ಲಂಡನ (ಬ್ರಿಟನ) – ಬ್ರಿಟನ ತನ್ನ ದೇಶಕ್ಕೆ ಬರುವ ಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇಂಡೋನೇಷ್ಯಾ ದೇಶದ ಮತಾಂಧ ಮುಸ್ಲಿಂ ಧಾರ್ಮಿಕ ಮುಖಂಡರ ಪ್ರವೇಶವನ್ನು ನಿರ್ಬಂಧಿಸಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ ಪ್ರಧಾನಮಂತ್ರಿ ರಿಷಿ ಸುನಕ ಅವರು ಯೋಜನೆಯನ್ನು ಸಿದ್ಧಪಡಿಸಿದ್ದು, ಈ ಯೋಜನೆಯಡಿಯಲ್ಲಿ ಒಂದು ಪಟ್ಟಿಯನ್ನು ತಯಾರಿಸಿದ್ದಾರೆ. ಪಟ್ಟಿಯಲ್ಲಿರುವ ಜನರಿಗೆ ಇನ್ನು ಮುಂದೆ ಬ್ರಿಟನನಲ್ಲಿ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.
1. ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ, ಬ್ರಿಟನ್‌ನಲ್ಲಿ ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ ಅನೇಕ ಪ್ರತಿಭಟನೆಗಳು ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿತ್ತು. ಆಗ ಬ್ರಿಟಿಷ ಸಂಸದರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದರು.
2. ಇತ್ತೀಚೆಗೆ ಬ್ರಿಟಿಷ್ ಸರಕಾರದ ಸಲಹೆಗಾರ ಲಾರ್ಡ ವಾಲೆ ಇವರು ಒಂದು ವರದಿಯಲ್ಲಿ, ಎಡ ಮತ್ತು ಕಟ್ಟರವಾದಿ ಗುಂಪು ಮುಸ್ಲಿಂ ಸಮುದಾಯದೊಂದಿಗೆ ಕೈಜೋಡಿಸುತ್ತಿದ್ದು, ಆ ಮೂಲಕ ಬ್ರಿಟನ್‌ಗೆ ಅಪಾಯವನ್ನು ನಿರ್ಮಾಣ ಮಾಡುವ ಸಂಚನ್ನು ರೂಪಿಸುತ್ತಿದೆ. ಇದರೊಂದಿಗೆ ಸಾಮ್ಯವಾದಿ ಮತ್ತು ಇಸ್ಲಾಮಿಕ್ ಕಟ್ಟರವಾದಿಗಳು ಕೂಡ ಈಗ ಅಷ್ಟೇ ಅಪಾಯಕಾರಿಯಾಗಿದ್ದಾರೆ.
3. ಬ್ರಿಟನ್ ಗೃಹಸಚಿವಾಲಯವು ಒಂದು ಮನವಿಯನ್ನು ಪ್ರಸಾರ ಮಾಡಿ, ಬ್ರಿಟನನಲ್ಲಿ ಕಟ್ಟರವಾದಕ್ಕೆ ಅವಕಾಶವಿಲ್ಲ ಎಂದು ಹೇಳಿದೆ. ನಾವು ಕಟ್ಟರವಾದವನ್ನು ಸಹಿಸುವುದಿಲ್ಲ. ಇತ್ತೀಚೆಗೆ ಕೆಲವೇ ತಿಂಗಳುಗಳಲ್ಲಿ, ಕೆಲವು ಜನರು ಹಿಂಸಾಚಾರವನ್ನು ಹರಡಲು ಸಂಚು ರೂಪಿಸಿದ್ದರು. ಅಂತಹ ಜನರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅವಕಾಶ ನೀಡಿದ್ದೇವೆ.
4. ಬ್ರಿಟನ್‌ನ ಮಾಜಿ ಗೃಹ ಸಚಿವರು ಇತ್ತೀಚೆಗೆ, ಕಟ್ಟರವಾದಿ ಗುಂಪುಗಳನ್ನು ನಿಷೇಧಿಸದಿದ್ದರೆ, ದೇಶದ ಭದ್ರತೆಗೆ ಗಂಭೀರ ಅಪಾಯವಿದೆ ಎಂದು ಹೇಳಿದ್ದರು.
Britain Rishi Sunak plans to ban South Asian Islamic preachers’ entry https://t.co/g5JTmV4f2b
— South Asian Journal (@sajournal1) March 3, 2024
ಸಂಪಾದಕೀಯ ನಿಲುವುಭಾರತದಲ್ಲಿ ಇಂತಹ ಧರ್ಮಾಂಧರನ್ನು ದೇಶದಿಂದ ಹೊರಗೆ ಅಟ್ಟುವ ಆವಶ್ಯಕತೆಯಿದೆ! |