ದುಬೈನಲ್ಲಿ ಅಡಗಿರುವ ಪರಾರಿಯಾಗಿರುವ ಗೂಂಡಾ ಪ್ರಿನ್ಸ್ ಖಾನ್‌ನಿಂದ ಬೆದರಿಕೆ; ಐ.ಎಸ್.ಐ. ಬಗ್ಗೆಯೂ ಉಲ್ಲೇಖ
ಬೋಧಗಯಾ (ಬಿಹಾರ) – ಇಲ್ಲಿನ ಮಹಾಬೋಧಿ ಮಂದಿರವನ್ನು ಬಾಂಬ್ ನಿಂದ ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಬೋಧಗಯಾ ಮಂದಿರ ಆಡಳಿತ ಸಮಿತಿಗೆ ಒಂದು ಪತ್ರದ ಮೂಲಕ ಈ ಬೆದರಿಕೆ ಬಂದಿದೆ. ಬೆದರಿಕೆಯ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೆದರಿಕೆ ಪತ್ರದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ಉಲ್ಲೇಖಿಸಲಾಗಿದೆ. ಬೆದರಿಕೆ ಪತ್ರದಲ್ಲಿ ಜಾರ್ಖಂಡ್‌ನ ಧನವಾಡ ಜಿಲ್ಲೆಯ ವಾಸೆಪುರದ ಕುಖ್ಯಾತ ಅಪರಾಧಿ ಪ್ರಿನ್ಸ್ ಖಾನ ಹೆಸರೂ ಇದೆ. ಬೆದರಿಕೆ ಬಂದ ನಂತರ ಗಯಾ ಪೊಲೀಸರ ತಂಡ ಧನಬಾದ ತಲುಪಿ ಪ್ರಿನ್ಸ್ ಖಾನ್ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿತು. ಸದ್ಯ ಪ್ರಿನ್ಸ್ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಹಿಂದೆ ಮಹಾಬೋಧಿ ಮಂದಿರದಲ್ಲಿ ಜಿಹಾದಿ ಭಯೋತ್ಪಾದಕರು ಮೇಲೆ ಬಾಂಬ್ ದಾಳಿ ನಡೆಸಿದ್ದರು.
ಪ್ರಿನ್ಸ್ ಖಾನ ಜಾರ್ಖಂಡ ರಾಜ್ಯದ ಧನಬಾದ ಮತ್ತು ಬೊಕಾರೊ ಜಿಲ್ಲೆಗಳಲ್ಲಿ ಉದ್ಯಮಿಗಳಿಗೆ ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿದ್ದನು. ಅವನ ಮೇಲೆ ರಿಯಲ ಎಸ್ಟೇಟ್ ಮಾಲೀಕರ ಹತ್ಯೆ ಮಾಡಿದ ಆರೋಪವಿದೆ. ಹಲವು ಅಪರಾಧಗಳಲ್ಲಿ ಅವನು ಪರಾರಿಯಾಗಿದ್ದು, ಧನಬಾದ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಧನಬಾದ ಪೊಲೀಸರು ಪ್ರಿನ್ಸ್ ಖಾನ ವಿರುದ್ಧ ‘ರೆಡ್ ಕಾರ್ನರ್ ನೋಟಿಸ್’ (ವಿಶ್ವದಾದ್ಯಂತ ಪೊಲೀಸ್ ಪಡೆಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಕಾಗಿರುವ ಜನರ ಬಗ್ಗೆ ಎಚ್ಚರಿಕೆ ನೀಡುವ ಸೂಚನೆ)ಜಾರಿ ಮಾಡಿದರು. ಅಲ್ಲದೆ, ಅವನ ಪಾಸ್ಪೋರ್ಟ್ ರದ್ದುಪಡಿಸಲಾಗಿದೆ.
ಸಂಪಾದಕೀಯ ನಿಲುವುಭಾರತದಲ್ಲಿ ಯಾರು ಬೇಕಾದರೂ ಬೆದರಿಕೆ ಹಾಕುತ್ತಾನೆ, ಇದು ಕಾನೂನು ಮತ್ತು ಸುವ್ಯವಸ್ಥೆಗೆ ಅಪಾಯಕಾರಿಯಾಗಿದೆ. ಇದನ್ನು ಹೆಚ್ಚು ಗಂಭೀರವಾಗಿ ನೋಡುವ ಅಗತ್ಯವಿದೆ ! |