Cow Smugglers Muslims Arrested : ಉತ್ತರಪ್ರದೇಶದಲ್ಲಿ ಮುಸಲ್ಮಾನ ಗೋಕಳ್ಳರಿಂದ ಹಿಂದೂ ವೇಷ ಧರಿಸಿ ಗೋರಕ್ಷಕರಂತೆ ನಟನೆ !

ಗೋಕಳ್ಳ ಸಾಗಾಣಿಕೆಯಲ್ಲಿ ಹಿಂದುಗಳು ಕೂಡ ಸಹಭಾಗಿ

ಬಾರಾಬಂಕಿ (ಉತ್ತರಪ್ರದೇಶ) – ಇಲ್ಲಿ ನಡೆದ ಚಕಮಕಿಯ ನಂತರ ಪೊಲೀಸರು ೭ ಮುಸಲ್ಮಾನ ಗೋಕಳ್ಳರಿಗೆ ಬಂಧಿಸಿದ್ದಾರೆ. ಈ ಎಲ್ಲರೂ ಹಿಂದೂ ಗೋರಕ್ಷಕರಂತೆ ನಟಿಸುತ್ತಾ ಗೋವುಗಳ ಕಳ್ಳ ಸಾಗಾಣಿಕೆ ಮಾಡುತ್ತಿದ್ದರು. ಗೋಹತ್ಯೆಗಾಗಿ ತೆಗೆದುಕೊಂಡು ಹೋಗುತ್ತಿರುವಾಗ ಅವರು ಸಮಾಜದವರಿಗೆ ಗೋರಕ್ಷಕರಂತೆ ತೋರಲು ಕೊರಳಿನಲ್ಲಿ ಕೇಸರಿ ಸ್ಕಾರ್ಫ್ ಕಟ್ಟಿ ಹಣೆಯ ಮೇಲೆ ತಿಲಕ ಹಚ್ಚುತ್ತಿದ್ದರು. ಅವರ ಮೇಲೆ ಹಿಂದೆ ಕೂಡ ಅನೇಕ ದೂರಗಳು ದಾಖಲಾಗಿವೆ. ಮುಸಲ್ಮಾನರಲ್ಲದೆ ಕೆಲವು ಹಿಂದುಗಳು ಕೂಡ ಗೋ ಕಳ್ಳ ಸಾಗಾಣಿಕೆಯಲ್ಲಿ ತೊಡಗಿರುವುದು ಕಂಡು ಬಂದಿದೆ. (ಹಿಂದೂಗಳೇ ಹಿಂದೂ ಧರ್ಮದ ನಿಜವಾದ ವೈರಿಗಳು ! – ಸಂಪಾದಕರು) ಅವರನ್ನು ಕೂಡ ಬಂಧಿಸಲಾಗಿದೆ.

೧. ಪೊಲೀಸರು, ಡಿಸೆಂಬರ್ ೮, ೨೦೨೪ ರಂದು ರಾತ್ರಿ ಅವರಿಗೆ ಇಲ್ಲಿಯ ಕಾಡಿನಲ್ಲಿ ಗೋಕಳ್ಳ ಸಾಗಾಣಿಕೆ ನಡೆಯುವ ಮಾಹಿತಿ ದೊರೆತಿತ್ತು. ನಂತರ ಪೊಲೀಸ ಪಡೆ ಘಟನಾಸ್ಥಳಕ್ಕೆ ತಲುಪಿದ ನಂತರ ಈ ಕಳ್ಳ ಸಾಗಾಣಿಕೆದಾರರು ಗುಂಡಿನ ದಾಳಿ ನಡೆಸಿದರು. ಅದಕ್ಕೆ ಪೊಲೀಸರು ಪ್ರತ್ಯುತ್ತರ ನೀಡಿದರು. ಈ ಗುಂಡಿನ ದಾಳಿಯಲ್ಲಿ ಸರವರ ಮತ್ತು ಗುಫರಾನ್ ಇವರ ಕಾಲಿಗೆ ಗುಂಡು ತಾಗಿ ಗಾಯಗೊಂಡರು. ಪೊಲೀಸರು ಅವರ ಜೊತೆಗೆ ಅಂಕುಲ್, ಉಮರ್, ನವಜಾನ್, ಇರ್ಫಾನ್ ಮತ್ತು ಅಝಿಝ ಇವರನ್ನು ಬಂಧಿಸಿದ್ದಾರೆ.

