Chinmoy Prabhu das Bail Hearing Delayed : ಚಿನ್ಮಯ ಪ್ರಭು ಇವರ ಜಾಮೀನು ಅರ್ಜಿಯ ಕುರಿತು ತ್ವರಿತ ವಿಚಾರಣೆ ನಡೆಸಲು ಬಾಂಗ್ಲಾದೇಶದ ನ್ಯಾಯಾಲಯದಿಂದ ನಿರಾಕರಣೆ

ಚಿತಗಾವ (ಬಾಂಗ್ಲಾದೇಶ) – ತಥಾಕಥಿತ ದೇಶದ್ರೋಹದ ಆರೋಪದಡಿಯಲ್ಲಿ ಬಂಧಿಸಲಾಗಿರುವ ಇಸ್ಕಾನ್‌ನ ಸದಸ್ಯ ಚಿನ್ಮಯ ಪ್ರಭು ಇವರ ಜಾಮೀನಿನ ಅರ್ಜಿಯ ಬಗ್ಗೆ ತ್ವರಿತ ವಿಚಾರಣೆ ನಡೆಸಲು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ. ಮಹಾನಗರ ಸೆಶನ್ಸ್ ನ್ಯಾಯಾಲಯವು, ಪ್ರಭು ಇವರ ಅರ್ಜಿಯನ್ನು ಈ ಹಿಂದೆ ನಿಶ್ಚಯಗೊಳಿಸಿರುವ ಜನವರಿ ೨, ೨೦೨೫ ರಂದು ವಿಚಾರಣೆ ನಡೆಸಲಾಗುವುದೆಂದು ಹೇಳಿದೆ.

೧. ಈ ಅರ್ಜಿಯಲ್ಲಿ ತ್ವರಿತ ವಿಚಾರಣೆ ನಡೆಸಲು ನ್ಯಾಯವಾದಿ ರವೀಂದ್ರ ಘೋಷ್ ಇವರು ನ್ಯಾಯಾಲಯಕ್ಕೆ ಆಗ್ರಹಿಸಿದ್ದರು. ಆದರೆ ಯಾವಾಗ ಇನ್ನೊಬ್ಬ ನ್ಯಾಯವಾದಿ ನ್ಯಾಯಾಲಯಕ್ಕೆ, ರವೀಂದ್ರ ಘೋಷ್ ಇವರ ಬಳಿ ಚಿನ್ಮಯ ಪ್ರಭು ಇವರ ಪ್ರತಿನಿಧಿಸುವ ಅಧಿಕೃತ ಪತ್ರವಿಲ್ಲ ಎಂದು ಸ್ಪಷ್ಟಪಡಿಸಿದಾಗ ನ್ಯಾಯಾಧೀಶರು ತ್ವರಿತ ವಿಚಾರಣೆ ಆಗ್ರಹಿಸಿರುವ ಅರ್ಜಿಯನ್ನು ತಳ್ಳಿ ಹಾಕಿದರು.

೨. ನ್ಯಾಯವಾದಿ ರವೀಂದ್ರ ಘೋಷ್ ಇವರು, ‘ಚಿನ್ಮಯ ಪ್ರಭು ಇವರಿಗೆ ಮಧುಮೇಹ, ಅಸ್ತಮಾ ಮತ್ತು ಇತರ ಕಾಯಿಲೆಯಿಂದ ಪೀಡಿತರಾಗಿದ್ದರೂ ಅವರನ್ನು ಸುಳ್ಳು ಮತ್ತು ನಕಲಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಈಗ ನಾನು ಜೈಲಿಗೆ ಹೋಗಿ ಚಿನ್ಮಯ ಪ್ರಭು ಇವರನ್ನು ಭೇಟಿ ಮಾಡುವೆನು ಮತ್ತು ಅವರಿಂದ ಮೊಕ್ಕದಮೆ ನಡೆಸುವ ಅಧಿಕಾರ ಪಡೆಯುವೆನು.’ ಎಂದು ಹೇಳಿದರು.

೩. ಅದರ ಮೊದಲು ಡಿಸೆಂಬರ್ ೩ ರಂದು ನಡೆಯುವ ವಿಚಾರಣೆಯನ್ನು ನ್ಯಾಯಾಲಯವು ಜನವರಿ ೨, ೨೦೨೫ ಕ್ಕೆ ಮುಂದೂಡಿತ್ತು; ಕಾರಣ ಆ ದಿನದಂದು ಭಯದ ಕಾರಣದಿಂದ ಚಿನ್ಮಯ ಪ್ರಭು ಇವರ ಪರವಾಗಿ ಯಾವ ವಕೀಲರು ನ್ಯಾಯಾಲಯದಲ್ಲಿ ಹಾಜರು ಇರಲಿಲ್ಲ. ಅವರ ಓರ್ವ ವಕೀಲರ ಮೇಲೆ ಒಂದು ದಿನದ ಹಿಂದೆಯೇ ಮಾರಣಾಂತಿಕ ದಾಳಿ ನಡೆದಿತ್ತು.

೪. ಚಿನ್ಮಯ ಪ್ರಭು ಇವರ ಸಹಯೋಗಿ ಸ್ವತಂತ್ರ ಗೌರಂಗ ದಾಸ ಮತ್ತು ಅವರ ಸಂಘಟನೆ ‘ಸನಾತನಿ ಜಾಗರಣ ಜೊತ’ನ ಸದಸ್ಯರು, ರಾಜಕೀಯ ದೃಷ್ಟಿಯಿಂದ ಪ್ರೇರಿತ ನ್ಯಾಯವಾದಿಗಳ ಗುಂಪಿನ ಒತ್ತಡ ಇರುವುದರಿಂದ ಮತ್ತು ಬೆದರಿಕೆ ದೊರೆತಿರುವುದರಿಂದ ಯಾವುದೇ ನ್ಯಾಯವಾದಿಯು ಪ್ರಭು ಇವರ ಪರವಾಗಿ ಬರಲಿಲ್ಲ ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಇಸ್ಲಾಮಿ ದೇಶದಲ್ಲಿ ನ್ಯಾಯಾಲಯಗಳಲ್ಲಿ ಕೂಡ ಹಿಂದುಗಳ ಮೇಲೆ ಕಾನೂನಿನ ಚೌಕಟ್ಟಿನಲ್ಲಿ ದೌರ್ಜನ್ಯ ನಡೆಸುತ್ತವೆ, ಎಂದು ಹೇಳಿದರೆ ತಪ್ಪಾಗಲಾರದು !