‘ಸಂವಿಧಾನ ದಿನ’ದ ಪ್ರಯುಕ್ತ ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ
ನವ ದೆಹಲಿ – ಸಂಸತ್ತಿನಲ್ಲಿ ‘ಸಂವಿಧಾನ ದಿನ’ ದ ಪ್ರಯುಕ್ತ ನಡೆದಿರುವ ಚರ್ಚೆಯ ಸಮಯದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಕಾಂಗ್ರೆಸ್ ಪಕ್ಷದ ಕುರಿತು ತೀವ್ರ ವಾಗ್ದಾಳಿ ನಡೆಸಿದರು. ಅವರು, ಕಾಂಗ್ರೆಸ್ಸಿನ ಜನರು ಸಂವಿಧಾನದ ರಕ್ಷಣೆಯ ಕುರಿತು ಮಾತನಾಡುತ್ತಾರೆ; ಆದರೆ ಅವರ ಅಧಿಕಾರ ಅವಧಿಯಲ್ಲಿ ಯಾರು ಸಂವಿಧಾನದ ಅವಮಾನ ಮಾಡಿದರು, ಇದನ್ನು ತಿಳಿದುಕೊಳ್ಳುವ ಅಗತ್ಯವಿದೆ. ಕಾಂಗ್ರೆಸ್ ಪಕ್ಷದ ಅಧಿಕಾರ ಅವಧಿಯಲ್ಲಿ ಒಟ್ಟು ೬೨ ಸಲ ಸಂವಿಧಾನ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪ ಮಾಡಿದರು. (೬೨ ಸಲ ದೇಶದ ಸಂವಿಧಾನ ತಿದ್ದುಪಡಿ ಮಾಡುವ ಕಾಂಗ್ರೆಸ್ ‘ಸಂವಿಧಾನ ಉಳಿಸಿ’ ಕುರಿತು ಮಾತನಾಡುತ್ತದೆ, ಇದು ಹಾಸ್ಯಸ್ಪದ ಅನಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ ? – ಸಂಪಾದಕರು)
ರಾಜನಾಥ ಸಿಂಹ ಇವರು ಮಾತು ಮುಂದುವರೆಸಿ, ಪಂಡಿತ ಜವಾಹರ ಲಾಲ ನೆಹರು ದೇಶದ ಪ್ರಧಾನಮಂತ್ರಿ ಆಗಿರುವಾಗ ೧೭ ಸಲ ಸಂವಿಧಾನ ತಿದ್ದುಪಡಿ ಮಾಡಿದರು. ಇಂದಿರಾ ಗಾಂಧಿ ಇವರ ಅವಧಿಯಲ್ಲಿ ೧೮ ಸಲ ತ್ತಿದ್ದುಪಡಿ ಮಾಡಲಾಯಿತು. ರಾಜೀವ ಗಾಂಧಿ ಇವರ ಅವಧಿಯಲ್ಲಿ ೧೦ ಸಲ ಮತ್ತು ಡಾ. ಮನಮೋಹನ ಸಿಂಹ ಇವರ ಕಾಲಾವಧಿಯಲ್ಲಿ ೭ ಸಲ ಸಂವಿಧಾನ ತಿದ್ದುಪಡಿ ಮಾಡಲಾಯಿತು.
ತತ್ಕಾಲಿನ ಕಾಂಗ್ರೆಸ್ ಸರಕಾರವು ಹೆಚ್ಚಿನ ಸಂವಿಧಾನ ತಿದ್ದುಪಡಿ ವಿರೋಧಕರು ಮತ್ತು ಟೀಕಿಸುವವರನ್ನು ಸುಮ್ಮನಿರಿಸುವುದಕ್ಕಾಗಿ ಅಥವಾ ತಪ್ಪಾದ ನೀತಿಯನ್ನು ಅಳವಡಿಸಿಕೊಳ್ಳುವುದಕ್ಕಾಗಿ ಮಾಡಿದ್ದರು ಎಂದು ರಾಜನಾಥ ಸಿಂಹ ಇವರು ಆರೋಪಿಸಿದರು.