೨. ಪೊಲೀಸರು ಅವರಿಂದ ೨ ಪಿಸ್ತೂಲು ಮತ್ತು ಒಂದು ದೊಡ್ಡ ಚಾಕು ವಶಪಡಿಸಿಕೊಂಡಿದ್ದಾರೆ. ಅವರಿಂದ ಒಂದು ಹಸು ಕೂಡ ವಶ ಪಡಿಸಿಕೊಳ್ಳಲಾಗಿದೆ. ಈ ಮುಸಲ್ಮಾನ ಗೋವುಕಳ್ಳ ಸಾಗಾಣಿಕೆದಾರರು ಹತ್ತಿರದ ಪ್ರದೇಶದಿಂದ ಹಸುಗಳನ್ನು ಹಿಡಿದು ಹತ್ಯೆ ಮಾಡುತ್ತಿದ್ದರು. ಅದಕ್ಕಾಗಿ ಅವರು ಗೋರಕ್ಷಕರ ವೇಷ ಧರಿಸುತ್ತಿದ್ದರು. ಅವರ ಪ್ರಮುಖ ಉಮರ್ ಇವನು ಕೂಡ ಗೋರಕ್ಷಕನೆಂದು ನಂಬಿಸಿ ಹಸುಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದನು. ಆತ ಹಣೆಯ ಮೇಲೆ ತಿಲಕ ಹಚ್ಚಿಕೊಂಡು ಕೈಯಲ್ಲಿ ತ್ರಿಶೂಲ ಕೂಡ ಹಿಡಿಯುತ್ತಿದ್ದನು. ಅವನಿಗೆ ಯಾರಾದರೂ ಕೇಳಿದರೆ, ಅವನು ತಾನು ಗೋರಕ್ಷಕನೆಂದು ಹೇಳುತ್ತಿದ್ದನು.

ಗೋಕಳ್ಳ ಸಾಗಾಣಿಕೆಯಲ್ಲಿ ಹಿಂದುಗಳ ಕೂಡ ಸಹಭಾಗಿ

ಉತ್ತರ ಪ್ರದೇಶದ ಕೇಲವ ಮುಝಫ್ಫರನಗರ ಜಿಲ್ಲೆಯಲ್ಲಿ ಗೋಹತ್ಯೆ ಕಾನೂನಿನ ಅಡಿಯಲ್ಲಿ ದಾಖಲಿಸುವ ದೂರಿನಲ್ಲಿ ಹಿಂದುಗಳ ಸಹಭಾಗದ ಶೇಕಡಾವಾರು ಸುಮಾರು ೧೫ ರಷ್ಟು ಇದೆ. ಈ ವರ್ಷ ಜನವರಿಯಿಂದ ನವೆಂಬರ್ ಈ ಕಾಲಾವಧಿಯಲ್ಲಿ ಜಿಲ್ಲೆಯಲ್ಲಿನ ವಿವಿಧ ಪೊಲೀಸ ಠಾಣೆಯಲ್ಲಿ ಗೋಹತ್ಯೆ ಕಾನೂನಿನ ಅಡಿಯಲ್ಲಿ ಒಟ್ಟು ೨೭ ದೂರುಗಳು ದಾಖಲಿಸಲಾಗಿವೆ. ಇವರಲ್ಲಿ ೪ ಹಿಂದೂ ಆರೋಪಿಗಳಿದ್ದಾರೆ. ಈ ಪ್ರಕರಣದಲ್ಲಿನ ಹಿಂದೂ ಆರೋಪಿಗಳು ಗೋಮಾಂಸ ಸಾಗಾಣಿಕೆ ಮತ್ತು ಜೀವಂತ ಹಸುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದು ಮತ್ತು ಹಸುಗಳ ಖರೀದಿ ಮಾರಾಟ ಮಾಡುವುದು ಇಂತಹದರಲ್ಲಿ ತೊಡಗಿದ್ದರು.

ಧರ್ಮಶಿಕ್ಷಣದ ಕೊರತೆಯಿಂದ ಹಿಂದುಗಳು ಗೋಕಳ್ಳ ಸಾಗಾಣಿಕೆಯಲ್ಲಿ ತೊಡಗುತ್ತಾರೆ  ! –  ನಿರಂಜನಿ ಅಖಾಡಾದ ಮಹಾಮಂಡಲೇಶ್ವರ ಸ್ವಾಮಿ ವೇದಮೂರ್ತಿನಂದ ಸರಸ್ವತಿ

