Afghanistan Refugees : ೧೨ ಸಾವಿರ ಅಫ್ಘಾನ್ ವಲಸಿಗರನ್ನು ಪಾಕಿಸ್ತಾನವು ಹೊರಹಾಕಿದೆ !– ಇರಾನ್

ಇಸ್ಲಾಮಾಬಾದ್ (ಪಾಕಿಸ್ತಾನ್)- ಇರಾನ್ ಮತ್ತು ಪಾಕಿಸ್ತಾನ ದೇಶಗಳು ಇತ್ತೀಚಿಗೆ ಸುಮಾರು ೧೨ ಸಾವಿರ ಅಫ್ಘಾನ್ ವಲಸಿಗರನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಿದ್ದಾರೆ. ನಮ್ಮ ಎಲ್ಲಾ ನಾಗರಿಕರು ಅಪಘಾನಿಸ್ತಾನಕ್ಕೆ ಹಿಂತಿರುಗಿ ಬಂದಿದ್ದಾರೆ ಎಂದು ಅಫ್ಘಾನಿಸ್ತಾನದ ಸಚಿವಾಲಯ ತಿಳಿಸಿದೆ. ಇನ್ನೊಂದೆಡೆ, ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್ ಎಮಿರಾಟ್ ದೇಶಗಳಲ್ಲಿ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿ ಮುಸಲ್ಮಾನರನ್ನು ಕೂಡ ಇದೇ ರೀತಿ ಪದೇ-ಪದೇ ವಾಪಸ್ ಕಳುಹಿಸಲಾಗುತ್ತದೆ.

  • ಇಸ್ಲಾಮಿಕ್ ದೇಶದಿಂದ ಬೇರೊಂದು ಇಸ್ಲಾಮಿಕ್ ದೇಶದಲ್ಲಿನ ಒಲಸಿಗ ಮುಸಲ್ಮಾನರನ್ನು ಹೊರಹಾಕಲಾಗುತ್ತದೆ ಆದರೆ ಇದರ ಬಗ್ಗೆ ಒಂದೇ ಒಂದು ಇಸ್ಲಾಮಿಕ್ ದೇಶ ಕೂಡ ಬಾಯಿ ತೆರೆಯುವುದಿಲ್ಲ. ಆದರೆ ಭಾರತದಿಂದ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರ ಮುಸಲ್ಮಾನರನ್ನು ವಾಪಸ್ ಕಳಿಸುವಂತೆ ಯಾರಾದರೂ ಆಗ್ರಹಿಸಿದರೆ; ಆಗ ದೇಶದಲ್ಲಿನ ಎಲ್ಲಾ ಡೋಂಗಿ ಜಾತ್ಯಾತೀತ ರಾಜಕೀಯ ಪಕ್ಷ ಮತ್ತು ಮುಸಲ್ಮಾನ ನಾಯಕರು ಬೀದಿಗಿಳಿದು ವಿರೋಧಿಸುತ್ತಾರೆ, ಇದನ್ನು ಗಮನದಲ್ಲಿಡಿ !
  • ಭಾರತದಿಂದ ಮುಸಲ್ಮಾನರನ್ನು ಓಡಿಸಲಾಗುವುದೆಂದು, ಸುಳ್ಳು ಪ್ರಚಾರ ಮಾಡುತ್ತಾ ನಾಗರಿಕತ್ವ ಸುಧಾರಣೆ ಕಾನೂನನ್ನು (ಸಿಎಎ) ವಿರೋಧಿಸುವವರು ಈಗ ಮೌನ ತಾಳಿದ್ದಾರೆ ಏಕೆ?
  • ಪ್ಯಾಲೆಸ್ತೀನ್ ವಿಷಯದಲ್ಲಿ ಇಸ್ರೇಲಿನ ವಿರೋಧ ಮಾಡುವವರು ಈಗ ಎಲ್ಲಿದ್ದಾರೆ ?