾಮಿನ ಮೌಲ್ಯಗಳಲ್ಲಿ ಸಾಮ್ಯತೆಯಿಲ್ಲ. ಎರಡೂ ಸಂಸ್ಕೃತಿಗಳು ವಿರೋಧಾತ್ಮಕವಾಗಿವೆ. ಅದುದರಿಂದ ಮುಸ್ಲಿಮರು ಯುರೋಪಿನಿಂದ ದೂರ ಉಳಿಯಬೇಕು.

ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರ ಹೇಳಿಕೆಯ ಬಳಿಕ ಜಾರ್ಜಿಯಾ ಮೆಲೋನಿ ಅವರ ಈ ಹೇಳಿಕೆಯ ವೀಡಿಯೊವನ್ನು ಪ್ರಸಾರವಾಗಿದೆ. ಯುರೋಪಿನಲ್ಲಿ ಬರುತ್ತಿರುವ ಮುಸ್ಲಿಂ ಶರಣಾರ್ಥಿಗಳಿಂದ ಯುರೋಪಿ ಸಂಸ್ಕೃತಿಗೆ ಅಪಾಯವಿದೆಯೆಂದು ಸುನಕ ಇವರು ಹೇಳಿದ್ದರು. ಪ್ರಧಾನಮಂತ್ರಿ ಸುನಕ ಇವರು ಇತ್ತೀಚೆಗೆ ಇಟಲಿಯ ಪ್ರವಾಸಕ್ಕೆ ಬಂದಿದ್ದರು. ಆ ಸಮಯದಲ್ಲಿ ಯುರೋಪಿನಲ್ಲಿ ಅಕ್ರಮವಾಗಿ ಹೆಚ್ಚುತ್ತಿರುವ ನಿರಾಶ್ರಿತರ ಸಂಖ್ಯೆಯ ಬಗ್ಗೆ ಅವರು ಹೇಳಿಕೆ ನೀಡಿದ್ದರು. ನಿರಾಶ್ರಿತರಿಂದ ಯುರೋಪಿನಲ್ಲಿ ಹೆಚ್ಚುತ್ತಿರುವ ಸಮಸ್ಯೆಯನ್ನು ನಿವಾರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆಯೆಂದೂ ಅವರು ಹೇಳಿದರು.

ಜಾರ್ಜಿಯಾ ಮೆಲೋನಿಯವರ ಪರಿಚಯ !

ಸೆಪ್ಟೆಂಬರ 2023ರಲ್ಲಿ ದೆಹಲಿಯಲ್ಲಿ ನಡೆದ ಜಿ-20 ಸಮ್ಮೇಳನದಲ್ಲಿ ಭಾಗವಹಿಸಿದ್ದ ಜಾರ್ಜಿಯಾ ಮೆಲೋನಿ ಭಾರತೀಯರ ನಡುವೆ ಹೆಸರುವಾಸಿಯಾಗಿದ್ದಾರೆ. ಅವರು ಇಟಲಿಯ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿದ್ದಾರೆ. ಅವರು ಪ್ರಖರ ರಾಷ್ಟ್ರವಾದಿ ರಾಜಕೀಯ ಪಕ್ಷವಾದ ‘ಬ್ರದರ್ಸ್ ಆಫ್ ಇಟಲಿ’ ಯ ನಾಯಕರಾಗಿದ್ದು, ಸ್ವತಃ ತಾವು ದ್ವಿತೀಯ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದ ಇಟಲಿಯ ಸರ್ವಾಧಿಕಾರಿ ಮುಸೊಲಿನಿಯ ಉತ್ತರಾಧಿಕಾರಿಯೆಂದು ಹೇಳುತ್ತಾರೆ.

ಸಂಪಾದಕೀಯ ನಿಲುವು

ಭಾರತ ಕಳೆದ 1000 ವರ್ಷಗಳಿಂದ ಇಸ್ಲಾಮೀಕರಣಗೊಳ್ಳುತ್ತಿದ್ದು, ಮುಸ್ಲಿಂ ಆಕ್ರಮಣಕಾರರಿಂದಾಗಿ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಭಾರತದ ಭೂಪ್ರದೇಶವನ್ನು ಕಬಳಿಸಲ್ಪಟ್ಟಿದೆ. ಇಷ್ಟೆಲ್ಲ ಆಗಿದ್ದರೂ ನಮ್ಮ ರಾಜಕೀಯ ನಾಯಕರು ಓಲೈಕೆಯ ರಾಜಕಾರಣವನ್ನು ಮಾಡಿ ಆತ್ಮಘಾತುಕ(?) ಮಾಡುತ್ತಿದ್ದಾರೆ. ಇಷ್ಟೆಲ್ಲ ಆಗುತ್ತಿದ್ದರೂ ಹಿಂದೂಗಳು ಜಾಗೃತರಾಗುತ್ತಿಲ್ಲವೆನ್ನುವುದು ನಾಚಿಕೆಗೇಡು!