ನಿರಂಜನಿ ಅಖಾಡಾದ ಮಹಾಮಂಡಲೇಶ್ವರ ಸ್ವಾಮಿ ವೇದಮೂರ್ತಿನಂದ ಸರಸ್ವತಿ ಇವರು, ಪ್ರಸ್ತುತ ಹಿಂದೂ ಪೋಷಕರು ಅವರ ಮಕ್ಕಳಿಗೆ ಆಧುನಿಕ ಗೊಳಿಸಲು ಸಂಸ್ಕಾರದಿಂದ ವಂಚಿತಗೊಳಿಸುತ್ತಿದ್ದಾರೆ. ಯಾರ ತಾಯಿ ತಂದೆ ಅವರ ಮಕ್ಕಳಿಗೆ ಧರ್ಮ, ಗೋವು, ಗಂಗೆ, ಗೀತೆ ಮುಂತಾದ ಕಥೆಗಳು ಎಂದೂ ಕಲಿಸಲಿಲ್ಲ, ಅದೇ ಮಕ್ಕಳು ಕಾಲಂತರದಲ್ಲಿ ಗೋಹತ್ಯೆಯಂತಹ ಪಾಪದಲ್ಲಿ ಸಿಲುಕುತ್ತಾರೆ. ಗೋ ಹತ್ಯೆ ಮತ್ತು ಗೋ ಕಳ್ಳ ಸಾಗಾಣಿಕೆಯಲ್ಲಿ ತೊಡಗುತ್ತಿರುವ ಹೆಚ್ಚುತ್ತಿರುವ ಹಿಂದೂಗಳ ಸಂಖ್ಯೆಯ ಕುರಿತು ಆತಂಕ ಅನಿಸುತ್ತಿದ್ದು ಪ್ರಯಾಗರಾಜದ ಮಹಾಕುಂಭಮೇಳದಲ್ಲಿ ಈ ವಿಷಯದ ಕುರಿತು ಎಲ್ಲಾ ಸಂತರ ಜೊತೆಗೆ ಆಳವಾದ ವಿಚಾರ ಮಂಥನ ನಡೆಸಲಾಗುವುದು ಮತ್ತು ಉಪಾಯ ಹುಡುಕಲಾಗುವುದು ಎಂದು ಹೇಳಿದರು.

ಕೆಲವು ಹಿಂದುಗಳನ್ನು ದಾಳವನ್ನಾಗಿ ಉಪಯೋಗಿಸಿ ಸಂಪೂರ್ಣ ಸಮಾಜಕ್ಕೆ ಬೆರಳು ತೋರಿಸುವ ಷಡ್ಯಂತ್ರ ರೂಪಿಸುವವರ ಉದ್ದೇಶ ಪೂರ್ಣಗೊಳ್ಳುವುದಿಲ್ಲ ! – ಶಾಸಕ ಟಿ. ರಾಜಸಿಂಹ

ಭಾಜಪದ ಶಾಸಕ ಟಿ. ರಾಜಸಿಂಹ

ಭಾಗ್ಯನಗರದ ಭಾಜಪದ ಶಾಸಕ ಟಿ. ರಾಜಸಿಂಹ ಇವರು ಇದರ ಕುರಿತು, ಗೋ ಹತ್ಯೆಯ ಬೇರಿನಲ್ಲಿ ಮುಸಲ್ಮಾನ ಜನಾಂಗದಲ್ಲಿನ ಉಗ್ರರು ಇದ್ದಾರೆ; ಆದರೆ ಅವರು ಅತ್ಯಂತ ಬಡ ಹಿಂದುಗಳಿಗೆ ಆಮಿಷ ತೋರಿಸಿ ಅವರನ್ನು ಗುರಾಣಿಯಾಗಿ ಉಪಯೋಗಿಸುತ್ತಾರೆ. ಯಾರಿಗೆ ಗೋವುಗಳ ಮಹತ್ವ ತಿಳಿದಿಲ್ಲ ಮತ್ತು ಅವರು ಕಡು ಬಡವರಾಗಿದ್ದಾರೆ, ಅದೇ ಹಿಂದುಗಳು ಗೋಕಳ್ಳ ಸಾಗಾಣಿಕೆ ನಡೆಸುತ್ತಾರೆ. ಗೋ ಕಳ್ಳ ಸಾಗಾಣಿಕೆಗಾಗಿ ಉಪಯೋಗಿಸುವ ವಾಹನದ ಚಾಲಕರು ಮತ್ತು ಕ್ಲೀನರ್ (ಸಹಾಯಕ) ಇವರ ಜೊತೆಗೆ ಕಳ್ಳ ಸಾಗಾಣಿಕೆಯಲ್ಲಿ ಉಪಯೋಗಿಸುವ ಕೂಲಿಗಾರರು ಕೂಡ ಹಿಂದುಗಳಾಗಿರುತ್ತಾರೆ. ಮುಸಲ್ಮಾನರು ಬಂಧನಕ್ಕೊಳಗಾದರೆ ದಾಳಿಗಳನ್ನು ತಡೆಯುವುದಕ್ಕಾಗಿ ಈ ಹಿಂದುಗಳು ಸಹಾಯಕರಾಗುತ್ತಾರೆ. ಯಾವುದೇ ಹಿಂದೂ ಗೋ ಹತ್ಯೆಗೆ ಬೆಂಬಲಿಸುವುದಿಲ್ಲ. ಗೋವನ್ನು ಮಾತೆ ಎಂದು ನಂಬಿದ್ದಾರೆ ಮತ್ತು ಅದನ್ನು ಕತ್ತರಿಸುವವನು ಧರ್ಮದ ಶತ್ರು ಎಂದು ನಂಬುತ್ತಾನೆ. ಕೆಲವು ಹಿಂದುಗಳನ್ನು ದಾಳವಾಗಿ ಉಪಯೋಗಿಸಿ ಸಂಪೂರ್ಣ ಸಮಾಜಕ್ಕೆ ಬೊಟ್ಟು ಮಾಡುವ ಷಡ್ಯಂತ್ರ ರಚಿಸುವವರ ಉದ್ದೇಶ ಪೂರ್ಣವಾಗುವುದಿಲ್ಲ ಎಂದು ಹೇಳಿದರು.

