ಕಾಬುಲ್ – ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಸರಕಾರವು ತಮ್ಮ ಕ್ರಿಕೆಟ್ ವಿಜಯದ ಉತ್ಸವ ಆಚರಿಸಿದ್ದಕ್ಕೆ ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತದ ಸಂಘಟನೆಯ ಭಯೋತ್ಪಾದಕರು ಆಕ್ರೋಶಗೊಂಡಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ದ ಅಲ್ ಅಝೀಮ ಎಂಬವನು, ‘ಕ್ರಿಕೆಟ್ ಇದು ಪಶ್ಚಿಮಾತ್ಯ ದೇಶಗಳು ಮುಸಲ್ಮಾನರ ವಿರುದ್ಧ ಆರಂಭಿಸಿರುವ ಬೌದ್ಧಿಕ ಯುದ್ಧವಾಗಿದೆ ಎಂದು ಹೇಳಿದ್ದಾನೆ. ತಾಲಿಬಾನ್ ಸರಕಾರ ಅಪಘಾನಿಸ್ತಾನ ಕ್ರಿಕೆಟ್ ಸಂಘಕ್ಕೆ ಪ್ರೋತ್ಸಾಹ ನೀಡುತ್ತಿದೆ. ಮುಸಲ್ಮಾನ ಯುವಕರು ಕ್ರಿಕೆಟ್ ಅಥವಾ ಇತರ ಯಾವುದೇ ರೀತಿಯ ಮನೋರಂಜನೆಯ ಬದಲು ಇಸ್ಲಾಮಿಕ್ ಸ್ಟೇಟ್ ನಲ್ಲಿ ಸಹಭಾಗಿ ಆಗಬೇಕು ಎಂದು ಹೇಳಿದ್ದಾನೆ.
ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಮತ್ತು ತಾಲಿಬಾನ್ ನಡುವೆ ಯುದ್ಧ !
ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಮತ್ತು ತಾಲಿಬಾನ್ ನಡುವೆ ಅಧಿಕಾರಕ್ಕಾಗಿ ಸಂಘರ್ಷ ನಡೆಯುತ್ತಿದೆ. ತಾಲಿಬಾನ್ ಅಪಘಾನಿಸ್ತಾನದಲ್ಲಿ ಅಧಿಕಾರ ಪಡೆದಾಗಿನಿಂದ ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ನಿಂದ ಅನೇಕ ದಾಳಿಗಳು ನಡೆದಿವೆ. ಈ ದಾಳಿಗಳಲ್ಲಿ ತಾಲಿಬಾನ್ ಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.
ಕೆಲವು ವಿಶ್ಲೇಷಕರ ಪ್ರಕಾರ, ಪಾಕಿಸ್ತಾನ್ ಸರಕಾರವು ತಾಲಿಬಾನದ ಮೇಲೆ ಹಿಡಿತ ಸಾಧಿಸುವುದಕ್ಕಾಗಿ ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಗೆ ಸಹಾಯ ಮಾಡುತ್ತಿದೆ.