ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಇವನ ಬ್ಯಾಂಕ್ ಖಾತೆ ವಿವರಗಳನ್ನು ಭಾರತಕ್ಕೆ ನೀಡಲು ಅಮೇರಿಕಾ ನಿರಾಕರಣೆ!

ವಾಷಿಂಗ್ಟನ್ (ಅಮೇರಿಕಾ) – “ಸಿಖ್ಸ್ ಫಾರ್ ಜಸ್ಟೀಸ್” ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತವಂತ ಸಿಂಗ್ ಪನ್ನುವಿನ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಲು ಅಮೇರಿಕಾ ನಿರಾಕರಿಸಿದೆ. ಪನ್ನು ಅಮೇರಿಕಾ ಮತ್ತು ಕೆನಡಾದ ಪೌರತ್ವವನ್ನು ಹೊಂದಿದ್ದಾನೆ. ಸಧ್ಯ ಅವನು ಅಮೇರಿಕಾದಲ್ಲಿ ವಾಸಿಸುತ್ತಿದ್ದಾನೆ. ಭಾರತವು ಪನ್ನು ಮತ್ತು ಆತನ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಭಾರತಕ್ಕೆ ಅನೇಕ ಪ್ರಕರಣಗಳಲ್ಲಿ ಅವನು ಬೇಕಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಭಾರತವು ಪನ್ನುವನ್ನು ಹಸ್ತಾಂತರಿಸುವಂತೆ ಅಮೇರಿಕಾವನ್ನು ಒತ್ತಾಯಿಸಿತ್ತು; ಆದರೆ ಅಮೇರಿಕಾ ಅದನ್ನು ತಿರಸ್ಕರಿಸಿದೆ ಮತ್ತು ಆತನ ಬ್ಯಾಂಕ್ ಖಾತೆಗಳ ವಿವರಗಳನ್ನು ಒದಗಿಸುವ ಬೇಡಿಕೆಯನ್ನೂ ತಿರಸ್ಕರಿಸಿದೆ. ಇದಕ್ಕಾಗಿ ಅಮೇರಿಕಾ ಸ್ಥಳೀಯ ಕಾನೂನುಗಳ ನೆಪವೊಡ್ಡಿದೆ.

1. ಆಗಸ್ಟ್ 14, 2020 ರಂದು, ಪಂಜಾಬ್ ಮೋಗಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಥಾಕಥಿತ ಖಲಿಸ್ತಾನಿ ಧ್ವಜವನ್ನು ಹಾರಿಸಲಾಗಿತ್ತು.

2. ಗುರುಪತವಂತ ಸಿಂಗ್ ಪನ್ನು ಆ ಸಮಯದಲ್ಲಿ ಈ ರೀತಿ ಖಲಿಸ್ತಾನಿ ಧ್ವಜ ಹಾರಿಸುವವರಿಗೆ ಎರಡೂವರೆ ಸಾವಿರ ಡಾಲರ್ (ಸುಮಾರು 2 ಲಕ್ಷ 12 ಸಾವಿರ) ನೀಡುವುದಾಗಿ ಅಂದು ಘೋಷಿಸಿದ್ದನು.

3. ಅವನ ಘೋಷಣೆಗೆ ಮರುಳಾಗಿ ಇಬ್ಬರು ವ್ಯಕ್ತಿಗಳು ಈ ಕೃತ್ಯ ಎಸಗಿದ್ದರು ಎಂದು ಪಂಜಾಬ್ ಪೊಲೀಸರು ಮಾಹಿತಿ ನೀಡಿದ್ದಾರೆ.

4. ಈ ಪ್ರಕರಣದಲ್ಲಿ ಭಾರತದ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪನ್ನುವಿನ ಬ್ಯಾಂಕ್ ಖಾತೆ ಮತ್ತು ಅವನ ಮೊಬೈಲ ಸಂಖ್ಯೆಯ ಬಗ್ಗೆ ಮಾಹಿತಿ ನೀಡುವಂತೆ ಅಮೇರಿಕೆಯನ್ನು ಕೋರಿತ್ತು.

5. ‘ಇಂತಹ ಅಪರಾಧಗಳಿಗೆ ಅಮೇರಿಕೆಯ ಕಾನೂನಿನಡಿಯಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಶಿಕ್ಷೆ ಅವಧಿ ವಿಧಿಸಲಾಗುತ್ತದೆ. ಹೀಗಾಗಿ ಅದರ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಅಮೇರಿಕಾ ಆಡಳಿತದ ನಿಲುವು ತಾಳಿದೆ.

ಸಂಪಾದಕೀಯ ನಿಲುವು

ಅಮೇರಿಕಾದಿಂದ ಖಲಿಸ್ತಾನಿ ಭಯೋತ್ಪಾದಕರಿಗೆ ಪ್ರೇರೆಪಿಸುವುದಲ್ಲ, ಬದಲಾಗಿ ಬೆಂಬಲಿಸುತ್ತದೆಯೆಂದು ಇದರಿಂದ ಗಮನಕ್ಕೆ ಬರುತ್ತದೆ. ಇಂತಹ ಅಮೇರಿಕಾಗೆ ಪಾಠ ಕಲಿಸಲು ಭಾರತವು ಏಟಿಗೆ ಎದುರೇಟು ನೀಡಬೇಕು !