Sri Bagalamukhi Devi Mahayaga : ಜಗತ್ತಿನಾದ್ಯಂತದ ಜಿಹಾದಿಗಳ ನಾಶಕ್ಕಾಗಿ ಶ್ರೀ ಬಗಲಾಮುಖಿ ದೇವಿಯ ಮಹಾಯಗ

ಹರಿದ್ವಾರ (ಉತ್ತರಾಖಂಡ) – ಬಾಂಗ್ಲಾದೇಶದ ಹಿಂದುಗಳ ಮೇಲೆ ಕಳೆದ ಆಗಸ್ಟ್ ತಿಂಗಳಿಂದ ದಾಳಿಗಳು ನಡೆಯುತ್ತಿವೆ. ಭಾರತ ಸಹಿತ ವಿದೇಶದಿಂದಲೂ ಇದನ್ನು ಖಂಡಿಸಲಾಗುತ್ತಿದೆ. ಅನೇಕ ಸ್ಥಳಗಳಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಹಿಂದೂಗಳ ರಕ್ಷಣೆಗಾಗಿ ಆಗ್ರಹಿಸಲಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಹರಿದ್ವಾರದಲ್ಲಿ ಜಿಹಾದದ ವಿರೋಧದಲ್ಲಿ ಯಾಗ ಮಾಡಲಾಗುತ್ತಿದೆ. ಶ್ರೀ ಪಂಚದಶನಾಮ ಜುನಾ ಅಖಾಡಾದ ಭೈರವ ಘಾಟದಲ್ಲಿ ಡಿಸೆಂಬರ್ ೧೨ ರಂದು ಶ್ರೀ ಬಗಲಾಮುಖಿ ದೇವಿಯ ‘ಮಹಾಯಾಗ’ ಆರಂಭ ಮಾಡಲಾಗಿದೆ. ಜುನಾ ಆಖಾಡದ ಮಹಾಮಂಡಲೇಶ್ವರ ಮತ್ತು ಗಾಝಿಯಾಬಾದ್ (ಉತ್ತರ ಪ್ರದೇಶ) ಇಲ್ಲಿಯ ಡಾಸನಾ ದೇವಸ್ಥಾನದ ಅರ್ಚಕ ಯತಿ ನರಸಿಂಹನಂದ ಗಿರಿ ಇವರು ಈ ಯಾಗದ ಆಯೋಜನೆ ಮಾಡಿದ್ದಾರೆ. ಡಿಸೆಂಬರ್ ೨೧ ರಂದು ಯಾಗ ಮುಕ್ತಾಯವಾಗುವುದು. ಅವರು ಸನಾತನ ಧರ್ಮದ ಅನುಯಾಯಿಗಳಿಗೆ ಮಹಾಯಾಗದಲ್ಲಿ ಸಹಭಾಗಿ ಆಗಲು ಆಮಂತ್ರಣ ನೀಡಿದ್ದಾರೆ.

೧. ಯತಿ ನರಸಿಂಹ ಸರಸ್ವತಿ ಇವರು, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಭಾರತದಲ್ಲಿ ಹಿಂದುಗಳ ಹತ್ಯೆ ನಡೆಸುವ ಜಿಹಾದಿಗಳ ಸಂಪೂರ್ಣ ನಾಶ ಮಾಡದೆ ‘ಮನುಷ್ಯತ್ವ’ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.

೨. ಮಹಾಮಂಡಲೇಶ್ವರ ಯತಿ ನರಸಿಂಹನಂದ ಇವರು ಬಗಲಾಮುಖಿ ದೇವಿಗೆ, ಹೇ ಮಾತೆ, ನಮ್ಮೆಲ್ಲರ ರಕ್ಷಣೆ ಮಾಡು, ನಮ್ಮ ಧರ್ಮದ ಶತ್ರುಗಳ ನಾಶ ಮಾಡು, ಬಾಂಗ್ಲಾದೇಶದಲ್ಲಿ ನಮ್ಮ ಧರ್ಮದ ರಕ್ಷಣೆ ಮಾಡು. ಬಾಂಗ್ಲಾದೇಶದಲ್ಲಿನ ನಮ್ಮ ಸನಾತನಿ ಧರ್ಮ ಬಾಂಧವರ ರಕ್ಷಣೆ ಮಾಡು’ ಎಂದು ಪ್ರಾರ್ಥನೆ ಮಾಡಿದ್ದಾರೆ.

೩. ಸಾಧ್ವಿ ಋತಂಭರಾ ಇವರು ಕೇಂದ್ರ ಸರಕಾರಕ್ಕೆ ಬಾಂಗ್ಲಾದೇಶದ ಮೇಲೆ ಒತ್ತಡ ತರಲು ಹೇಳಿದ್ದಾರೆ, ಹಾಗೂ ವಿಶ್ವಸಂಸ್ಥೆಯು ಈ ಘಟನೆಯ ಕುರಿತು ಮೌನ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು, ಬಾಂಗ್ಲಾದೇಶದಲ್ಲಿನ ಎಲ್ಲಾ ವಯಸ್ಸಿನ ಮಹಿಳೆಯರ ಮೇಲೆ ಬಲಾತ್ಕಾರ ಮತ್ತು ದುರ್ವರ್ತನೆ ನಡೆಸುತ್ತಿದ್ದಾರೆ, ಇದು ಸಂಪೂರ್ಣ ಹಿಂದೂ ಸಮಾಜದ ದೌರ್ಭಾಗ್ಯವಾಗಿದೆ.

೪. ಅಂತಾರಾಷ್ಟ್ರೀಯ ಧರ್ಮ ಸಂಸತ್ತಿನ ಮುಖ್ಯ ಸಂಯೋಜಕ ಉದಿತಾ ತ್ಯಾಗಿ ಮತ್ತು ಜುನಾ ಅಖಾಡಾದ ಕೋಠಾರಿ ಶ್ರೀ ಮಹಂತ ಮಹಾಕಾಲ ಗಿರಿ ಇವರು ಮಹಾಯಾಗದಲ್ಲಿ ಸಹಭಾಗಿದ್ದಾರೆ.

ಸಂಪಾದಕೀಯ ನಿಲುವು

ಕ್ರಿಕೆಟ್ ಪಂದ್ಯ ಗೆಲ್ಲುವುದಕ್ಕಾಗಿ, ರಾಜಕೀಯ ನಾಯಕರು ಗೆಲುವಿಗಾಗಿ ಯಜ್ಞ ಮಾಡುವ ಹಿಂದುಗಳು ಈಗ ಜಗತ್ತಿನಾದ್ಯಂತದ ಇರುವ ಹಿಂದುಗಳ ರಕ್ಷಣೆಗಾಗಿ ಮತ್ತು ಜಿಹಾದಿಗಳ ನಾಶಕ್ಕಾಗಿ ಈ ರೀತಿ ಯಜ್ಞ ಮಾಡುವುದು ಆವಶ್ಯಕವಾಗಿದೆ !