Balochistan Freedom Struggle: ಭಾರತವು ಬಲೂಚಿಸ್ತಾನದ ಸ್ವಾತಂತ್ರ ಹೋರಾಟಕ್ಕೆ ಬೆಂಬಲಿಸಬೇಕು !

ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ ನ ನಾಯಕ ಅಲ್ಲಾಹ ನಜರ್ ಬಲೋಚ್ ಅವರ ಕರೆ

ತೆಹರಾನ (ಇರಾನ್) – ಪಾಕಿಸ್ತಾನದ ಸರಕಾರ ಬಲೂಚಿಸ್ತಾನದಲ್ಲಿನ ಬಲೂಚಿ ಜನರ ಮೇಲೆ ಕಳೆದ ೭ ವರ್ಷಗಳಿಂದ ದೌರ್ಜನ್ಯ ನಡೆಸುತ್ತಿದೆ. ಈ ಅತ್ಯಾಚಾರದಿಂದ ಬಲೂಚಿ ಜನರ ರಕ್ಷಣೆ ಮಾಡುವುದಕ್ಕಾಗಿ ಮತ್ತು ಪಾಕಿಸ್ತಾನದಿಂದ ಸ್ವಾತಂತ್ರ್ಯ ಕೊಡಿಸುವ ಹೋರಾಟದಲ್ಲಿ ಬಲುಚಿಸ್ತಾನ ಲಿಬ್ರೇಶನ್ ಫ್ರಂಟ್ ಸಂಘಟನೆಯು ತಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಭಾರತದ ಬೆಂಬಲ ಕೇಳುತ್ತಿದೆ. ಈ ಸಂಘಟನೆಯ ನಾಯಕ ಅಲ್ಲಾಹ ನಜರ್ ಬಲೋಚ್, ಪಾಕಿಸ್ತಾನದಿಂದ ಬಲುಚಿಸ್ತಾನವನ್ನು ಸ್ವತಂತ್ರಗೊಳಿಸುವ ಹೋರಾಟದಲ್ಲಿ ನಮ್ಮನ್ನು ಬೆಂಬಲಿಸುವಂತೆ ನಾವು ಸೌದಿ ಅರೇಬಿಯಾ , ಇರಾನ್, ಅಫ್ಘಾನಿಸ್ತಾನ್, ಮತ್ತು ಭಾರತ ದೇಶಗಳಿಗೆ ಕರೆ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಸೈನ್ಯವು ಸಾವಿರಾರು ಬಲೂಚಿಯರ ಅಪಹರಣ ಮಾಡಿ ಅವರ ಹತ್ಯೆ ಮಾಡಿದೆ ಎಂದು ಕೂಡ ಅಲ್ಲಾಹ ನಜರ್ ಆರೋಪಿಸಿದ್ದಾರೆ.

ಇರಾನಿನ ಆಶ್ರಯ ಪಡೆದ ಅಲ್ಲಾಹ್ ನಜರ್ ಬಲೋಚ್ ಅವರು ಮಾತು ಮುಂದುವರೆಸಿ:

೧ . ನಾವು ಯುರೋಪಿಯನ್ ಯೂನಿಯನ್, ಅಮೇರಿಕಾ, ಸಂಯುಕ್ತ ರಾಷ್ಟ್ರ ಸಂಘ ಮತ್ತು ಮಾನವಾಧಿಕಾರಿ ಸಂಘಟನೆ ಇವುಗಳ ಜೊತೆಗೆ ಅಂತರಾಷ್ಟ್ರೀಯ ಸಮುದಾಯಕ್ಕೂ ಕೂಡ ಪಾಕಿಸ್ತಾನದಿಂದ ಬಲೂಚ ಜನರ ಮೇಲೆ ನಡೆಯುವ ಮಾನವಾಧಿಕಾರ ಉಲ್ಲಂಘನೆ ತಡೆಯುವದಕ್ಕಾಗಿ ಕರೆ ನೀಡಿದ್ದೆವು .

೨ . ಸಾವಿರಾರು ವರ್ಷದಿಂದ ಬಲೂಚ ಜನರ ಒಂದು ವಿಶೇಷ ಸಂಸ್ಕೃತಿಕ ಮತ್ತು ಐತಿಹಾಸಿಕ ಗುರುತು ಇದೆ. ಅರಬ ದೇಶದ ಜನರ ಜೊತೆಗೆ ನಮ್ಮದು ಸೌಹಾರ್ದತೆಯ ಸಂಬಂಧವಿದೆ.

೩ . ಪಾಕಿಸ್ತಾನವು ಬಲೂಚಿಸ್ತಾನದ ಮೇಲೆ ೭೬ ವರ್ಷಗಳಿಂದ ಅಕ್ರಮ ಹಿಡಿತ ಸಾಧಿಸಿ ನಮ್ಮ ಜನರ ಮೇಲೆ ನಿಯೋಜಿತ ದೌರ್ಜನ್ಯ ಮತ್ತು ಹಿಂಸಾಚಾರ ನಡೆಸುತ್ತಿದೆ ಎಂದು ನಜರ್ ಆರೋಪಿಸಿದರು.

ಸಂಪಾದಕೀಯ ನಿಲುವು

ಖಲಿಸ್ತಾನ ಮತ್ತು ಕಾಶ್ಮೀರದ ಹೆಸರಿನಲ್ಲಿ ಭಾರತವನ್ನು ವಿಭಜನೆ ಮಾಡುವ ಶಕ್ತಿಗಳಿಗೆ ಪ್ರತ್ಯುತ್ತರ ನೀಡುವದಕ್ಕಾಗಿ ಭಾರತವು ಆ ದೃಷ್ಟಿಯಿಂದ ಪ್ರಯತ್ನ ಮಾಡಬೇಕೆಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ.