ದಂಡಿ ಯಾತ್ರೆಯಲ್ಲಿ ಮೋಹನದಾಸ ಗಾಂಧಿ ಇವರಿಗೆ ಹಾಕಿರುವ ಹಾರ ಲಂಡನ್ ಹರಾಜಿಗಿಟ್ಟರೂ ಹರಾಜಾಗಲಿಲ್ಲ !

ಲಂಡನ್ (ಬ್ರಿಟನ್) – ೧೯೩೦ ರಲ್ಲಿ ಮೋಹನದಾಸ ಗಾಂಧಿ ಇವರು ಉಪ್ಪಿನ ಮೇಲಿನ ತೆರಿಗೆ ರದ್ದು ಪಡಿಸುವುದಕ್ಕಾಗಿ ದಂಡಿಯಾತ್ರೆ (ಉಪ್ಪಿನ ಸತ್ಯಾಗ್ರಹ) ನಡೆಸಿದ್ದರು. ಈ ಯಾತ್ರೆಯಲ್ಲಿ ಗಾಂಧಿ ಇವರಿಗೆ ಹಾರ ಅರ್ಪಿಸಲಾಗಿತ್ತು. ಅದು ಸಂಗ್ರಹದಲ್ಲಿ ಇರಿಸಲಾಗಿತ್ತು. ಇತ್ತೀಚಿಗೆ ಅದನ್ನು ಲಂಡನ್ ನಲ್ಲಿ ಹರಾಜಿಗೆ ಇಡಲಾಗಿತ್ತು; ಆದರೆ ಯಾರು ಖರೀದಿ ಮಾಡದೇ ಇದ್ದರಿಂದ ಅದು ಮಾರಾಟವಾಗಲಿಲ್ಲ. ಈ ಹಾರದ ಬೆಲೆ ೨೧ ರಿಂದ ೩೦ ಲಕ್ಷ ರೂಪಾಯ ಎಂದು ಹೇಳಲಾಗಿದ್ದು. ಇದೇ ಹರಾಜಿನಲ್ಲಿ ಅನೇಕ ಭಾರತೀಯ ಕಲಾಕೃತಿಗಳು ಇದ್ದವು, ಅವುಗಳು ಒಳ್ಳೆಯ ಬೆಲೆಗೆ ಮಾರಾಟವಾದವು. ಹರಾಜನ್ನು ‘ಲಿಯೋನ್ ಅಂಡ್ ಟರ್ನಬುಲ್ ಆಕ್ಷನ್ ಹೌಸ್ ‘ವತಿಯಿಂದ ಆಯೋಜಿಸಲಾಗಿತ್ತು.
ಗಾಂಧಿ ಇವರಿಗೆ ಹಾಕಲಾಗಿರುವ ಹಾರ ಗುಲಾಬಿ ಬಟ್ಟೆ, ರಟ್ಟು, ಚಿನ್ನದ ದಾರಾ ಮತ್ತು ಕಾಗದದಿಂದ ತಯಾರಿಸಲಾಗಿತ್ತು. ಅದರ ಜೊತೆಗೆ ಗಾಂಧಿ ಇವರಿಗೆ ಹಾರ ಹಾಕುತ್ತಿರುವ ಒಂದು ಛಾಯಾಚಿತ್ರ ಕೂಡ ಇರಿಸಲಾಗಿತ್ತು.

ಸಂಪಾದಕೀಯ ನಿಲುವು

ಇದರಿಂದ ಗಾಂಧಿ ಇವರ ವಿಚಾರಧಾರೆಯ ಪ್ರಭಾವ ಈಗ ಇಳಿದಿದೆ, ಎಂದು ಯಾರಾದರೂ ಹೇಳಿದರೆ ತಪ್ಪಾಗಲಾರದು !