|
ನವ ದೆಹಲಿ – ರಾಷ್ಟ್ರೀಯ ತನಿಖಾ ದಳವು ಜಿಹಾದಿ ಭಯೋತ್ಪಾದಕ ಸಂಘಟನೆ ಜೈಶ್-ಏ-ಮಹಮ್ಮದ್ ಗೆ ಸಂಬಂಧಿತ ಪ್ರಕರಣದ ವಿಚಾರಣೆ ನಡೆಸುವಾಗ ದೇಶದಲ್ಲಿನ ಐದು ರಾಜ್ಯಗಳ ೧೯ ಸ್ಥಳಗಳಲ್ಲಿ ಡಿಸೆಂಬರ್ ೧೨ ರಂದು ದಾಳಿ ನಡೆದವು. ಜಮ್ಮು-ಕಾಶ್ಮೀರ, ಅಸ್ಸಾಂ, ಉತ್ತರಪ್ರದೇಶ, ಗುಜರಾತ ಮತ್ತು ಮಹಾರಾಷ್ಟ್ರ ಇಲ್ಲಿ ಈ ದಾಳಿಗಳು ನಡೆದಿವೆ. ಅದಕ್ಕಾಗಿ ಸ್ಥಳೀಯ ಉಗ್ರ ನಿಗ್ರಹ ದಳದ ಸಹಾಯ ಪಡೆಯಲಾಗಿದೆ. ಉತ್ತರಪ್ರದೇಶದಲ್ಲಿನ ಝಾನ್ಸಿಯಲ್ಲಿ ವಿದೇಶದಲ್ಲಿ ಧಾರ್ಮಿಕ ಶಿಕ್ಷಣಕ್ಕಾಗಿ ಆನ್ಲೈನ್ ಕಲಿಕೆ ನಡೆಸುವ ಮುಪ್ತಿ ಖಾಲಿದ್ ನದವಿ ಇವರ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಆ ಸಮಯದಲ್ಲಿ ಸ್ಥಳೀಯ ಮುಸಲ್ಮಾನರು ವಿಶೇಷವಾಗಿ ಮುಸಲ್ಮಾನ ಮಹಿಳೆಯರು ವಿರೋಧಿಸಿದರು. ಖಾಲಿದ ಇವರನ್ನು ವಿಚಾರಣೆಗಾಗಿ ಕರೆದುಕೊಂಡು ಹೋಗುವಾಗ ತಡೆಯುವ ಪ್ರಯತ್ನ ಮಾಡಿದರು.
೧. ಝಾನ್ಸಿ ಕೊತವಾಲಿ ಪರಿಸರದಲ್ಲಿ ವಾಸಿಸುವ ಖಾಲಿದ ಇವರ ಜೊತೆಗೆ ಮುಕರಾಯನ ಇಲ್ಲಿಯ ಚಿಕ್ಕ ಮಸೀದಿಯಲ್ಲಿ ವಾಸಿಸುವ ಅವರ ಸಂಬಂಧಿಕ ಸಾಬೀರ ನದವಿ ಇವರ ಮನೆಯ ಮೇಲೆ ಕೂಡ ದಾಳಿ ನಡೆಸಿ ಅವರ ವಿಚಾರಣೆ ನಡೆಸಲಾಯಿತು. ಸುಮಾರು ಗಂಟೆಗಳ ಕಾಲ ನಡೆದಿರುವ ವಿಚಾರಣೆಯ ನಂತರ ತಂಡದ ಅಧಿಕಾರಿಗಳು ಅವರನ್ನು ಪೊಲೀಸರ ಉಸ್ತುವಾರಿಗೆ ವಹಿಸಿದರು ಮತ್ತು ಅವರು ಖಾಲಿದನ ಜಾಗಕ್ಕೆ ತಲುಪಿದರು.
೨. ಮುಫ್ತಿ ಖಾಲಿದ ಇವರ ವಿಚಾರಣೆ ನಡೆಯುತ್ತಿರುವಾಗ ಸ್ಥಳೀಯ ಮುಸಲ್ಮಾನರು ಮಸೀದಿಯಿಂದ ಘೋಷಣೆ ನೀಡಿದರು. ಈ ಘೋಷಣೆಯ ನಂತರ ಮುಫ್ತಿ ಖಾಲಿದ ಇವರ ಮನೆಯ ಹೊರಗೆ ಜನಜಂಗುಳಿಯಾಯಿತು. ಮುಸಲ್ಮಾನರ ಗುಂಪಿನಿಂದ ಗದ್ದಲವಾಯಿತು. ಅವರು ತನಿಖಾ ಅಧಿಕಾರಿಗಳ ವಶದಲ್ಲಿರುವ ಮುಫ್ತಿ ಖಾಲಿದನನ್ನು ಬಿಡುಗಡೆ ಗೊಳಿಸಿದರು; ಆದರೆ ಅಧಿಕಾರಿಗಳು ಮುಫ್ತಿ ಖಾಲಿದನನ್ನು ಮತ್ತೆ ವಶಕ್ಕೆ ಪಡೆದರು. ಈ ಪ್ರಕರಣದ ಗಾಂಭೀರ್ಯಾ ಗಮನಿಸಿ ಬೃಹತ್ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ. ಪ್ರಸ್ತುತ ತನಿಖೆ ಮುಂದುವರೆದಿದೆ.
ಸಂಪಾದಕೀಯ ನಿಲುವು
|