ಗೋಕಳ್ಳ ಸಾಗಾಣಿಕೆಗಾಗಿ ಅಪ್ರಾಪ್ತ ಹಿಂದೂ ಹುಡುಗರ ಬ್ರೈನ್ ವಾಶ್

ಓರ್ವ ಪೊಲೀಸ್ ಅಧಿಕಾರಿಯು, ಗೋ ಹತ್ಯೆ ನಡೆಸುವ ಅಪ್ರಾಪ್ತ ಹಿಂದೂ ಹುಡುಗರ ಬ್ರೈನ್ ವಾಶ್ ಮಾಡಲಾಗುತ್ತದೆ ಮತ್ತು ಕೇವಲ ಅವರಿಗೆ ೨೦೦ ರಿಂದ ೫೦೦ ರೂಪಾಯಿಯಲ್ಲಿ ಗೋ ಹತ್ಯೆಂತಹ ಅಪರಾಧದಲ್ಲಿ ತೊಡಗಿಸುತ್ತಾರೆ. ಈ ಅಪ್ರಾಪ್ತ ಹುಡುಗರು ದಿನವಿಡಿ ವಿವಿಧ ಪ್ರದೇಶದಲ್ಲಿ ತಿರುಗಾಡಲು ಪ್ರತಿದಿನ ೨೦೦ ರಿಂದ ೫೦೦ ರೂಪಾಯಿ ನೀಡುತ್ತಿದ್ದರು. ಅವರಿಗೆ ಯಾವುದೇ ಅಸಹಾಯಕ ಹಸು ಕಂಡರೆ, ಆಗ ತಕ್ಷಣ ಮರಕ್ಕೆ ಕಟ್ಟಿ ಫೋನ್ ಮೂಲಕ ಮಾಹಿತಿ ನೀಡಬೇಕೆಂದು ಹೇಳಲಾಗಿದೆ. ಹಸುವನ್ನು ಕಟ್ಟಿ ಹಾಕಿದ ನಂತರ ಗೋ ಹತ್ಯೆ ನಡೆಸುವವರು ಅವರನ್ನು ಅವರ ವಾಹನದಲ್ಲಿ ತುರುಕಿ ಗೋಹತ್ಯೆಗಾಗಿ ದೂರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾರೆ.

ಸಂಪಾದಕೀಯ ನಿಲುವು

ವಂಚನೆಯಲ್ಲಿ ಜಾಣರಿರುವ ಮತಾಂಧ ಮುಸಲ್ಮಾನರು ! ಕಾನೂನಿನಲ್ಲಿ ಗೋಕಳ್ಳ ಸಾಗಾಣಿಕೆಯವರಿಗೆ ಗಲ್ಲು ಶಿಕ್ಷೆ ವಿಧಿಸುವ ವ್ಯವಸ್ಥೆ ರೂಪಿಸಿ ಅದನ್ನು ಕಾರ್ಯರೂಪಕ್ಕೆ ತಂದರೆ ಆಗ ಕೆಲವೇ ದಿನದಲ್ಲಿ ಗೋ ಕಳ್ಳ ಸಾಗಾಣಿಕೆ ಬೇರುಸಹಿತ ನಾಶವಾಗುವುದು !